
ಕಲಬುರಗಿ,ಮೇ.3: ನಗರದ ಕೋಟಿನೂರ್-ಡಿ ಬಿಎಸ್‍ಎನ್‍ಎಲ್ ಲೇಔಟ್ ಬುದ್ಧ ಬಸವ ಅಂಬೇಡ್ಕರ್ ಉದ್ಯಾನದಲ್ಲಿ ಬುದ್ಧ ಬಸವ ಅಂಬೇಡ್ಕರ್ ಜಯಂತಿ ಉತ್ಸವ ಜರುಗಿತು.
ಬುದ್ಧ ಪೂರ್ಣಿಮೆಯ ದಿನದಂದು ಜರುಗಿದ ಕಾರ್ಯಕ್ರಮದಲ್ಲಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕಳೆದ 23 ವರ್ಷಗಳಿಂದ ಜಯಂತಿ ಉತ್ಸವ ಇಲ್ಲಿ ನಡೆಸಲಾಗುತ್ತಿದ್ದು ಬಹಳ ಅದ್ಧೂರಿಯಾಗಿ ಕಾರ್ಯಕ್ರಮ ಏರ್ಪಡಿಸುವ ಮೂಲಕ ಬುದ್ಧ ಬಸವ ಅಂಬೇಡ್ಕರರ ವಿಚಾರಧಾರೆಯನ್ನು ಜನ ಸಮುದಾಯಕ್ಕೆ ತಲುಪಿಸುವಲ್ಲಿ ವಿಭಿನ್ನವಾದ ಕಾರ್ಯಕ್ರಮಗಳ ಮುಖಾಂತರ ಹಮ್ಮಿಕೊಳ್ಳುವ ಇಲ್ಲಿನ ನಿವಾಸಿಗಳು ಬಹಳ ಪ್ರಜ್ಞಾವಂತರಾಗಿದ್ದಾರೆ. ಇಲ್ಲಿನ ಉದ್ಯಾನವನ ಹಾಗೂ ಗ್ರಂಥಾಲಯಕ್ಕೆ ಸರ್ಕಾರದ ಮುಖಾಂತರ ಸೌಲಭ್ಯ ಒದಗಿಸಲು ಖಂಡಿತ ಪ್ರಯತ್ನಿಸುತ್ತೇನೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಲ್ಬುರ್ಗಿ ನಗರದ ಪೆÇಲೀಸ್ ಆಯುಕ್ತ ಡಾ. ಶರಣಪ್ಪ ಎಸ್ ಡಿ ಅವರು ಮಾತನಾಡಿ ಕಾರ್ಯಕ್ರಮ ವಿಭಿನ್ನವಾಗಿದ್ದು ,35 ಜನಕ್ಕೂ ಹೆಚ್ಚು ಪೆÇಲೀಸ್ ಸೇವೆಯಲ್ಲಿ ಇರುವವರಿಗೆ ಗುರುತಿಸಿ “ಭೀಮರತ್ನ” ಪ್ರಶಸ್ತಿ ನೀಡಿ ಗೌರವಿಸಿ 25 ಜನ ಯೋಧರಿಗೆ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಜಿಲ್ಲಾ ಜಯಂತಿ ಉತ್ಸವದ 23 ಜಿಲ್ಲಾಧ್ಯಕ್ಷರಿಗೆ ಗುರುತಿಸಿ ಸನ್ಮಾನಿಸಿರುವುದು ವಿಶೇಷ. ಮಹಾ ನಾಯಕರ ದಿನವನ್ನು ನೆನೆದು ಸಮಾಜದಲ್ಲಿ ನೆಮ್ಮದಿ ಶಾಂತಿಗಾಗಿ ಸೇವೆ ಸಲ್ಲಿಸುವುದು ಇಂದಿನ ದಿನಗಳಲ್ಲಿ ಅತ್ಯಂತ ಮುಖ್ಯ ಎಂದು ನುಡಿದರು. ವೇದಿಕೆಯಲ್ಲಿ ಸಿಸಿಬಿ ಎಸಿಪಿ ಜೇಮ್ಸ್ ಮೆನೇಜಸ್ ಡಾ. ಕಿರಣ್ ದೇಶಮುಖ್, ಮಾಜಿ ಮಹಾಪೌರ ವಿಶಾಲ್ ದರ್ಗಿ, ಉಪ ಮಹಾಪೌರ ತೃಪ್ತಿ ಎಸ್ ಲಾಖೆ, ಚಂದ್ರಕಾಂತ್ ಬಿಲ್ಲದ್, ಚಂದ್ರಕಾಂತ ಗದಗಿ, ಚಾಂದ್ ಜಾಕ್ಸನ್, ಡಾ. ಪಂಡಿತ್ ಕಾಂಬಳೆ ಉಪಸ್ಥಿತರಿದ್ದರು.ಹಲವು ಸಾಂಸ್ಕøತಿಕ ಕಾರ್ಯಕ್ರಮಗಳು ಜನರನ್ನು ಮನಸ್ಸು ಸೂರೆಗೊಂಡವು ಎಂದು ಬಿಎಸ್‍ಎನ್‍ಎಲ್ ಲೇಔಟ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕಿಶೋರ್ ಗಾಯಕ್ವಾಡ್ ತಿಳಿಸಿದ್ದಾರೆ.






















