
ಕಲಬುರಗಿ,ಮೇ.3: ಸಂಸ್ಕಾರ ಭಾರತಿವತಿಯಿಂದ ಬುದ್ಧ ಪೂರ್ಣಿಮೆಯ ಅಂಗವಾಗಿ ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮವು ನಗರದ ಕಲಾಮಂಡಲದಲ್ಲಿ ಯಶಸ್ವಿಯಾಗಿ ನೆರವೇರಿತು.ಮಹಾತ್ಮ ಬುದ್ಧನ ಪ್ರತಿಮೆಗೆ ಪುಷ್ಪ ಸಮರ್ಪಣೆ ಮಾಡಿ ಸಸಿಗೆ ನೀರುಣಿಸುವ ಮೂಲಕ ಬಂದ ಅತಿಥಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬುದ್ಧನೆಂಬ ಬೆಳಕು ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ ಸಿಯುಕೆ ಸಹ ಪ್ರಾಧ್ಯಾಪಕ ಡಾ. ರೋಹಿಣಾಕ್ಷ ಶಿರ್ಲಾಲು ಅವರು ಬುದ್ಧನ ಮೌಲ್ಯಗಳು, ತತ್ವಗಳು ಶಾಂತಿ, ಅಹಿಂಸೆ ಹಾಗೂ ಮಾನವೀಯತೆಯ ಕುರಿತು ಉಪನ್ಯಾಸದಲ್ಲಿ ತಿಳಿಸಿದರು.
ಬುದ್ಧನ ಪಂಚಶೀಲ ತತ್ವಗಳು ಅಹಿಂಸೆ ,ಕಳ್ಳತನ ಮಾಡದಿರುವುದು, ಸುಳ್ಳು ಹೇಳದಿರುವುದು ,ಮಾದಕ ವಸ್ತುಗಳ ಸೇವೆಯಿಂದ ದೂರವಿರುವುದು ಮುಂತಾದವುಗಳ ಬಗ್ಗೆ ವಿಸ್ತಾರವಾಗಿ ವಿವರಿಸಿದರು. ಅವರ ಮಾತುಗಳು ಶ್ರೋತೃಗಳಿಗೆ ಚಿಂತನೆಗೆ ದಾರಿತೋರಿಸಿದವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ವಾಸುದೇವ ಸೇಡಂ , ಬುದ್ಧನ ತತ್ವಗಳು ಇಂದಿನ ಸಮಾಜಕ್ಕೆ ಬಹಳ ಅಗತ್ಯವೆಂದು ಅಭಿಪ್ರಾಯಪಟ್ಟರು. ಸುಮನ ಹಾಗೂ ವಿದ್ಯಾ ನೃತ್ಯ ಪ್ರದರ್ಶನ ನೀಡಿದರು. ಭವರಾಮ ,ಆತ್ಮರಾಮ , ಆಶ್ಚರ್ಯ ಮೋರೆ, ಸುಧೀಂದ್ರ ಕುಲಕರ್ಣಿ, ಪ್ರಶಾಂತ ಕಂಬಾರ, ಅಥರ್ವ ಕಂಬಾರ ಹಾಗೂ ಸಂಗಡಿಗರು ಸಂಗೀತ ಕಾರ್ಯಕ್ರಮ ನೀಡಿದರು.
ಸಚಿನ್ ಶೆಟ್ಟಿ ನಿರೂಪಿಸಿದರು. ಅನಿತಾ ಸುಬೇದಾರ್ ವಂದಿಸಿದರು. ಸಂಸ್ಕಾರ ಭಾರತೀಯ ಪ್ರಧಾನ ಕಾರ್ಯದರ್ಶಿ ಡಾ. ಅಂಬುಜಾ ಮಳಖೇಡಕರ ಅವರು ಎಲ್ಲರಿಗೂ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸುನಂದಾ ಕುಲಕರ್ಣಿ, ಇಂದಿರಾ ರಾಥೋಡ್, ವಿಜಯಲಕ್ಷ್ಮಿ ಸಿಂಗೋಡಿ, ಭೀಮಸೇನ್‍ರಾವ್ ಕುಲಕರ್ಣಿ, ರಾಮಚಂದ್ರ ಸುಗೂರ್, ಜಯಚಾರ ಬಾಟಿ , ಕುಮಾರ ಅಥರ್ವ ಇನ್ನಿತರರು ಉಪಸ್ಥಿತರಿದ್ದರು.ಸಂಸ್ಕಾರ ಭಾರತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮವನ್ನು ಸಮರ್ಪಕವಾಗಿ ಆಯೋಜಿಸಿದರು.ಕಾರ್ಯಕ್ರಮದಲ್ಲಿ ನಗರದ ವಿದ್ಯಾರ್ಥಿಗಳು ಹಾಗೂ ನಾಗರಿಕರು ಉಪಸ್ಥಿತರಿದ್ದರು.






















