
ಜೇವರ್ಗಿ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ ಅಡಿಯಲ್ಲಿ ಕನ್ನಡ ಇಂಗ್ಲಿಷ್ ಮತ್ತು ಹಿಂದಿ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಡಾ. ಬಿ. ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ‘ಅವ್ವ’ ನಾಟಕದ ಏಕವ್ಯಕ್ತಿ ಪ್ರದರ್ಶನ ನಡೆಯಿತು.
ಅವ್ವ ನಾಟಕದ ಕರ್ತೃ, ನೀನಾಸಂ ಕಲಾವಿದ ರಮಜಾನಸಾಬ್ ಉಳ್ಳಾಗಡ್ಡಿ ಅವರು ಏಕವ್ಯಕ್ತಿ ಪ್ರದರ್ಶನ ನೀಡಿ ತಮ್ಮ ನಟನಾ ಕೌಶಲ್ಯ ದಿಂದ ಕಕ್ಕಿರಿದು ನೆರೆದ ಪ್ರೇಕ್ಷಕ ವರ್ಗವನ್ನು ಹಿಡಿದಿಡುವಲ್ಲಿ ಯಶಸ್ವಿಯಾದರು.
ಸುಮಾರು ಒಂದು ಗಂಟೆಯವರೆಗೆ ನಡೆದ ಪ್ರದರ್ಶನದಲ್ಲಿ ತಮ್ಮ ಭಾವಪೂರ್ಣ ಅಭಿನಯದಿಂದ ನೋಡುಗರನ್ನು ಮಂತ್ರಮುಗ್ಧಗೊಳಿ ಸಿದರು.
ಈ ಆಧುನಿಕ ಯುಗದಲ್ಲಿ ತಾಯಿ ಮಕ್ಕಳ ಸಂಬಂಧ ದೂರವಾಗಿ, ಹೆತ್ತತಾಯಿ ಯನ್ನು ಪೆÇೀಷಿಸದ ವಿದ್ಯಾವಂತರೆ ತಂದೆತಾಯಿಗಳನ್ನು ಅನಾಥಾಶ್ರಮಗಳಿಗೆ ಸೇರಿಸುವ ಸನ್ನಿವೇಶ ಪ್ರೇಕ್ಷಕವರ್ಗಕ್ಕೆ ಕೆಲ ಹೊತ್ತು ಚಿಂತನೆಗೆ ಹಚ್ಚಿತು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ರಾದ ಡಾ. ಶಾಂತಾ ಅಸ್ಟಿಗೆ ಮಾತನಾಡಿ, ಪ್ರದರ್ಶನ ತುಂಬಾ ಮನೋಜ್ಞವಾಗಿತ್ತು. ಇಂದಿನ ಸಮಾಜದಲ್ಲಿ ಮಾನವೀಯ ಮೌಲ್ಯಗಳು ನಶಿಸುತ್ತಿದ್ದು, ಯುವ ಜನಾಂಗಕ್ಕೆ ಇಂಥ ಮಾನವೀಯತೆಯ ಸಂದೇಶ ಸಾರುವ ಪ್ರದರ್ಶನಗಳ ಅಗತ್ಯವಿದೆ ಎಂದು ಹೇಳಿದರು.
ಐಕ್ಯೂಏಸಿ ಸಂಯೋಜಕ ಡಾ. ಸಂದೀಪ ತಿವಾರಿ, ಸಿಬ್ಬಂದಿ ಕಾರ್ಯದರ್ಶಿ ಡಾ.ಸಂತೋಷ ಕುಮಾರ, ಸಾಂಸ್ಕøತಿಕ ಸಮಿತಿ ಸಂಚಾಲಕ ಡಾ. ಶರಣಪ್ಪ ಗುಂಡಗುರ್ತಿ ಹಿರಿಯ ಪ್ರಾಧ್ಯಾಪಕರಾದ ಡಾ. ರಾಬಿಯಾಬೇಗಂ, ಡಾ. ಅಶೋಕ ಹೋಳ್ಕರ್, ಗ್ರಂಥಪಾಲಕ ತಿಪ್ಪಣ್ಣ ವಗ್ದಾಳ, ಡಾ.ಶ್ರೀಧರ್, ಡಾ. ಶಿಲ್ಪಾ, ಡಾ. ರೂಪಾ ಕುಲ್ಕರ್ಣಿ, ಡಾ. ಮಂಜುಳಾ ಡಾ. ಹೊನ್ನೂರಸ್ವಾಮಿ, ಮೋಹನ ಬೆ?ಲಪತ್ತಾರ, ಡಾ. ಅಪರ್ಣಾ ಸೇರಿದಂತೆ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.
ಬಸಮ್ಮ ಪ್ರಾರ್ಥಿಸಿದರು. ಹಿಂದಿ ವಿಭಾಗದ ಮುಖ್ಯಸ್ಥ ಕುಪೇಂದ್ರ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ನಾಗಣ್ಣ ಕಿಲಾರಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕ ಡಾ. ಖಾಜಾವಲಿ ಈಚನಾಳ ಸಂಪನ್ಮೂಲವ್ಯಕ್ತಿ ರಮಜಾನಸಾಬ ಉಳ್ಳಾಗಡ್ಡಿಯವರನ್ನು ಪರಿಚಯಿಸಿದರು.ಕನ್ನಡ ಅಧ್ಯಾಪಕ ಭೀಮಣ್ಣ ಬೆಡಕಪಳ್ಳಿ ನಿರೂಪಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಡಾ. ಖುತೇಜಾ ನಸ್ರಿನ್ ವಂದಿಸಿದರು.





















