Home ಜಿಲ್ಲೆ ಮಾದಕ ವ್ಯಸನಿಗಳಾಗದೆ ಉತ್ತಮ ಬದುಕು ರೂಪಿಸಿಕೊಳ್ಳಿ

ಮಾದಕ ವ್ಯಸನಿಗಳಾಗದೆ ಉತ್ತಮ ಬದುಕು ರೂಪಿಸಿಕೊಳ್ಳಿ


ಬಾದಾಮಿ.ಜೂ.೨೪: ವಿದ್ಯಾರ್ಥಿ ಜೀವನ ಬಂಗಾರದ ಜೀವನ. ಈ ಸಂದರ್ಭ ಜೀವನ ಬದಲಾಯಿಸುವ ಕ್ಷಣಗಳು. ವಿದ್ಯಾರ್ಥಿಗಳು ಮಾದಕ ವಸ್ತುಗಳ ಬಳಕೆ ಮಾಡದೆ ಸಜ್ಜನರ ಸಂಘದೊAದಿಗೆ ಓದುವ ಹವ್ಯಾಸ ರೂಡಿಸಿಕೊಂಡು ನಿಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ ಹೇಳಿದರು.


ಮಂಗಳವಾರ ಇಲ್ಲಿಯ ವೀರಪುಲಿಕೇಶಿ ವಿದ್ಯಾ ಸಂಸ್ಥೆಯ ಬಸವ ಮಂಟಪದಲ್ಲಿ ಬಾಗಲಕೋಟ ಎಸ್ಪಿ ಮಾರ್ಗದರ್ಶನದಲ್ಲಿ ಬಾದಾಮಿ ಪೊಲೀಸ್ ಠಾಣೆ ಜಿಎಂಕೆ ಪಿಯು ಕಾಲೇಜು, ಆಯುರ್ವೇದ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡ ಮಾದಕ ವಸ್ತುಗಳ ಸೇವೆ ಬಳಕೆ ಹಾಗೂ ಮಾರಾಟ ತಡೆ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಸಿಪಿಐ ಕರೆಯಪ್ಪ ಬನ್ನೆ ಮಾತನಾಡಿ ಮಾದಕ ವಸ್ತುಗಳ ಸೇವೆನೆಯಿಂದ ನಿಮ್ಮ ಬದುಕು ದುಸ್ತರ ಸ್ಥಿತಿಗೆ ತಲುಪಲಿದೆ. ವಿದ್ಯಾರ್ಥಿ ಜೀವನವೆಂದರೆ ಭವಿಷ್ಯ ರೂಪಿಸುವ ಸಮಯ. ಮಾದಕ ವಸ್ತುಗಳ ಸೇವೆನೆ, ಬಳಕೆ ಹಾಗೂ ಮಾರಾಟದಿಂದ ಸಮಾಜದ ಸ್ವಾಸ್ಥö್ಯ ಹಾಳಾಗಲಿದ್ದು, ಈ ಅರಿವು ನಿಮಗಿರಲಿ ಎಂಬುದು ಪೊಲೀಸ್ ಇಲಾಖೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.


ಪಿಎಸೈ ಹನಮಂತ ನರಳೆ ಮಾತನಾಡಿ ಗ್ರಾಮಗಳಿಂದ ಅತೀ ಹೆಚ್ಚು ವಿದ್ಯಾರ್ಥಿಗಳು ಪಟ್ಟಣ ಪ್ರದೇಶಗಳಿಗೆ ಕಲಿಯಲು ಬರುತ್ತಿದ್ದು, ನೀವುಗಳು ಬಹು ಎಚ್ಚರಿಕೆಯಿಂದ ನಿಮ್ಮ ಗೆಳೆತನದಲ್ಲಿ ಉತ್ತಮರೊಂದಿಗೆ ಬೆರೆಯಬೇಕು. ಇಂದಿನ ಸಣ್ಣ ಮಾದಕ ಹವ್ಯಾಸ ನಿಮ್ಮ ಜೀವನವನ್ನೆ ಹಾಳುಮಾಡಲಿದೆ. ನೀವು ಸುಧಾರಿಸುವ ಜತೆಗೆ ನಿಮ್ಮ ಸ್ನೇಹಿತರಿಗೂ ಮನವರಿಕೆ ಮಾಡಿ ವಾತಾವರಣ ಶುದ್ಧವಾಗಿಸಿಕೊಂಡು ಅಭ್ಯಾಸದ ಕಡೆ ಗಮನ ಹರಿಸಬೇಕು. ಮದ್ಯ ವ್ಯಸನಿಗಳಿಂದ ಅಪರಾಧಗಳ ಕೃತ್ಯ ಇತ್ತೀಚೆಗೆ ನಡೆಯುತ್ತಿದ್ದು ಮಾದಕ ವಸ್ತುಗಳ ಸೇವನೆ ಮಾಡುವುದರಿಂದ ದೇಹದಲ್ಲಿ ಅನಗತ್ಯ ರೋಗಗಳಿಗೆ ತುತ್ತಾಗುವ ಸಂದರ್ಭ ಬಂದು ಮನೆಮಂದಿಯೂ ಬೀದಿಗೆ ತರುವಂತದ್ದು, ಉತ್ತಮ ಹವ್ಯಾಸಗಳ ಮೂಲಕ ನೀವು ದೇಶದ ಉತ್ತಮ ಪ್ರಜೆಗಳಾಗಬೇಕು ಎಂದರು.


ಪಿಯು ಕಾಲೇಜ ಪ್ರಾಚಾರ್ಯ ಪಿ.ಎಸ್.ಜವಳಿ, ಮೆಡಿಕಲ್ ಕಾಲೇಜು ಉಪನ್ಯಾಸಕ ಡಾ. ಗಿರೀಶ ದಾನಪ್ಪಗೌಡರ, ಎಎಸೈ ನಾಗೇಶ ತಳವಾರ, ದಳವಾಯಿ, ಶ್ರೀಮತಿ ಪಿ.ಬಿ.ಲೆಂಕೆನ್ನವರ, ನಾಡಗೌಡ್ರ ಉಪಸ್ಥಿತರಿದ್ದರು.