
ಚಿತ್ತಾಪುರ; ಏ.23:ಪಟ್ಟಣದ ಅಂಬೇಡ್ಕರ್ ವೃತ್ತ, ಭುವನೇಶ್ವರಿ ವೃತ್ತ, ಜನತಾ ವೃತ್ತ, ಮಾರುಕಟ್ಟೆ ರಸ್ತೆ, ಕಪಡಾ ಬಜಾರ್, ನಾಗಾವಿ ವೃತ್ತದಲ್ಲಿ ಪಿಎಸ್’ಐ ಮಂಜುನಾಥ ರೆಡ್ಡಿ ಆದೇಶದ ಮೇರೆಗೆ ಎಎಸ್’ಐ ವಿಠ್ಠಲ್ ಬಿರಾದಾರ ಅವರ ನೇತೃತ್ವದಲ್ಲಿ ಪೆÇಲೀಸ್ ಸಿಬ್ಬಂದಿಗಳು ಟ್ರಾಫಿಕ್ ಸಮಸ್ಯೆ ಬಗೆಹರಿಸಿದರು.
ಪಟ್ಟಣದಲ್ಲಿ ನಿನ್ನೆ ಬುಧವಾರದ ಸಂತೆಯಲ್ಲಿ ಅಡ್ಡಾದಿಡ್ಡಿ ನಿಲ್ಲಿಸುತ್ತಿದ್ದ ಬೈಕ್, ಟಂಟಂ, ಗೋಡ್ಸ್ ಆಟೋಗಳು, ಲಾರಿಗಳು ಸೇರಿದಂತೆ ಇನ್ನಿತರ ವಾಹನಗಳನ್ನು ತಡೆಹಿಡಿದರು.
ಜಿಲ್ಲೆ, ವಿವಿಧ ತಾಲೂಕು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ವ್ಯಾಪಾರ ವಹಿವಾಟಿಗಾಗಿ ತರಕಾರಿ, ಬಟ್ಟೆಗಳು, ಚಪ್ಪಲಿ ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನು ತಂದು ಮಾರಾಟ ಮಾಡಲು ಆಗಮಿಸಿ ರಸ್ತೆಯಲ್ಲಿಯೇ ಕುಳಿತು ಮಾರಾಟ ಮಾಡುತ್ತಿದ್ದನ್ನು ಕಂಡ ಪೆÇಲೀಸರು ಕೂಡಲೇ ಸ್ಥಳಕ್ಕೆ ಭೇಟಿ ನೀಡುವುದರ ಮೂಲಕ ತಮ್ಮ ತಮ್ಮ ಮಾರಾಟದ ವಸ್ತುಗಳನ್ನು ರಸ್ತೆ ಪಕ್ಕದಲ್ಲಿ ಇಟ್ಟು ಮಾರಾಟ ಮಾಡಬೇಕೆಂದು ಆದೇಶಿಸಿದರು. ಅದಕ್ಕೆ ವ್ಯಾಪರಸ್ಥರು ಕೂಡ ಸಹಕರಿಸಿದರು.
ನಾಗಾವಿ ಚೌಕ್, ಅಂಬೇಡ್ಕರ್ ವೃತ್ತ, ಭುವನೇಶ್ವರಿ ವೃತ್ತ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಬ್ಯಾರಿಕೇಡ್ ಹಾಕುವುದರ ಮೂಲಕ ತರಕಾರಿ ಮಾರುಕಟ್ಟೆ ಒಳಗಡೆ ಬರುವ ವಾಹನಗಳನ್ನು ತಡೆ ಹಿಡಿದು ಬೇರೆ ಮಾರ್ಗದ ರಸ್ತೆಯನ್ನು ಅನುಸರಿಸಲು ವಾಹನ ಸವಾರರಿಗೆ ತಿಳಿಸಲಾಯಿತು. ಬುಧವಾರ ಸಂತೆ ಇರುವ ಕಾರಣ ಮಧ್ಯಾಹ್ನ 2 ಗಂಟೆಯ ನಂತರ ದ್ವಿ ಚಕ್ರ ವಾಹನ ಹೊರತು ಪಡಿಸಿ ಬೇರೆ ಯಾವುದೇ ವಾಹನಗಳಿಗೆ ತರಕಾರಿ ಮಾರುಕಟ್ಟೆ ಒಳಗಡೆ ಪ್ರವೇಶವಿಲ್ಲ ಎನ್ನುವ ಬ್ಯಾನರ್’ಗಳನ್ನು ಹಾಕಲಾಗಿದೆ. ಹೀಗಾಗಿ ವಾಹನ ಸವಾರರು ಸಹಕರಿಸುವುದರ ಮೂಲಕ ವ್ಯಾಪರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಇದೇ ವೆಳೆ ಬೈಕ್’ಗಳನ್ನು ಹೊರತು ಪಡಿಸಿ ಕಾರ್, ಜೀಪ್, ಟ್ರ್ಯಾಕ್ಟರ್ ಸೇರಿದಂತೆ ಇನ್ನಿತರ ವಾಹನಗಳು ಮಾರುಕಟ್ಟೆಯಲ್ಲಿ ಪ್ರವೇಶಿಸುತ್ತಿದ್ದಂತೆ ಅವುಗಳನ್ನು ತಡೆಯುವ ಮೂಲಕ ಬೇರೆ ರಸ್ತೆ ಮೂಲಕ ಸಂಚರಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಪೆÇಲೀಸ್ ಸಿಬ್ಬಂದಿಗಳು ಇದ್ದರು.






















