Home ಜಿಲ್ಲೆ ಕಲಬುರಗಿ ಶರಣರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಿ : ಡಾ. ಸುಖದೇವಿ ಘಂಟೆ

ಶರಣರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಿ : ಡಾ. ಸುಖದೇವಿ ಘಂಟೆ

ಆಳಂದ: ಪಟ್ಟಣ ಏಕಾಂತ ರಾಮಯ್ಯ ಮಂದಿರದಲ್ಲಿ ನಡೆದ 27ನೇ ದಿನದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಎ.ವಿ.ಪಾಟೀಲ ಪದವಿ ಮಹಾವಿದ್ಯಾಲಯದ ಉಪನ್ಯಾಸಕಿ ಮಾತನಾಡಿ
12ನೇ ಶತಮಾನದ ವಚನ ಚಳುವಳಿ ಕನ್ನಡ ಸಾಹಿತ್ಯ ಹಾಗೂ ಸಾಮಾಜಿಕ ಚಿಂತನೆ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ . ಬಸವಣ್ಣ ಅಲ್ಲಮ ಪ್ರಭು ಅಕ್ಕಮಹಾದೇವಿ ಸಿದ್ದರಾಮ ಚೆನ್ನ ಬಸವಣ್ಣ ಮುಂತಾದ ವಚನಕಾರರು ಕಾಯಕ ದಾಸೋಹ ಸಮಾನತೆ ಮಾನವೀಯತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಮಹತ್ವ ನೀಡಿದರು . ದಾಸೋಹ ಎಂದರೆ ತಾನು ಗಳಿಸಿದ ಸಂಪತ್ತು ಜ್ಞಾನ ಶ್ರಮ ಮತ್ತು ಸಾಮಥ್ರ್ಯವನ್ನು ಕೇವಲ ತನ್ನ ಸ್ವಾರ್ಥಕ್ಕಾಗಿ ಬಳಸದೆ ಸಮಾಜದ ಒಳತಿಗಾಗಿ ಹಂಚಿಕೊಳ್ಳುವ ಮನೋಭಾವ ಬಸವಣ್ಣನವರ ಚಿಂತನೆಯ ಪ್ರಕಾರ ಕಾಯಕದಿಂದ ಗಳಿಸಿದ ಸಂಪತ್ತಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನದನ್ನು ಸಮಾಜಕ್ಕೆ ಅರ್ಪಿಸಬೇಕು ಕಾಯಕ ಮತ್ತು ದಾಸೋಹ ಪ್ರಮಾಣಿಕವಾಗಿ ದುಡಿದು ಗಳಿಸುವುದು ಕಾಯಕ ಆ ಗಳಿಕೆಯನ್ನು ಸಮಾಜದ ಹಿತಕ್ಕಾಗಿ ಬಳಸುವುದು ದಾಸೋಹ . ಸಮಾನತೆಯ ಭಾವನೆ ಜಾತಿ ವರ್ಗ ಲಿಂಗ ಮತ್ತು ಆರ್ಥಿಕ ಭೇದಗಳನ್ನು ವಿರೋಧಿಸಿದ ವಚನಕಾರರು ಎಲ್ಲಾ ಮಾನವರು ಒಂದೇ ಎಂದು ಸಾರಿದರು . ದಾಸೋಹ ಈ ಸಮಾನತೆಯ ಬದುಕಿಗೆ ಆಧಾರವಾಯಿತು . ದಾಸೋಹದಲ್ಲಿ. ‘ ನನ್ನದು’ ಎಂಬ ಸ್ವಾರ್ಥಕ್ಕಿಂತ ನಮ್ಮದು ಎಂಬ ಸಮುದಾಯಿಕ ಭಾವನೆ ಮುಖ್ಯ.
ಇತರರ ಹಸಿವು, ಕಷ್ಟ,ಮತ್ತು ಅಗತ್ಯಗಳಿಗೆ ಸ್ಪಂದಿಸುವುದೇ ನಿಜವಾದ ದಾಸೋಹ.
ಹಸಿದವರಿಗೆ ಅನ್ನ ನೀಡುವುದು ವಚನ ಪರಂಪರೆಯಲ್ಲಿ ಪ್ರಮುಖ ಸೇವೆಯಾಗಿದೆ ಅನುಭವ ಮಂಟದಂತಹ ಸಾಮಾಜಿಕ ಅಧ್ಯಾತ್ಮಿಕ ವಾತಾವರಣದಲ್ಲಿ ಪರಸ್ಪರ ಹಂಚಿಕೊಂಡು ಬದುಕುವ ಆದರ್ಶ ಕಂಡುಬರುತ್ತದೆ . ದಾಸೋಹ ಕೇವಲ ಹಣ ಅಥವಾ ಅನ್ನಕ್ಕೆ ಸೀಮಿತವಲ್ಲ ತಾನು ಪಡೆದ ಜ್ಞಾನವನ್ನು ಇತರರಿಗೆ ಹಂಚಿಕೊಳ್ಳುವುದು ದಾಸೋಹವೆ. ವಚನಕಾರರು ತಮ್ಮ ಅನುಭವ ಮತ್ತು ವಿಚಾರಗಳನ್ನು ವಚನಗಳ ಮೂಲಕ ಜನರಿಗೆ ಹಂಚಿದರು , ಸಂಪತ್ತು ವ್ಯಕ್ತಿಯ ಅಹಂಕಾರ ಅಥವಾ ಶೋಷಣೆಯ ಸಾಧನವಾಗಬಾರದು ಅಗತ್ಯವಿರುವವರಿಗೆ ನೆರವಾಗುವ ಮೂಲಕ ಸಂಪತ್ತಿಗೆ ಸಾಮಾಜಿಕ ಅರ್ಥ ನೀಡಬೇಕು ಎಂಬುದು ವಚನಕಾರರ ಆಶಯವಾಗಿತ್ತು . ಬಸವಣ್ಣನವರು ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ಪ್ರಾಮಾಣಿಕ ದುಡಿಮೆಗೆ ಗೌರವ ನೀಡಿದರು . ಕಾಯಕದಿಂದ ದೊರೆತ ಸಂಪತ್ತು ಸಮಾಜದ ಒಳಿತಿಗೂ ಬಳಕೆಯಾಗಬೇಕು ಎಂಬ ದಾಸೋಹ ಮೌಲ್ಯವನ್ನು ಪ್ರತಿಪಾದಿಸಿದರು ಅವರ ಚಿಂತನೆ ವ್ಯಕ್ತಿಯ ಮೌಲ್ಯವನ್ನು ಪ್ರತಿಪಾದಿಸಿದರು. ಅವರ ಚಿಂತನೆ ವ್ಯಕ್ತಿಯ ಆಧ್ಯಾತ್ಮಿಕ ಬೆಳವಣಿಗೆಯ ಜೊತೆಗೆ ಸಾಮಾಜಿಕ ಹೊಣೆಗಾರಿಕೆ ಯನ್ನು ಒತ್ತಿ ಹೇಳುತ್ತದೆ. ವಚನ ಸಾಹಿತ್ಯದ ದಾಸೋಹ ಪ್ರಜ್ಞೆ ಹಂಚಿಕೊಂಡು ಬದುಕುವುದು ದುಡಿದು ಗಳಿಸುವುದು . ಪರರಿಗೆ ನೆರವಾಗುವುದು ಮತ್ತು ಸಮಾನತೆಯನ್ನು ಬೆಳೆಸುವುದು ಎಂಬ ವಿಶಾಲ ಜೀವನ ದರ್ಶನವಾಗಿದೆ . ಇಂದಿನ ಸಮಾಜದಲ್ಲಿಯೂ ಬಡತನ ಅಸಮಾನತೆ ಮತ್ತು ಸ್ವಾರ್ಥ ಹೆಚ್ಚುತ್ತಿರುವ ಸಂದರ್ಭದಲ್ಲಿ ದಾಸೋಹದ ಸಂದೇಶವು ಅತ್ಯಂತ ಪ್ರಸ್ತುತವಾಗಿದೆ ಆದ್ದರಿಂದ ದಾಸೋಹ ಪ್ರಜ್ಞೆ ವಚನ ಸಾಹಿತ್ಯದ ಪ್ರಮುಖ ಸಾಮಾಜಿಕ ಹಾಗೂ ಮಾನವೀಯ ಮೌಲ್ಯವಾಗಿದೆ ಆದ್ದರಿಂದ ಶರಣರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ತುಂಬಾ ಮುಖ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವೈಶಾಲಿ ಪಾಟೀಲ ಸುಹಾಸಿನಿ ಚಿಂಚೋಳಿ ಡಾ. ಅವಿನಾಶ ಎಸ್. ದೇವನೂರ . ವಿಶೇಷ ಸನ್ಮಾನಿತರಾಗಿ ಅಶೋಕ ಮಸುಂದೆ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ದಿಗಂಬರ ಜೈನ ಪಾಠಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟರು ವಿದ್ಯಾರ್ಥಿಗಳು ಅದ್ಭುತವಾಗಿ ನೃತ್ಯ ಪ್ರದರ್ಶಿಸುವ ಮೂಲಕ ಜನರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಸಂಜಯ ಪಾಟೀಲ ಅಪ್ಪಾಸಾಹೇಬ ತೀರ್ಥೆ. ಸಂತೋಷ ವೇದಪಾಠಕ . ಶಿವಲಿಂಗಯ್ಯ ಹೆಬಳಿ ನಾಮದೇವ ಕೊರಳ್ಳಿ.ಭೀಮಾಶಂಕರ ಜಮಗಿ. ಕಲ್ಯಾಣಿ ಬಿಕಮಳೆ. ಶಿವಲಿಂಗಪ್ಪ ಮಂಟಗಿ, ನಾಗರಾಜ ಘಂಟೆ.ಲಕ್ಷ್ಮೀಕಾಂತ ಬೀದಿ ಮಲ್ಲಿನಾಥ ವಚ್ಚೆ.
ಸುರೇಖಾ ಸ್ವಾಮಿ ಶರಣಪ್ಪ ಘಂಟೆ .ಸೋಮನಾಥ ವಿಭೂತೆ. ಮುಂತಾದವರು ಉಪಸ್ಥಿತರಿದ್ದರು.