
ಚಿನ್ನೈ,ಮೇ.೧೦-ಇಂದು ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇಂದು ಅಂತರರಾಷ್ಟ್ರೀಯ ತಾಯಂದಿರ ದಿನವನ್ನು ಆಚರಿಸಲಾಗುತ್ತಿದ್ದು, ಈ ದಿನದಂದು ವಿಜಯ್ ಪ್ರಮಾಣ ವಚನ ಸ್ವೀಕರಿಸುವುದನ್ನು ನೋಡಿ ಸಂತೋಷವಾಗಿದೆ ಭಾವನಾತ್ಮಕವಾಗಿ ವಿಶೇಷ ಸಂದರ್ಭ ಎಂದು ಅವರ ತಾಯಿ ಶೋಭಾ ಚಂದ್ರಶೇಖರ್ ಹೇಳಿದ್ದಾರೆ.
ತಮಿಳುಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಕ್ಕೆ ಅವರ ಕುಟುಂಬವು ಅಪಾರ ಸಂತೋಷ ಮತ್ತು ಹೆಮ್ಮೆಯನ್ನು ವ್ಯಕ್ತಪಡಿಸಿದೆ. ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ ತಮ್ಮ ಮಗನ ಹೊಸ ಪಾತ್ರದ ಬಗ್ಗೆ ಅಪಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಾಯಂದಿರ ದಿನದಂದು ಮಗ ಅಮೂಲ್ಯ ಉಡುಗೊರೆ ನೀಡಿದ ಈ ಉಡುಗೊರೆ ಮರೆಯಲಾಗದ ಉಡುಗೊರೆ ತಮಿಳುನಾಡಿನ ಜನತೆ ಚುನಾವಣಾ ಸಮಯದಲ್ಲಿ ಮಗ ನೀಡಿದ ಭರವಸೆಗಳನ್ನು ಈಡೇರಿಸಿ ಉತ್ತಮ ಆಡಳಿತ ನೀಡಲಿ ಎಂದು ಹಾರೈಸಿದ್ದಾರೆ.
ವಿಜಯ್ ಅವರ ತಂದೆ ಮತ್ತು ಹಿರಿಯ ಚಲನಚಿತ್ರ ನಿರ್ಮಾಪಕ ಎಸ್.ಎ. ಚಂದ್ರಶೇಖರ್ ಭಾವುಕರಾಗಿ ಕಾಣಿಸಿಕೊಂಡಿದ್ದಾರೆ ತಂದೆಯಾಗಿ ಇದು ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ ಅವರು, “ನನಗೆ ತುಂಬಾ ಸಂತೋಷವಾಗಿದೆ… ನನ್ನ ಮಗ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ” ಎಂದು ಅವರು ಹೇಳಿದ್ದಾರೆ., ಕುಟುಂಬ ಸದಸ್ಯರು ಈ ಸಂದರ್ಭವನ್ನು “ಕನಸು ನನಸಾಯಿತು” ಎಂದು ಬಣ್ಣಿಸಿದ್ದಾರೆ. ತಾಯಂದಿರ ದಿನದಂದು ಈ ಸಂದರ್ಭ ಬಂದ ಕಾರಣ ಈ ಸಂದರ್ಭವು ಇನ್ನಷ್ಟು ವಿಶೇಷವಾಗಿದೆ ಎಂದು ಸಂತಸದಿಂದ ಬಣ್ಣಿಸಿದ್ದಾರೆ.


























