Home ಜಿಲ್ಲೆ ಕಲಬುರಗಿ ಅಪ್ಪಾ ಪಬ್ಲಿಕ್ ಶಾಲೆ ಸ್ಕೌಟ್ಸ್,ಗೈಡ್ಸ್ ಗಾಯನ ತಂಡ ಜಿಲ್ಲಾ ತಂಡಕ್ಕೆ ಆಯ್ಕೆ

ಅಪ್ಪಾ ಪಬ್ಲಿಕ್ ಶಾಲೆ ಸ್ಕೌಟ್ಸ್,ಗೈಡ್ಸ್ ಗಾಯನ ತಂಡ ಜಿಲ್ಲಾ ತಂಡಕ್ಕೆ ಆಯ್ಕೆ

ಕಲಬುರಗಿ,ಸೆ.11: ಅಪ್ಪಾ ಪಬ್ಲಿಕ್ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಗಾಯನ ತಂಡಗಳು ಕಲಬುರಗಿಯ ಸಂತ ಜಾನ್ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಗೀತಗಾಯನ (ದೇಶ ಭಕ್ತಿ) ಸ್ಪರ್ಧೆಯಲ್ಲಿ ಮೊದಲ ಸ್ಥಾನ ತಮ್ಮದಾಗಿಸಿಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದು ಕೊಟ್ಟಿದ್ದಾರೆ.
ಸ್ಕೌಟ್ಸ್ ನಲ್ಲಿ 12 ತಂಡಗಳು ಮತ್ತು ಗೈಡ್ಸ್ ನಲ್ಲಿ 13 ತಂಡಗಳು ಭಾಗವಹಿಸಿದ್ದವು. ಈ ಸ್ಪರ್ಧೆಯಲ್ಲಿ ಅಪ್ಪಾ ಪಬ್ಲಿಕ್
ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಗಾಯನ ಪ್ರತಿಭೆಯನ್ನ ಪ್ರದರ್ಶಿಸಿದರು. ಅಪ್ಪಾ ಪಬ್ಲಿಕ್‍ಶಾಲೆಯ ಸ್ಕೌಟ್ಸ್ ಗೈಡ್ಸ್ ತಂಡಗಳು ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸಿದವು. ಸ್ಕೌಟ್ಸ್ ತಂಡವು ಪ್ರಥಮ ಸ್ಥಾನ ಹಾಗೂ ಗೈಡ್ಸ್ ದ್ವಿತೀಯ ಸ್ಥಾನ ಪಡೆದು ಶಾಲೆಯ ಗೌರವಕ್ಕೆ ಪಾತ್ರರಾಗಿದ್ದಾರೆಮತ್ತು ಮುಂಬರುವ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಶರಣಬಸವ ವಿಶ್ವವಿದ್ಯಾಲಂiÀÀ್ದ ಕುಲಾಧಿಪತಿ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್ ಅಪ್ಪಾ ಅವರು ವಿದ್ಯಾರ್ಥಿಗಳ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿ ಆಶೀರ್ವದಿಸಿದರು.
ಸ್ಕೌಟ್ಸ್ ತಂಡದಲ್ಲಿ ಸಮರ್ಥ್ ಬಿ ಹಡಪದ್, ಶುಭಮ್ ಹಲಮಠ, ಪ್ರಜ್ವಲ್ ಸಿರ್ಸಿಗಿ,ಅಲೋಕ್ ಕೋಸಗಿ, ಸುದರ್ಶನ್ ಸ್ ಕೋಲ್ಕಾರ್, ಶಿವರಾಜ್ ನ್ ಪೂಜಾರಿ, ಶಿವಾನಂದ್ ಬಿ ಪಾಟೀಲ್, ಪೃಥ್ವಿರಾಜ್ ರಾಥೋಡ್ ಮತ್ತು ಗೈಡ್ಸ್ ತಂಡದಲ್ಲಿ ಐಶ್ವರ್ಯ ಕರಲ್ಲಿ, ಆಧ್ಯಾ ಧುತ್ತರಗಿ, ಆರುಷಿ ದೊಡ್ಡಮನಿ, ಸೌಮ್ಯ ಸಾಲಿ, ಶ್ರೀಲಕ್ಷ್ಮಿ ಸಜ್ಜನ್, ಐಶ್ವರ್ಯ ಅಡಕಿ, ಮಯೂರಿ ರೆಡ್ಡಿ, ಸಾನ್ವಿ ಪೂಜಾರಿ ಇದ್ದರು.