Home ಜಿಲ್ಲೆ ಕಲಬುರಗಿ ಮಾನವ ಕಲ್ಯಾಣಕ್ಕೆ ಆದಿಶಂಕರರ ತತ್ವಗಳು ದಾರಿದೀಪ: ಪ್ರಭಾಕರ ಜೋಶಿ

ಮಾನವ ಕಲ್ಯಾಣಕ್ಕೆ ಆದಿಶಂಕರರ ತತ್ವಗಳು ದಾರಿದೀಪ: ಪ್ರಭಾಕರ ಜೋಶಿ

ಕಲಬುರಗಿ,ಏ.23: ವೇದಗಳ ಸಾರವನ್ನೇ ತಮ್ಮ ‘ಅದ್ವೈತ’ ಸಿದ್ಧಾಂತದ ಮೂಲಕ ಜಗತ್ತಿಗೆ ಪರಿಚಯಿಸಿದ ಶ್ರೀ ಶಂಕರಾಚಾರ್ಯರು ವಿಶ್ವದ ಮಹಾನ್ ದಾರ್ಶನಿಕರಾಗಿದ್ದಾರೆ. ಅವರ ದರ್ಶನ ಶಾಸ್ತ್ರವು ಕೇವಲ ಒಂದು ವರ್ಗಕ್ಕಲ್ಲ, ಬದಲಾಗಿ ಇಡೀ ಮಾನವ ಜನಾಂಗದ ಕಲ್ಯಾಣಕ್ಕೆ ಪೂರಕವಾಗಿದೆ ಎಂದು ರಂಗಾಯಣದ ಮಾಜಿ ನಿರ್ದೇಶಕ ಹಾಗೂ ಪತ್ರಕರ್ತ ಪ್ರಭಾಕರ ಜೋಶಿ ಹೇಳಿದರು.
ನಗರದಲ್ಲಿ ಇಂದು ಎಸ್ ಎಂ ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶ್ರೀ ಶಂಕರಾಚಾರ್ಯ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಶಂಕರಾಚಾರ್ಯರು ವೇದಗಳಿಗೆ ಹೊಸ ಭಾμÉಯ ಬರೆಯುವ ಮೂಲಕ ಸಮಾಜಕ್ಕೆ ಸರಿಯಾದ ದಾರಿಯನ್ನು ತೋರಿಸಿಕೊಟ್ಟಿದ್ದಾರೆ. ಅವರು ಯಾವುದೇ ಹೊಸ ಸಿದ್ಧಾಂತವನ್ನು ಹುಟ್ಟುಹಾಕಲಿಲ್ಲ, ಬದಲಾಗಿ ಅಸ್ತಿತ್ವದಲ್ಲಿದ್ದ ವೇದಗಳ ಜ್ಞಾನವನ್ನೇ ದರ್ಶನವನ್ನಾಗಿ ರೂಪಿಸಿದರು ಎಂದು ತಿಳಿಸಿದರು.
ಧರ್ಮವು ಸರಿಯಾದ ದಾರಿಯಲ್ಲಿದ್ದರೆ ಅದು ಬದುಕಿಗೆ ಬೆಳಕಾಗುತ್ತದೆ. ಅದೇ ಧರ್ಮ ಹಾದಿ ತಪ್ಪಿದರೆ ಸಮಾಜಕ್ಕೆ ಬೆಂಕಿಯಾಗಿ ಪರಿಣಮಿಸುತ್ತದೆ. ಮನುಷ್ಯರು ಸರಿ-ತಪ್ಪುಗಳ ವಿವೇಚನೆಯೊಂದಿಗೆ ಶಂಕರಾಚಾರ್ಯರ ಅಹಿಂಸಾತ್ಮಕ ಮತ್ತು ಜ್ಞಾನಯುಕ್ತ ಹಾದಿಯನ್ನು ಅನುಸರಿಸುವುದು ಇಂದಿನ ಕಾಲದ ಅವಶ್ಯಕತೆಯಾಗಿದೆ ಎಂದರು.
ಶ್ರೀ ಶೃಂಗೇರಿ ಶಾರದಾ ಪೀಠ ವಿಶೇಷ ಪ್ರತಿನಿಧಿ ಪ್ರಕಾಶ ಎಚ್. ಕುಲಕರ್ಣಿ ಅವರು ಮಾತನಾಡಿ, ಶೃಂಗೇರಿ ಜಗದ್ಗುರುಗಳ ಆಶಯದಂತೆ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಶಂಕರ ಜಯಂತಿಯನ್ನು ಅಧಿಕೃತವಾಗಿ ಆಚರಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.
ಆದಿ ಶಂಕರಾಚಾರ್ಯರು 8ನೇ ಶತಮಾನದಲ್ಲೇ ಸಮಾಜದಲ್ಲಿ ಸಮಾನತೆ ಹಾಗೂ ಸ್ತ್ರೀ ಸ್ವಾತಂತ್ರ್ಯದ ತತ್ವಗಳನ್ನು ಸಾರಿದ್ದರು. ಅವರ ಅದ್ವೈತ ಸಿದ್ಧಾಂತವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಶಿವಪ್ರಭು ಹಿರೇಮಠ ಅವರು ಮಾತನಾಡಿ, ಇಂದಿನ ಸಮಾಜದಲ್ಲಿ ನಮಗೆ ಏಳನೇ ಶತಮಾನದ ಶಂಕರಾಚಾರ್ಯರು ಮತ್ತು ಬಸವಣ್ಣನವರಂತಹ ಶರಣರು ನೆನಪಿದ್ದಾರೆ ಎಂದರೆ ಅದಕ್ಕೆ ಅವರು ಸಮಾಜಕ್ಕೆ ನೀಡಿದ ಕೊಡುಗೆಯೇ ಕಾರಣ. ಶರಣರ ವಿಚಾರಗಳನ್ನು ನಾವು ಕೇವಲ ಭಾಷಣಕ್ಕೆ ಸೀಮಿತಗೊಳಿಸುತ್ತಿದ್ದೇವೆ, ಆದರೆ ಅವುಗಳನ್ನು ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿಲ್ಲ. ಪ್ರವಚನದಲ್ಲಿ ಪ್ರೀತಿಯ ಬಗ್ಗೆ ಕೇಳುವ ನಾವು ಮನೆಗೆ ಬಂದ ಕೂಡಲೇ ನೆರೆಹೊರೆಯವರೊಂದಿಗೆ ಜಗಳವಾಡುತ್ತೇವೆ. ಇಂದಿನ ಶಿಕ್ಷಿತ ಸಮಾಜದಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ ಎಂದರು.
ಯಾದಗಿರಿ ಪಶುಪಾಲನ ಇಲಾಖೆ ಪಶು ವೈದ್ಯಕೀಯ ಪರೀಕ್ಷಕಿ ಅನುರಾಧ ನಾಯಕ್ ಅವರು ಉಪನ್ಯಾಸ ನೀಡಿ ಮಾತನಾಡಿ, ಆದಿ ಶಂಕರಾಚಾರ್ಯರು ಕೇವಲ ದಾರ್ಶನಿಕರಲ್ಲ, ಅವರು ಅಧ್ಯಾತ್ಮದ ಮೂಲಕ ಭಾರತವನ್ನು ಭಾವನಾತ್ಮಕವಾಗಿ ಒಂದುಗೂಡಿಸಿದ ಮಹಾನ್ ಸಂಘಟನಾ ಚತುರರು. ಧರ್ಮವು ಸಂಕಷ್ಟದಲ್ಲಿದ್ದಾಗ ಶಂಕರಾಚಾರ್ಯರು ‘ಅದ್ವೈತ ಸಿದ್ಧಾಂತ’ದ ಮೂಲಕ ಜೀವ ಮತ್ತು ಪರಮಾತ್ಮ ಒಂದೇ ಎಂದು ಸಾರಿದರು. ಬ್ರಹ್ಮ ಸತ್ಯ, ಜಗತ್ತು ಮಿಥ್ಯ ಎಂಬ ತತ್ವದಡಿ ನಾಲ್ಕು ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪಿಸಿ ಸಾಂಸ್ಕೃತಿಕ ಏಕತೆ ಮೂಡಿಸಿದರು. ಸ್ತ್ರೀ ಸಮಾನತೆ ಮತ್ತು ದೀನದಲಿತರ ಬಗ್ಗೆ ಅವರಿಗಿದ್ದ ಕಳಕಳಿ ಇಂದಿಗೂ ನಮಗೆ ಮಾರ್ಗದರ್ಶಕವಾಗಿದೆ ಎಂದು ಅವರು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕೆ ಜಗದೀಶ್ವರಿ ಅ. ನಾಸಿ ಸ್ವಾಗತಿಸಿದರು. ಸಂತೋμï ಕುಲಕರ್ಣಿ ವಂದಿಸಿದರು. ಶಂಕರ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಋಷಿಕೇಶ್ ಚೌಡಾಪುರಕರ್ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.