Home ಜಿಲ್ಲೆ ಅಜ್ಞಾನ ಹೋಗಲಾಡಿಸಿ ಬೆಳಕನ್ನು ನೀಡಿದವರು ಬಸವಾದಿ ಶರಣರು: ಪ್ರೊ ದೊಡ್ಡಣ್ಣ ಬಜಂತ್ರಿ

ಅಜ್ಞಾನ ಹೋಗಲಾಡಿಸಿ ಬೆಳಕನ್ನು ನೀಡಿದವರು ಬಸವಾದಿ ಶರಣರು: ಪ್ರೊ ದೊಡ್ಡಣ್ಣ ಬಜಂತ್ರಿ

ವಿಜಯಪುರ: ಮೇ.೪:ಬಸವಾದಿ ಶರಣರು ಹನ್ನೇರಡನೆಯ ಶತಮಾನದಲ್ಲಿ ಅಜ್ಞಾನ ಹೋಗಲಾಡಿಸಿ ಈ ಸಮಾಜಕ್ಕೆ ಬೆಳಕನ್ನು ನೀಡಿದರು. ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ಕಟುವಾಗಿ ಟೀಕಿಸಿ ಪ್ರಗತಿಪರ ಚಿಂತನೆಗಳನ್ನು ಜನರಲ್ಲಿ ವಚನಗಳ ಮೂಲಕ ಅರಿವು ಮೂಡಿಸಿದರು ಎಂದು ಹಿರಿಯ ಸಾಹಿತಿ ಪ್ರೊ ದೊಡ್ಡಣ್ಣ ಬಜಂತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ರವಿವಾರ ದಿನಾಂಕ ೩-೫-೨೦೨೬ ರಂದು ಜಿಲ್ಲಾ. ತಾಲೂಕ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಆಶ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ದತ್ತಿ ನಿಧಿ ಕಾರ್ಯಕ್ರಮಗಳಾದ ಬಸವತತ್ವ ಪ್ರಚಾರ ಸಂಸ್ಥೆ ದತ್ತಿ. ಶ್ರೀಮತಿ ಗುರುಬಾವಿ ಬಸನಗೌಡ ಪಾಟೀಲ ದತ್ತಿ. ದಿ ಗಂಗಾಧರ ಕೋರಳ್ಳಿ ದತ್ತಿ. ಶ್ರೀಮತಿ ನಿಂಗಮ್ಮ ಗುರಪ್ಪ ಯಾದವಾಡ ದತ್ತಿ ಗಳನ್ನು ಉದ್ಘಾಟಿಸಿ ಮಾತನಾಡುತ್ತಾ ಸಮಸಮಾಜದ ಪರಿಕಲ್ಪನೆಯನ್ನು ಅನುಭವ ಮಂಟಪದಲ್ಲಿ ಅನುಕರಣೆ ಮಾಡಿದರು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಚಾರ್ಯ ಶಿವಾನಂದ ನುಚ್ಚಿ ಮಾತನಾಡಿ ಹನ್ನೇರಡನೆಯ ಶತಮಾನದ ಶಿವಶರಣೆಯರು ಕಾಯಕ ತತ್ವವನ್ನು ಪರಿಪಾಲಿಸಿದರು. ಯಾವುದೇ ಕಾಯಕವಿರಲಿ ಅದು ಪವಿತ್ರ. ಕಾಯಕದಲ್ಲಿ ಮೇಲು ಕೀಳು ಎಂಬುದಿಲ್ಲ ಎಂದರು.
ಬಸವಾದಿ ಶರಣರು ಮನುಕುಲಕ್ಕೆ ಕೊಟ್ಟ ಕಾಣಿಕೆ ಕುರಿತು ಉಪನ್ಯಾಸ ನೀಡಿದ ಸಾಹಿತಿ ಹಾಗೂ ಶಿಕ್ಷಕಿ ಅಂಬಿಕಾ ಕರಕಪ್ಪಗೋಳ ಮಾತನಾಡಿ ಸ್ತುತಿ ನಿಂದನೆಗಳಿಗೆ ಹೆದರಬೇಡಿರಿ. ಸಮಾನತೆ. ವೈಚಾರಿಕತೆ. ಮತ್ತು ಕಾಯಕ ನಿಷ್ಠೆಯನ್ನು ಪ್ರತಿಪಾದಿಸಿದ ಶಾಶ್ವತ ಮೌಲ್ಯಗಳಾಗಿವೆ. ದಾಸೋಹ ತತ್ವ. ಲಿಂಗ ಸಮಾನತೆ ಮೇಲೆ ಆಧಾರಿತವಾಗಿವೆ. ನಡೆ-ನುಡಿ ಒಂದಾಗಬೇಕು ಎಂದರು.
ಅಲ್ಲಮಪ್ರಭುದೇವರು ಹಾಗೂ ಅಕ್ಕಮಹಾದೇವಿಯ ಸಂವಾದ ಕುರಿತು ಉಪನ್ಯಾಸ ನೀಡಿದ ಶಿಕ್ಷಕಿ ಹಾಗೂ ಸಾಹಿತಿ ಶರಣಮ್ಮ ಹಾದಿಮನಿ ಮಾತನಾಡಿ ಅಲ್ಲಮಪ್ರಭುದೇವ ಹಾಗೂ ಅಕ್ಕಮಹಾದೇವಿ ಅನುಭವ ಮಂಟಪದ ಆಧಾರಸ್ತಂಭ. ಅಲ್ಲಮಪ್ರಭುದೇವರು ಶೂನ್ಯ ಸಿಂಹಾಸನದ ಚಕ್ರವರ್ತಿ.ಅಕ್ಕಮಹಾದೇವಿ ಚನ್ನಮಲ್ಲಿಕಾಜು೯ನನೇ ಪತಿಯಂದು ನಂಬಿ ವೈರಾಗ್ಯದ ಸಾಕಾರಮೂತಿ೯ಯಾಗಿದ್ದಳು.ಅಲ್ಲಮರು ಅಕ್ಕಮಹಾದೇವಿಗೆ ನಿಲ್ಲು ತುಂಬು ಯೌವ್ವನದ ಸತಿ ನೀನು ಇತ್ತಲೇಕೆ ಬಂದೆಯವ್ವ. ನಿನ್ನ ಪತಿಯ ಹೇಳು ಇಲ್ಲವಾದರೆ ನಿನಗೆ ಇಲ್ಲಿ ಸ್ಥಳವಿಲ್ಲ.
ನನಗೆ ಚನ್ನಮಲ್ಲಿಕಾಜು೯ನನೇ ನನಗೆ ಗಂಡ ಎಂದೆ ಅಕ್ಕಮಹಾದೇವಿಯ ಹೇಳುತ್ತಾಳೆ. ಅಲ್ಲಮರು ಹಾಗೂ ಅಕ್ಕಮಹಾದೇವಿಯ ನಡುವೆ ಅನೇಕ ವಿಚಾರಗಳನ್ನು ಚಚಿ೯ಸಿದರು. ಬಸವಣ್ಣನವರು ಅಕ್ಕಮಹಾದೇವಿಗೆ ಉನ್ನತ ಸ್ಥಾನ ನೀಡಿದ್ದರು ಎಂದಳು.
ಸಾಹಿತಿ ರುದ್ರಮ್ಮ ಗಿಡ್ಡಪ್ಪಗೋಳ ಹಾಗೂ ಮ ಗು ಯಾದವಾಡ ಮಾತನಾಡಿದರು. ವೇದಿಕೆಯ ಮೇಲೆ ಡಾ.ಎಸ್ ಎಂ ಶಿರಗುಪ್ಪಿ ಸುನೀತಾ ಶಿರಗುಪ್ಪಿ ವೇದಿಕೆ ಮೇಲಿದ್ದರು.
ಇದೇ ಸಂದರ್ಭದಲ್ಲಿ ಇತ್ತಿಚಿಗೆ ಕಾಯಕಯೋಗಿ ಪ್ರಶಸ್ತಿಗೆ ಬಾಜನರಾದ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಇವರಿಗೆ ಕಸಾಪ ಗೌರವ ಅಧ್ಯಕ್ಷರಾದ ಭಾರತಿ ಪಾಟೀಲ ಮತ್ತು ಪದಾಧಿಕಾರಿಗಳು ಸನ್ಮಾನಿಸಿದರು.
ಕಮಲಾ ಮುರಾಳ. ರಾ.ಶಿ.ವಾಡೇದ. ಅಜು೯ನ ಶಿರೂರ. ಸುಖದೇವಿ ಅಲಬಾಳಮಠ. ಲಕ್ಷ್ಮಿ ಬಿರಾದಾರ. ಸಿದ್ಧರಾಮ ಹತ್ತಳ್ಳಿ. ರವಿ ಕಿತ್ತೂರ. ಶರಣಗೌಡ ಪಾಟೀಲ. ಲತಾ ಗುಂಡಿ.ಗAಗಮ್ಮ ರೆಡ್ಡಿ .ಸಹನಾ ಬಿರಾದಾರ. ಮುಂತಾದದವರು ಉಪಸ್ಥಿತರಿದ್ದರು ಭಾರತಿ ಗೊಂಗಡಿ ಪ್ರಾಥಿ೯ಸಿದರು. ಹಾಸಿಂಪೀರ ವಾಲಿಕಾರ ಸ್ವಾಗತಿಸಿ ಗೌರವಿಸಿದರು. ರಿಯಾಜ ಪಿಂಜಾರ ನಿರೂಪಿಸಿದರು. ಅಭಿಷೇಕ ಚಕ್ರವರ್ತಿ ಪ್ರಾಸ್ತಾವಿಕ ಮಾತನಾಡಿದರು. ಶೋಭಾ ಬಡಿಗೇರ ವಂದಿಸಿದರು.