Home ಜಿಲ್ಲೆ ಕಲಬುರಗಿ ಬಸ್ ಹತ್ತುವಾಗ 2.25 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು

ಬಸ್ ಹತ್ತುವಾಗ 2.25 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು

ಕಲಬುರಗಿ,ನ.9-ಬಸ್ ಹತ್ತುವಾಗ ಮಹಿಳೆಯ ವ್ಯಾನಿಟಿ ಬ್ಯಾಗ್‍ನಲ್ಲಿ ಇದ್ದ 2.25 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ನಗರದ ಸೇಡಂ ರಸ್ತೆಯ ಭಾಗ್ಯ ನಗರದ ಶಿಲ್ಪಾ ಕೈಲಾಸ ಗದ್ವಾಲ್ ಅವರು ದೀಪಾವಳಿ ಹಬ್ಬದ ಪ್ರಯುಕ್ತ ಮಕ್ಕಳೊಂದಿಗೆ ತವರು ಮನೆಯಾದ ಲಿಂಗಸೂಗುರಿಗೆ ಹೋಗಲು ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿ ಲಿಂಗಸೂಗೂರಿಗೆ ಹೋಗುವ ಬಸ್ ಹತ್ತುವಾಗ ಅವರ ವ್ಯಾನಿಟಿ ಬ್ಯಾಗ್‍ನ ಸಣ್ಣ ಪರ್ಸಿನಲ್ಲಿಟ್ಟಿದ್ದ 2 ಲಕ್ಷ ರೂ.ಮೌಲ್ಯದ 55 ಗ್ರಾಂ.ಬಂಗಾರದ ಎರಡೆಳೆಯ ಮಂಗಳಸೂತ್ರ, 20 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ನವರತ್ನದ ಬಂಗಾರದ ಚೈನ, 5 ಸಾವಿರ ರೂ.ಮೌಲ್ಯದ 1 ಗ್ರಾಂ.ಬಂಗಾರದ ಕಿವಿಯೋಲೆ ಸೇರಿ 2.25 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವಾಗಿವೆ. ಈ ಸಂಬಂಧ ಅವರು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.