Home ಜಿಲ್ಲೆ ಕಲಬುರಗಿ ಕನ್ನಡವೇ ನಿತ್ಯ ಬದುಕಿನ ನಿತ್ಯೋತ್ಸವ ಆಗಬೇಕು: ಪ್ರೊ.ಸಿ.ಎಸ್.ಆನಂದ

ಕನ್ನಡವೇ ನಿತ್ಯ ಬದುಕಿನ ನಿತ್ಯೋತ್ಸವ ಆಗಬೇಕು: ಪ್ರೊ.ಸಿ.ಎಸ್.ಆನಂದ

ಕಲಬುರಗಿ,ನ.9-ಕರ್ನಾಟಕದ ಇತಿಹಾಸ ಮತ್ತು ಪರಂಪರೆ ಬಹಳಷ್ಟು ದೊಡ್ಡದಿದೆ. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ ದ್ರಾವಿಡ ಭಾಷೆ ಆಗಿದೆ.ಇವತ್ತು ಕನ್ನಡಿಗರಾದ ನಮಗೆ ಅನ್ನದ ಭಾಷೆ, ಉದ್ಯೋಗದ ಭಾಷೆಯಾಗಿ ಕನ್ನಡವೇ ನಮ್ಮ ನಿತ್ಯ ಬದುಕಿನ ನಿತ್ಯೋತ್ಸವ ಆಗಬೇಕು ಎಂದು ನಾಡಿನ ಪ್ರಮುಖ ಸಾಹಿತಿ ಪೆÇ್ರ.ಸಿ.ಎಸ್.ಆನಂದ ಹೇಳಿದರು.
ನಗರದ ಸುಕಿ ಸಾಂಸ್ಕøತಿಕ ಸಂಸ್ಥೆ , ಸುಕಿ ಮ್ಯೂಜಿಕಲ್ ಸ್ಟುಡಿಯೋ ಯೋದಲ್ಲಿ ಆಯೋಜಿಸಿದ್ದ 71 ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಕನ್ನಡ ನಮ್ಮೆಲ್ಲರ ಮನೆಯ ಮತ್ತು ಮನದ ಭಾಷೆ ಆಗಿದ್ದು, ಈ ಭಾಷೆಯ ಮೂಲಕ ಶರಣರು, ದಾಸರು, ಸಂತರು,ತತ್ವಪದಕಾರರು,ಜಾನಪದ ಚಿಂತಕರು ಮೌಲ್ಯಯುತ ಸಾಹಿತ್ಯ ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ, ಮನುಕುಲದ ಕಲ್ಯಾಣಕ್ಕಾಗಿ ಅಮೂಲ್ಯ ಕೊಡುಗೆ ನೀಡಿದ್ದಾರೆ. ಇನ್ನೂ ಆಧುನಿಕ ಸಾಹಿತ್ಯದಲ್ಲಿ ನಮ್ಮ ನೆಲದ ಸರ್ವಶ್ರೇಷ್ಠ ಎಂಟು ಜನ ಸಾಹಿತಿಗಳು ತಮ್ಮ ಸೃಜನಶೀಲ ಸಾಹಿತ್ಯ ರಚನೆಯ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಇಂತಹ ಸಮೃದ್ಧ ಕನ್ನಡಾಂಬೆಯ ಕುಡಿಗಳಾದ ನಾವುಗಳು ಕನ್ನಡ ಭಾಷೆ ಬಳಸುವ ಮತ್ತು ಬೆಳೆಸುವ ಗುರುತರವಾದ ಜವಾಬ್ದಾರಿಯನ್ನು ಹೊತ್ತು ಮುನ್ನಡೆಯಬೇಕಾದ ಅಗತ್ಯ ಇದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅನೇಕ ಕಲಾವಿದರು ಕನ್ನಡ ಪರ ಗೀತೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರು, ಹವ್ಯಾಸಿ ಗಾಯಕರಾದ ಎಂ.ಸಂಜೀವ, ಗುಂಡುರಾವ್ ಕಡಣಿ,ಬಸವಂತರಾಯ ಕೋಳಕೂರ, ಸಿದ್ದು ವಾಘ್ಮೋರೆ, ಸಂಗೀತಾ ವಾಘ್ಮೋರೆ, ಕವಿರಾಜ್ ನಿಂಬಾಳ,ಸಾಗರ ವಾಘ್ಮೋರೆ, ಕವಿರಾಜ್ ಆನಂದ ಭಾಗವಹಿದ್ದರು, ಸಂಸ್ಥೆ ಅಧ್ಯಕ್ಷರಾದ ಕಿರಣ್ ಪಾಟೀಲ್ ಅವರು ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ವಂದಿಸಿದರು.