
ಚನ್ನಮ್ಮನ ಕಿತ್ತೂರು,ಜೂ.೨೩: ಬೆಳಗಾವಿಯ ಶಿವಬಸವ ನಗರದ ನಾಗನೂರ ಶ್ರೀ ರುದ್ರಾಕ್ಷಿ ಮಠದ ಎಸ್.ಜಿ.ಬಿ.ಆಯ್.ಟಿ ಸಭಾಭವನದಲ್ಲಿ ಶ್ರೀಮತಿ ಪದ್ಮಾವತಿ ಷಣ್ಮುಖಪ್ಪ ಅಂಗಡಿ ಅವರ ಸ್ಮರಣೆಯಲ್ಲಿ ಮಹಿಳಾರತ್ನ' ಹಾಗೂಆದರ್ಶ ದಂಪತಿ’ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಸಮಾಜಸೇವಕಿ, ಮಾಜಿ ಜಿಪಂ ಹಾಗೂ ಕೆಪಿಸಿಸಿ ಸದಸ್ಯೆ ರೋಹಿನಿ ಬಾಬಾಸಾಹೇಬ ಪಾಟೀಲ ಇವರು ಮಹಿಳಾರತ್ನ ಹಾಗೂ ಆದರ್ಶ ದಂಪತಿ ಪ್ರಶಸ್ತಿಗೆ ಭಾಜನರಾಗಿದ್ದು ಇವರನ್ನು ಸನ್ಮಾನಿಸಲಾಯಿತು.

























