Home ಜಿಲ್ಲೆ ಕಲಬುರಗಿ ಸಿಎಂ ಬದಲಾವಣೆಗೆ ಇನ್ನೂ ಸಮಯ ನಿಗದಿಯಾಗಿಲ್ಲ: ಖರ್ಗೆ

ಸಿಎಂ ಬದಲಾವಣೆಗೆ ಇನ್ನೂ ಸಮಯ ನಿಗದಿಯಾಗಿಲ್ಲ: ಖರ್ಗೆ

ಕಲಬುರಗಿ,ಮೇ.1-ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಇನ್ನೂ ಸಮಯ ನಿಗದಿಯಾಗಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದೇ ಪದೇ ಮುಖ್ಯಮಂತ್ರಿ ಬದಲಾವಣೆ ಅಂದ್ರೆ ನಾನೇನು ಮಾಡಲಿ ?, ಸಿಎಂ ಬದಲಾವಣೆ ಯಾಗುತ್ತೆ, ಆಗುಲ್ಲ ಅಂತ ಹೇಗೆ ಹೇಳಲಿ ? ಎಂದು ಮಾಧ್ಯಮವರ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಸಿದರು.
ಮುಖ್ಯಮಂತ್ರಿ ಬದಲಾವಣೆಗೆ ಇನ್ನೂ ಸಮಯ ನಿಗದಿಯಾಗಿಲ್ಲ. ಈ ಬಗ್ಗೆ ಯಾವುದೇ ಉಹಾಪೋಹ ಮಾಡಬೇಡಿ, ಸುಮ್ಮನೆ ತಪ್ಪು ಸಂದೇಶ ನೀಡಬೇಡಿ ಎಂದು ಖರ್ಗೆ ಮನವಿ ಮಾಡಿದರು.
ಸಮಯ ನಿಗದಿಯಾದ ಮೇಲೆ ನಾವೆಲ್ಲ ಅಂದರೆ, ನಾನು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿ ಚರ್ಚೆ ಮಾಡುತ್ತೇವೆ. ಏನು ನಿರ್ಣಯ ತೆಗೆದುಕೊಂಡರೆ ಪಕ್ಷದ ಮೇಲೆ ಯಾವ ರೀತಿಯ ಪರಿಣಾಮವಾಗಲಿದೆ ಎಂಬುವುದರ ಬಗ್ಗೆ ಚರ್ಚಿಸುತ್ತೇವೆ ಎಂದು ಹೇಳಿದರು.
ನಿನ್ನೆಯಷ್ಟೇ ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ವಿಚಾರ ಇಲ್ಲ ಎಂದಿದ್ದ ಖರ್ಗೆ ಅವರು, ಇಂದು ಮುಖ್ಯಮಂತ್ರಿ ಬದಲಾವಣೆಗೆ ಇನ್ನೂ ಸಮಯ ನಿಗದಿಯಾಗಿಲ್ಲ ಎಂದು ಹೇಳುವುದರ ಮೂಲಕ ಕುತೂಹಲ ಮೂಡಿಸಿದ್ದಾರೆ.
ಬುದ್ಧನ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಬುದ್ಧನ ಅಷ್ಟಾಂಗ ಮಾರ್ಗಗಳು ಜನರಿಗೆ ಪ್ರೇರಣೆಯಾಗಿವೆ. ಪ್ರಪಂಚದಲ್ಲಿ ನಡೆಯುತ್ತಿರುವ ಯದ್ಧ ನಿಲ್ಲಬೇಕು, ಎರಡು ದೇಶಗಳ ನಡುವಿನ ಕಲಹ ನೂರಾರು ದೇಶಗಳಿಗೆ ಸಮಸ್ಯೆಯಾಗಿದೆ. ಪಂಡಿತ್ ಜವಾಹರಲಾಲ್ ನೆಹರು ಅವರಂತೆ ವಿದೇಶ ನೀತಿ ಪಾಲನೆ ಮಾಡಿದರೆ ಉಳಿಯುತ್ತೇವೆ. ನಾವು ಯಾವ ದೇಶದ ಪರ ಸಹ ನಿಲ್ಲಬಾರದು. ಇದನ್ನು ದೇಶದ ಪ್ರಧಾನಿ ಅರ್ಥಮಾಡಿಕೊಳ್ಳಬೇಕು. ಒಂದು ದೇಶ, ಒಬ್ಬ ವ್ಯಕ್ತಿಯ ಪರ ನಿಲ್ಲಬಾರದು ಎಂದು ಖರ್ಗೆ ಹೇಳಿದರು.
ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ ದರವನ್ನು 993 ರೂಪಾಯಿಗೆ ಏರಿಕೆ ಮಾಡಿರುವುದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಎಲ್‍ಪಿಜಿ ಸಿಲಿಂಡರ್ ಕೊರತೆÀಯಿಂದ ಜನ ಸಾಕಷ್ಟು ಸವiಸ್ಯೆ ಎದುರಿಸುತ್ತಿರುವ ನಡುವೆ ಕೇಂದ್ರ ಸರ್ಕಾರ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ಮಾಡುವುದರ ಮೂಲಕ ಮತ್ತಷ್ಟು ಹೊರೆ ಹೇರಿದೆ ಎಂದರು.