Home ಜಿಲ್ಲೆ ಕೃಷ್ಣಾ ತೀರದ ರೈತರ ದಶಕಗಳ ನೀರಿನ ಸಂಕಷ್ಟಕ್ಕೆ ಬ್ರೇಕ್ :216.50 ಕೋಟಿ ಮಹಾಯೋಜನೆಗೆ ಗ್ರೀನ್ ಸಿಗ್ನಲ್:...

ಕೃಷ್ಣಾ ತೀರದ ರೈತರ ದಶಕಗಳ ನೀರಿನ ಸಂಕಷ್ಟಕ್ಕೆ ಬ್ರೇಕ್ :216.50 ಕೋಟಿ ಮಹಾಯೋಜನೆಗೆ ಗ್ರೀನ್ ಸಿಗ್ನಲ್: ಮಾಜಿ ಶಾಸಕ ಆನಂದ ನ್ಯಾಮಗೌಡ

ಜಮಖಂಡಿ, ಏ 30:ಪ್ರತಿ ಬೇಸಿಗೆಯಲ್ಲಿ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಕುಸಿತವಾಗುವುದರಿಂದ ನದಿ ತೀರದ ರೈತರು ಹಾಗೂ ಜನ ಜಾನುವಾರುಗಳು ತೀವ್ರ ಸಂಕಷ್ಟ ಅನುಭವಿಸುವ ಪರಿಸ್ಥಿತಿ ವಷರ್ಂಪ್ರತಿ ಎದುರಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ಸಮೀಪ ಕೃಷ್ಣಾ ನದಿಗೆ ಅಡ್ಡವಾಗಿ 1989ರಲ್ಲಿ ದಿವಂಗತ ಸಿದ್ದು ನ್ಯಾಮಗೌಡರ ನೇತೃತ್ವದಲ್ಲಿ ರೈತರ ಸಹಕಾರದಿಂದ ಬ್ಯಾರೇಜ್ ನಿರ್ಮಿಸಲಾಗಿತ್ತು.
ಆರಂಭದಲ್ಲಿ ಬ್ಯಾರೇಜ್‍ನ ಹಿನ್ನೀರಿನಿಂದ ಸುಮಾರು 30 ಸಾವಿರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಲಭಿಸುತ್ತಿತ್ತು. ನಂತರ ಇದರ ವ್ಯಾಪ್ತಿ ವಿಸ್ತರಿಸಿಕೊಂಡು 70 ಸಾವಿರ ಎಕರೆಗೂ ಹೆಚ್ಚು ಜಮೀನಿಗೆ ನೀರು ಪೂರೈಕೆಯಾಗತೊಡಗಿತು. ಆದರೆ ಬೇಸಿಗೆಯಲ್ಲಿ ನೀರಿನ ಕೊರತೆ ಹೆಚ್ಚಾದ ಹಿನ್ನೆಲೆ 2013ರಲ್ಲಿ ಬ್ಯಾರೇಜ್‍ಗೆ ಮರುನೀರು ತುಂಬುವ ಕಾರ್ಯ ಆರಂಭಿಸಲಾಯಿತು.
ಬ್ಯಾರೇಜ್ ಎತ್ತರವನ್ನು 1.75 ಮೀಟರ್ ಹೆಚ್ಚಿಸಿದ ಪರಿಣಾಮ ನೀರಿನ ಸಂಗ್ರಹ ಸಾಮಥ್ರ್ಯ 2.8 ಟಿಎಂಸಿಯಿಂದ 4.3 ಟಿಎಂಸಿಗೆ ಏರಿಕೆಯಾಯಿತು. ಇದರಿಂದ ಹೆಚ್ಚುವರಿಯಾಗಿ 1.5 ಟಿಎಂಸಿ ಅಡಿ ನೀರು ಸಂಗ್ರಹ ಸಾಧ್ಯವಾಯಿತು.
ದಿವಂಗತ ಸಿದ್ದು ನ್ಯಾಮಗೌಡರ ಬಳಿಕ ಮಾಜಿ ಶಾಸಕ ಆನಂದ ನ್ಯಾಮಗೌಡರು ರೈತರ ಸಹಕಾರದಿಂದ ಮರುನೀರು ತುಂಬುವ ಕಾರ್ಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಪ್ರತಿ ಬಾರಿ ಈ ಕಾರ್ಯಕ್ಕೆ ಸುಮಾರು ?1.5 ಕೋಟಿ ವೆಚ್ಚವಾಗುತ್ತಿದ್ದು, ಅದರಲ್ಲಿ ?1 ಕೋಟಿ ವಿದ್ಯುತ್ ಬಿಲ್ಲಿಗೆ ಖರ್ಚಾಗುತ್ತಿದೆ. ಇದರಿಂದ ಕೃಷ್ಣಾ ತೀರದ ರೈತರ ಸಂಘಕ್ಕೆ ಸುಮಾರು ?10 ಕೋಟಿ ಸಾಲದ ಹೊರೆಯೂ ಉಂಟಾಗಿದೆ ಎಂದು ತಿಳಿಸಲಾಗಿದೆ.
ಇದೀಗ ಗಲಗಲಿ-ಮರೆಗುದ್ದಿ ಏತ ನೀರಾವರಿ ಯೋಜನೆಯಡಿ ಗಲಗಲಿ ಬ್ಯಾರೇಜ್‍ನಿಂದ ಆಲಮಟ್ಟಿ ಜಲಾಶಯದ ಹಿನ್ನೀರನ್ನು ಎತ್ತಿ ಹಿಪ್ಪರಗಿ ಬ್ಯಾರೇಜ್‍ವರೆಗೆ ತಲುಪಿಸುವ ?216.50 ಕೋಟಿ ವೆಚ್ಚದ ಯೋಜನೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ತಿಳಿಸಿದ್ದಾರೆ.
ಈ ಯೋಜನೆ ಪೂರ್ಣಗೊಂಡರೆ ಚಿಕ್ಕಪಡಸಲಗಿ ಬ್ಯಾರೇಜ್‍ಗೆ ಬೇಸಿಗೆಯಲ್ಲಿ ನೀರು ಎತ್ತುವ ಸಮಸ್ಯೆ ನಿವಾರಣೆಯಾಗಲಿದ್ದು, ಮುಂದಿನ ಬೇಸಿಗೆಯೊಳಗೆ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತವಾಗಿದೆ.