
ಯಾದಗಿರಿ:ಮೇ.೪: ನಗರದ ಎನ್‌ವಿಎಂ ಹೋಟೆಲ್ ಸಭಾಂಗಣದಲ್ಲಿ ಮುದ್ನಾಳ ಅಭಿಮಾನಿ ಬಳಗದ ವತಿಯಿಂದ ಯಾದಗಿರಿ ವಿಧಾನಸಭಾ ಕ್ಷೇತ್ರದ ಯುವ ಜನನಾಯಕರು ಹಾಗೂ ಭಾರತೀಯ ಜನತಾ ಪಾರ್ಟಿಯ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಮಹೇಶರಡ್ಡಿ ಮುದ್ನಾಳ ಅವರಿಗೆ ಅತ್ಯಂತ ಅದ್ದೂರಿ, ವೈಭವಮಯ ಹಾಗೂ ಗಂಭೀರ ಸನ್ಮಾನ ಸಮಾರಂಭವನ್ನು ಶ್ರದ್ಧಾ-ಭಕ್ತಿಯಿಂದ ಆಯೋಜಿಸಲಾಯಿತು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಯುವ ಘಟಕದ ಉಪಾಧ್ಯಕ್ಷರಾಗಿ ನೂತನವಾಗಿ ಭೂಷಿತರಾಗಿರುವ ಹಿನ್ನೆಲೆ ಈ ಗೌರವ ಸಮಾರಂಭವು ಭಾರೀ ಉತ್ಸಾಹ, ಅಭಿಮಾನ ಮತ್ತು ಸಂಘಟನಾ ಬಲದ ಸಂಕೇತವಾಗಿ ರೂಪುಗೊಂಡಿತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಹಿರಿಯ ರಾಜಕೀಯ ಮುಖಂಡರು ಹಾಗೂ ನಿಷ್ಠಾವಂತ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಸಮಾರಂಭಕ್ಕೆ ವಿಶಿಷ್ಟ ಮೆರುಗು ತಂದರು.
ಈ ಸಂದರ್ಭದಲ್ಲಿ ಹಿರಿಯ ರಾಜಕೀಯ ಧುರೀಣರಾದ ಸಿದ್ದಣ್ಣಗೌಡ ವಡಿಗೇರಾ, ಸಿದ್ದಪ್ಪ ಹೊಟ್ಟಿ, ಖಂಡಪ್ಪ ದಾಸನ, ಮಹಾದೇವಪ್ಪ ಯಲಸತ್ತಿ, ಮಹಾದೇವಪ್ಪ ಅಬ್ಬೇತುಮಕೂರ, ಶರಣಗೌಡ ಬಾಡಿಯಾಳ, ವಿಲಾಸ್ ಪಾಟೀಲ್, ಬಸವರಾಜ ಸೊನ್ನದ, ರಮೇಶ್ ದೊಡ್ಡಮನಿ, ರಾಜಶೇಖರಯ್ಯ ಸ್ವಾಮಿ, ಲಕ್ಷ್ಮಿಪುತ್ರ ಮಾಲಿ ಪಾಟೀಲ, ಬಸುಗೌಡ ನಾಯ್ಕಲ್, ದೇವರಾಜ ಹೆಗ್ಗಣಗೇರಿ, ಸುರೇಶ್ ಆಕಳ ಸೇರಿದಂತೆ ಅನೇಕ ಗಣ್ಯರು ತಮ್ಮ ಸಾನ್ನಿಧ್ಯದಿಂದ ಕಾರ್ಯಕ್ರಮವನ್ನು ಅಲಂಕರಿಸಿದರು.
ಹಾಗೂ ಮಹಿಳಾ ಮುಖಂಡರಾದ ಸುನೀತಾ ಚವ್ಹಾಣ್, ವಿಜಯಲಕ್ಷ್ಮಿ ನಾನೇಕ್, ಶಕುಂತಲಾ ಸೇರಿದಂತೆ ಹಲವು ಮಹಿಳಾ ಕಾರ್ಯಕರ್ತೆಯರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮದ ವೈಭವವನ್ನು ಮತ್ತಷ್ಟು ಹೆಚ್ಚಿಸಿದರು.
ಸನ್ಮಾನ ಸ್ವೀಕರಿಸಿದ ಮಹೇಶರಡ್ಡಿ ಮುದ್ನಾಳ ಅವರು, ತಮ್ಮ ಮೇಲಿಟ್ಟಿರುವ ಅಪಾರ ವಿಶ್ವಾಸ ಮತ್ತು ಗೌರವಕ್ಕೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿ, ಯುವಶಕ್ತಿಯನ್ನು ಸಂಘಟಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸುವ ಸಂಕಲ್ಪ ವ್ಯಕ್ತಪಡಿಸಿದರು. ಸಮಾಜದ ಸಮಗ್ರ ಅಭಿವೃದ್ಧಿ, ಸಂಘಟನಾ ಶಕ್ತಿಯ ಬಲವರ್ಧನೆ ಹಾಗೂ ಯುವಕರಿಗೆ ನಾಯಕತ್ವದ ಅವಕಾಶಗಳನ್ನು ಸೃಷ್ಟಿಸುವ ದಿಶೆಯಲ್ಲಿ ತಮ್ಮ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸುವುದಾಗಿ ಅವರು ಭರವಸೆ ನೀಡಿದರು.
ಈ ಸಮಾರಂಭವು ಅಭಿಮಾನಿಗಳ ಏಕತೆ, ನಿಷ್ಠೆ ಹಾಗೂ ನಾಯಕನ ಮೇಲಿನ ಅಪಾರ ಪ್ರೀತಿ-ವಿಶ್ವಾಸವನ್ನು ಪ್ರತಿಬಿಂಬಿಸುವ ವಿಶಿಷ್ಟ ಘಟನೆಯಾಗಿ ಗಮನಸೆಳೆದಿತು.






















