
ಕಲಬುರಗಿ: ಮೇ.5:ಕರ್ನಾಟಕದಲ್ಲಿ ಕನ್ನಡಿಗರೇ ಸ್ವಾಭಿಮಾನಿಗಳು ಹಾಗೂ ಸಾರ್ವಭೌಮರು, ಕನ್ನಡಕ್ಕೆ ಕಳಸ ಶಕ್ತಿ ಸ್ಫೂರ್ತಿ ಡಾ. ರಾಜಕುಮಾರ್ ಅವರ ಹೆಸರಿಗೆ ಅಗೌರವ ತಂದು ವಿವಾದಾತ್ಮಕ ಹೇಳಿಕೆ ನೀಡಿ ಸಮಸ್ತ ಕನ್ನಡಿಗರ ಸ್ವಾಭಿಮಾನ ಕೆಣಕಿರುವುದು ಸರಿಯಲ್ಲ, ಚೇತನ್ ಬಹಿರಂಗವಾಗಿ ಕನ್ನಡಿಗರ ಕ್ಷಮೆ ಕೇಳಬೇಕು ಸರ್ಕಾರ ಗಂಭೀರವಾಗಿ ಪರಿಗಣಿಸಿ ಚೇತನ್ ನನ್ನು ಗಡಿಪಾರು ಮಾಡಬೇಕು ಎಂದು ಕರವೇ(ಪ್ರವೀಣ ಶೆಟ್ಟಿ ಬಣದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಷೇಕ ಬಾಲಾಜಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ಡಾ. ರಾಜಕುಮಾರ್ ರವರ ಸ್ಮಾರಕ ಯಾವುದೇ ಕುಟುಂಬದ ಆಸ್ತಿಯಲ್ಲ ಕನ್ನಡಿಗರ ಆಸ್ತಿ,ರಾಜ್ಯ ಸರ್ಕಾರ ವಾರ್ತಾ ಇಲಾಖೆ, ಕಂಠೀರವ ಸ್ಟುಡಿಯೋಗೆ ಸೇರಿದ್ದು ಕನ್ನಡಿಗರ ಆರಾಧ್ಯ ನಟ ಡಾ. ರಾಜ್ ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲದ, ಕನಿಷ್ಠ ಜ್ಞಾನವೂ ಇಲ್ಲದ ಚೇತನ್ ಮಹಾನ್ ನಟರ ಬಗ್ಗೆ ಕೇವಲವಾಗಿ ಮಾತನಾಡಿ ಕನ್ನಡಿಗರನ್ನು ಕೆರಳಿಸಿದೆ.ಅವನನ್ನು ರಾಜ್ಯದಿಂದಲೇ ಹೊರ ಹಾಕಬೇಕು.ಅನೇಕ ಸ್ಮಾರಕಗಳು ಕನ್ನಡ ಸಂಸ್ಕøತಿ ಇಲಾಖೆ ಸೇರಿದ್ದು, ಕೆಲವು ಅರಣ್ಯ ಇಲಾಖೆಗೆ ಸೇರಿದ್ದು, ರಾಜ್ಯ ಸರ್ಕಾರದಿಂದ ನೂರಾರು ಎಕರೆ ಜಮೀನು ಗುತ್ತಿಗೆ ಪಡೆದು ಶಿಕ್ಷಣ ಸಂಸ್ಥೆ ತೆರೆದು ಹಣ ಮಾಡುತ್ತಿದ್ದಾರೆ. ಅಮೇರಿಕಾದ ಸರ್ವಶೇಷ ಕೆಂಟಕಿ ಕರ್ನಲ್ ಪ್ರಶಸ್ತಿ ಪಡೆದ ನಟ ಇದರಿಂದ ಕನ್ನಡಿಗರ ಶಕ್ತಿಯನ್ನು ಪ್ರಪಂಚಕ್ಕೆ ಪರಿಚಯಿಸಿದ ಕೀರ್ತಿ ಡಾ.ರಾಜಕುಮಾರ್ ಅವರಿಗೆ ಸಲ್ಲುತ್ತದೆ ಎಂದರು. ಬೇರೆ ಭಾಷೆಗಳಿಂದ ಪಾತ್ರ ಮಾಡಲು ಕರೆದರೂ ತಿರಸ್ಕರಿಸಿ ಕನ್ನಡ ತಾಯಿ ಭಾಷೆ ಎಂದು ಗೌರವಿಸಿದ ಏಕೈಕ ನಟರು.ಸಾವಿರಾರು ಪ್ರಶಸ್ತಿ ಬಂದರು ಯಾವುದೇ ಜಂಬತೋರದ ರಾಜ್ ಅವರ ನಿಧನ ನಂತರ ಅವರ ಸ್ಮಾರಕಕ್ಕೆ ನೀಡಲಾದ ಜಾಗವನ್ನು ಯಾರೂ ಪ್ರಶ್ನಿಸಬಾರದು ಎಂದರು.
ಆಕಾಶದಲ್ಲಿರುವ ಕನ್ನಡ ಅಭಿಮಾನಿ ದೇವರುಗಳು ಸಮಸ್ತ ಕನ್ನಡಿಗರು ಸೂರ್ಯ ಚಂದ್ರ ನಕ್ಷತ್ರ ಇರುವವರಿಗೂ ಗೌರವಿಸುತ್ತಾರ, ಆರಾಧಿಸುತ್ತಾರೆ ಪೂಜಿಸುತ್ತಾರೆ ಚೇತನ್ ವಿವಾದಾತ್ಮಕ ಹೇಳಿಕೆಗೆ ಬೆಂಬಲ ನೀಡುವವರು ಕೂಡ ಹೊರನಾಡಿನಿಂದ ಬಂದವರು, ಡಾ. ರಾಜಕುಮಾರ ರವರಿಗೆ ರಾಜ್ಯ ಸರ್ಕಾರವೇ ಗೌರವ ಪೂರ್ವಕವಾಗಿ ಸ್ಥಳ ನೀಡಿರುವುದು ಇದು ಕನ್ನಡಿಗರ ಆಸ್ತಿ ಚೇತನ್ ಜಾಗದ ಬಗ್ಗೆ ಉದ್ದೇಶ ಪೂರ್ವಕವಾಗಿ ಅಪಸ್ವರ ಎತ್ತಿರುವುದು ಸಮಸ್ತ ಕನ್ನಡಿಗರಿಗೆ ಮಾಡಿದ ಘನ ಘೋರ ಅಪಚಾರವಾಗಿದೆ. ಆದ್ದರಿಂದ ಕನ್ನಡಿಗರ ಭಾವನೆಯನ್ನು ಕೆರಳಿಸಿರುವ ಕನ್ನಡ ನಾಡಿನಲ್ಲಿ ಚೇತನ್ ಹೇಳಿಕೆ ಗಂಭೀರ ಸ್ವರೂಪ ಪಡೆಯುತ್ತಿದ್ದು ರಾಜ್ಯ ಸರ್ಕಾರ ಮೌನ ವಹಿಸಿರುವುದು ಸರಿಯಲ್ಲ ಎಂದರು.ಕೂಡಲೇ ನಟ ಚೇತನ ಅವರನ್ನು ರಾಜ್ಯದಿಂದಲೇ ಗಡಿಪಾರು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.






















