Home ಮುಖಪುಟ ಸುದ್ದಿ ದೀಪಾವಳಿ ‘ಖುಷಿಗಳ ಈದ್’ ಖರ್ಗೆ ಹೇಳಿಕೆಗೆ ಬಿಜೆಪಿ ಕಿಡಿ

ದೀಪಾವಳಿ ‘ಖುಷಿಗಳ ಈದ್’ ಖರ್ಗೆ ಹೇಳಿಕೆಗೆ ಬಿಜೆಪಿ ಕಿಡಿ

ನವದೆಹಲಿ, ನ.೯-ದೀಪಾವಳಿ ಹಬ್ಬವನ್ನು ‘ಖುಷಿಗಳ ಈದ್’ ಎಂದು ಬಣ್ಣಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ, ಕಾಂಗ್ರೆಸ್ ಓಲೈಕೆ ರಾಜಕಾರಣ ಮತ್ತು ಮತಬ್ಯಾಂಕ್ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದೆ


ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ದೀಪಾವಳಿಯನ್ನು ಸಂತೋಷದ ಹಬ್ಬ ಎಂದು ಬಣ್ಣಿಸುವ ಭರದಲ್ಲಿ ‘ಖುಷಿಗಳ ಈದ್’ ಎಂಬ ಪದವನ್ನು ಬಳಸಿದ್ದರು. ಇಡೀ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದೆ.


ಈ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಖರ್ಗೆ ಹೇಳಿಕೆಯನ್ನು ಟೀಕಿಸಿದ್ದಾರೆ.


ದೀಪಾವಳಿಯಂತಹ ಹಿಂದೂ ಹಬ್ಬದ ಸಂದರ್ಭದಲ್ಲೂ ಕಾಂಗ್ರೆಸ್‌ಗೆ ಓಲೈಕೆ ಮತ್ತು ಮತಬ್ಯಾಂಕ್ ರಾಜಕೀಯವೇ ಮುಖ್ಯವಾಗಿದೆ. ಕಾಂಗ್ರೆಸ್ ಅಧ್ಯಕ್ಷರು ದೀಪಾವಳಿಯನ್ನು ‘ಖುಷಿಗಳ ಈದ್’ ಎಂದು ಕರೆಯುವ ಮೂಲಕ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ.ಕಾಂಗ್ರೆಸ್ ಸನಾತನ ವಿರೋಧಿ ಎಂದು ಅವರು ಆರೋಪಿಸಿದ್ದಾರೆ.


ಈ ಘಟನೆ ಭಾರತದ ಜಾತ್ಯತೀತ ಅಡಿಪಾಯವನ್ನು ಉಳಿಸಿಕೊಳ್ಳಲು ದೇಶವು ದೀರ್ಘ ಹೋರಾಟ ನಡೆಸಬೇಕಿದೆ ಎಂಬ ಅರಿವು ಮೂಡಿಸಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದರು.