Home ಮುಖಪುಟ ಸುದ್ದಿ ಮನೆಗಳ ಸಕ್ಷಮ ಶುಲ್ಕ ಇಳಿಕೆ

ಮನೆಗಳ ಸಕ್ಷಮ ಶುಲ್ಕ ಇಳಿಕೆ

ಬೆಂಗಳೂರು, ನ. ೯- ಬಿಡಿಎ ಸ್ವಾಧೀನದ ಜಾಗಗಳಲ್ಲಿ ಮನೆಗಳ ಸಕ್ರಮ ಶುಲ್ಕದಲ್ಲಿ ಸರ್ಕಾರ ಬಾರಿ ಇಳಿಕೆ ಮಾಡಿದೆ ಶುಲ್ಕದಲ್ಲಿ ಶೇ. ೫೦ರಷ್ಟು ಭಾರೀ ರಿಯಾಯಿತಿ ನೀಡುವ ತೀರ್ಮಾನವನ್ನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೈಗೊಂಡಿದ್ದಾರೆ.


ಬಿಡಿಎ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಬಿಡಿಎ ರೂಪಿಸಿರುವ ಯೋಜನೆಗಳು ಯೋಜನೆಗಳು, ನೀಲ ನಕ್ಷೆ ಇವುಗಳ ಬಗ್ಗೆ ಬಿಡಿಎ ಕಚೇರಿಯಲ್ಲಿ ಇಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಸಮಗ್ರ ಪರಿಶೀಲನೆ ನಡೆಸಿ ಬಿಡಿಎ ಭೂಸ್ವಾಧೀನಕ್ಕೊಳಪಟ್ಟ ಜಾಗಗಳಲ್ಲಿ ೧೨ ವರ್ಷಗಳ ಹಿಂದೆ (೧೦.೦೭.೨೦೦೮ರ ಪೂರ್ವದಲ್ಲಿ) ನಿರ್ಮಿಸಲಾದ ಮನೆಗಳನ್ನು ಸಕ್ರಮಗೊಳಿಸಲು ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ನಿಯಮ ೩೮(ಡಿ) ಅಡಿ ಮನೆಗಳ ಸಕ್ರಮ ಅಕ್ರಮ ಮಾಡಿ ಸಕ್ರಮ ಶುಲ್ಕದಲ್ಲಿ ಶೇಕಡ ೫೦ರಷ್ಟು ವಿನಾಯಿತಿ ನೀಡುವಂತೆ ಸೂಚಿಸುವ ಮೂಲಕ ನಾಗರೀಕರಿಗೆ ದೀಪಾವಳಿಯ ಕೊಡುಗೆ ನೀಡಿದ್ದಾರೆ ನಾಗರಿಕರಿಗೆ ಭರ್ಜರಿ ನೆಮ್ಮದಿ ನೀಡುವ ಸಲುವಾಗಿ ಮಾರ್ಗಸೂಚಿ ಮೌಲ್ಯದ ದರವನ್ನು ಗಣನೀಯವಾಗಿ ಇಳಿಕೆ ಮಾಡಲಾಗಿದೆ:
೨೦x೩೦ ವರೆಗೆ: ಈ ಹಿಂದಿನ ಶೇ. ೧೦ರ ಬದಲು ಈಗ ಕೇವಲ ಶೇ. ೫.
೨೦x೩೦ ರಿಂದ ೩೦x೪೦ ವರೆಗೆ: ಶೇ. ೨೫ರ ಬದಲು ಕೇವಲ ಶೇ. ೧೨.೫.
೩೦x೪೦ ರಿಂದ ೪೦x೬೦ ವರೆಗೆ: ಶೇ. ೪೦ರ ಬದಲು ಶೇ. ೨೦.
೪೦x೬೦ ರಿಂದ ೫೦x೮೦ ವರೆಗೆ: ಶೇ. ೫೦ರ ಬದಲು ಶೇ. ೨೫ ಮತ್ತು ದಂಡ ವಿಧಿಸಿ ಅಕ್ರಮ ಮಾಡಲಾಗುತ್ತದೆ . ಈ ಯೋಜನೆಯ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸಂಪೂರ್ಣ ಗಣಕೀಕೃತಗೊಳಿಸುವ ವ್ಯವಸ್ಥೆಗೆ ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು

ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆ, ವ್ಯವಸ್ಥಿತ ನಗರೀಕರಣ ಹಾಗೂ ದಶಕಗಳಿಂದ ಬಾಕಿ ಉಳಿದಿರುವ ನಾಗರಿಕರ ನಿವೇಶನ ಮತ್ತು ವಸತಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮಹತ್ವಾಕಾಂಕ್ಷೆಯ ಯೋಜನೆಗಳ ಸಮಗ್ರ ಪ್ರಗತಿ ಪರಿಶೀಲನೆ ನಡೆಸಿ ಹಲವು ಸಲಹೆ ಸೂಚನೆಗಳನ್ನು ನೀಡಿದರು ಜನಸಾಮಾನ್ಯರಿಗೆ ಅನುಕೂಲವಾಗುವ ಹಾಗೂ ಸಿಲಿಕಾನ್ ಸಿಟಿಯ ಮೂಲಸೌಕರ್ಯದ ಚಿತ್ರಣವನ್ನೇ ಬದಲಿಸಬಲ್ಲ ಪ್ರಮುಖ ಯೋಜನೆಗಳ ಕುರಿತು ಬಿಡಿಎ ಅಧಿಕಾರಿ ವರ್ಗದೊಂದಿಗೆ ಸುದೀರ್ಘ ಚರ್ಚೆ ನಡೆಸಿದರು


ಈ ಪರಿಶೀಲನಾ ಸಭೆಯಲ್ಲಿ ಯೋಜನೆಗಳ ಪ್ರಸ್ತುತ ಸ್ಥಿತಿ, ಅನುಷ್ಠಾನದ ವೇಗ, ಭೂಸ್ವಾಧೀನದ ಪ್ರಗತಿ, ಆರ್ಥಿಕ ಹಾಗೂ ಆಡಳಿತಾತ್ಮಕ ಅಂಶಗಳು ಮತ್ತು ನಿಗದಿತ ಕಾಲಮಿತಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕುರಿತು ಅಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ಮಾಡಿದರು ಈ ಸಭೆಯಲ್ಲಿ ಬಿಡಿಎ ಅಧ್ಯಕ್ಷ ಎನ್ ಎ ಹ್ಯಾರಿಸ್ ಸೇರಿದಂತೆ ಬೆಂಗಳೂರಿನ ಹಲವು ಶಾಸಕರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು