Home ಜಿಲ್ಲೆ ಕಲಬುರಗಿ ಪಾಲಕರು ಸಂಸ್ಕಾರವಂತರಾದಾಗ ಮಾತ್ರ ಮಕ್ಕಳ ಜೀವನ ಉಜ್ವಲ: ಗುಂಡಪೇಲ್ಲಿ ಶ್ರೀಗಳು

ಪಾಲಕರು ಸಂಸ್ಕಾರವಂತರಾದಾಗ ಮಾತ್ರ ಮಕ್ಕಳ ಜೀವನ ಉಜ್ವಲ: ಗುಂಡಪೇಲ್ಲಿ ಶ್ರೀಗಳು

ಸೇಡಂ, ಏ,23:ಮಕ್ಕಳು ಅನುಕರಣೆಯ ಜೀವಿಗಳು. ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು ಎಂಬಂತೆ ಪಾಲಕರು ಸಂಸ್ಕಾರವಂತರು ಮತ್ತು ಆಚಾರವಂತರಾಗಿದ್ದಾಗ ಮಾತ್ರ ಮಕ್ಕಳಲ್ಲಿ ಉತ್ತಮ ಗುಣಗಳನ್ನು ಬೆಳೆಸಲು ಸಾಧ್ಯ ಎಂದು ಗುಂಡೇಪಲ್ಲಿಯ ಶ್ರೀ ಸಿದ್ದಿ ಸೋಮೇಶ್ವರ ಶಿವಾಚಾರ್ಯರು ಹೇಳಿದರು.
ಇಲ್ಲಿನ ಬಸವೇಶ್ವರ ವೃತ್ತದ ಹಿಂದುಗಡೆ ಬಸವ ಜಯಂತಿ ನಿಮಿತ್ಯವಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕ ಘಟಕದ ವತಿಯಿಂದ ಹಮ್ಮಿಕೊಂಡಿರುವ ಆಧ್ಯಾತ್ಮಿಕ ಪ್ರವಚನದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಮಕ್ಕಳಿಗೆ ಉಪದೇಶ ಮಾಡುವುದಕ್ಕಿಂತ ಹೆಚ್ಚಾಗಿ, ಪಾಲಕರು ತಮ್ಮ ದೈನಂದಿನ ಜೀವನದಲ್ಲಿ ಶಿಸ್ತು, ಧರ್ಮ ಮತ್ತು ನೈತಿಕತೆಯನ್ನು ಪಾಲಿಸಿದರೆ ಮಕ್ಕಳು ಅದನ್ನು ಸಹಜವಾಗಿಯೇ ರೂಢಿಸಿಕೊಳ್ಳುತ್ತಾರೆ ಎಂದರು. ಕಾರ್ಯಕ್ರಮದಲ್ಲಿ ಮಳಖೇಡ ಮೂಲಾಧಾರ ಬೃಹನ್ಮಠದ ಷ ಬ್ರ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು. ಶ್ರೀ ಮಹಾತ್ಮ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ನಾ ಅಧ್ಯಕ್ಷರಾದ (ಜಿಕೆ) ಶಿವಕುಮಾರ ಪಾಟೀಲ್ ತೇಲ್ಕೂರ್ , ನಿಕಟಪರ್ವ ಸಂಘದ ಅಧ್ಯಕ್ಷರಾದ ಶರಣಬಸಪ್ಪ ಹಾಗರಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು.ಈ ವೇಳೆಯಲ್ಲಿ ವಿವಿಧ ಸಾಮಾಜ ಮುಖಂಡರು ಇದ್ದರು