Home ಜಿಲ್ಲೆ ಏಪ್ರಿಲ್ 25ರಿಂದ ವ್ಯಕ್ತಿತ್ವ ವಿಕಸನ ಶಿಬಿರ.

ಏಪ್ರಿಲ್ 25ರಿಂದ ವ್ಯಕ್ತಿತ್ವ ವಿಕಸನ ಶಿಬಿರ.

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.16: ಇಲ್ಲಿನ ಗಾಧಿನಗರ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಏ. 25 ರಿಂದ ಮೇ 5 ರ ವರೆಗೆ ಪ್ರತಿದಿನ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ಶ್ರೀರಾಮಕೃಷ್ಣ ಮಿಷನ್ ನಿಂದ. ವಿವೇಕ ವಿಹಾರ ಎಂಬ ವ್ಯಕ್ತಿತ್ವ ವಿಕಸನ ಶಿಬಿರ ಹಮ್ಮಿಕೊಳ್ಳಲಾಗಿದೆ.

ಬಳ್ಳಾರಿ ಶ್ರೀರಾಮಕೃಷ್ಣ ಮಿಷನ ಮುಖ್ಯಸ್ಥ ಸ್ವಾಮಿ ಮಂಗಳಾನಾಥಾನಂದ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಶಿಬಿರ ಜರುಗಲಿದೆ. 6ರಿಂದ 9ನೇ ತರಗತಿಯ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಬಹುದು. ಧ್ಯಾನ, ಆಧ್ಯಾತ್ಮಿಕ ಚಟುವಟಿಕೆಗಳು, ಶಾರೀರಕ-ಕ್ರೀಡಾ ಚಟುವಟಿಕೆಗಳು, ಬೌದ್ಧಿಕ ಹಾಗೂ ವ್ಯಕ್ತಿತ್ವ ನಿರ್ಮಾಣದ ಚಟುವಟಿಕೆಗಳು ಶಿಬಿರದಲ್ಲಿ ನಡೆಯಲಿವೆ. ನೋಂದಣಿಗೆ ಏ. 23 ಕೊನೆಯ ದಿನವಾಗಿದೆ ಹೆಚ್ಚಿನ ಮಾಹಿತಿಗೆ 7676161099, 9008462344 ಅಥವಾ 7892391348ನ್ನು ಸಂಪರ್ಕಿಸಬಹುದು ಎಂದು ಶಿಬಿರದ ಸಂಯೋಜಕ ಜಗನ್ನಾಥ ತಿಳಿಸಿದ್ದಾರೆ.