
ಮಧುಗಿರಿ, ಮೇ ೧೧- ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹರ್ಷ ಆಫೀಸರ್ಸ್ ಅಕಾಡೆಮಿಯ ಸಂಸ್ಥಾಪಕರಾದ ಹರ್ಷ ಕುರುಬರಹಳ್ಳಿ ತಿಳಿಸಿದರು.
ತಾಲ್ಲೂಕಿನ ದೊಡ್ಡೇರಿ ಹೋಬಳಿ, ಶಿವನಕೆರೆ ಗ್ರಾಮದಲ್ಲಿ ನಡೆದ ಕುರುಕ್ಷೇತ್ರ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಲೆಯನ್ನು ಎಲ್ಲರೂ ಪ್ರೋತ್ಸಾಹಿಸಬೇಕಾಗಿದೆ ಅದರಲ್ಲೂ ಮೊಬೈಲ್ ಮತ್ತು ಟಿವಿಗಳಿಂದ ನಾಟಕ ಕಲೆ ನಹಿಸಿ ಹೋಗುತ್ತಿದೆ ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಮೂಡುತಿದೆ. ಇಂತಹ ಸಂದರ್ಭಗಳಲ್ಲಿ ನಾಟಕಗಳಿಗೆ ಅಗತ್ಯ ಸಹಕಾರ ನೀಡಬೇಕು ಎಂದರು.
ಸದಾಭಿರುಚಿಯ ನಾಟಕಗಳನ್ನು ಆಡಿ ಅದರ ಮೂಲಕ ಯುವಜನತೆ ರಂಗಭೂಮಿ ಕಲೆಯನ್ನು ಮರಿಗೂಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಮತ್ತು ಪ್ರಸ್ತುತ ಸಮಾಜದಲ್ಲಿ ಹಾಗೂ ಹೋಗುಗಳನ್ನು ನಾಟಕಗಳ ಮೂಲಕ ತೋರ್ಪಡಿಸಿ ಜನತೆಗೆ ತಿಳಿಸುವ ಕೆಲಸ ಮಾಡಬೇಕಾಗಿದೆ ಎಂದ ಅವರು, ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರ ಸಹಕಾರ ಅಗತ್ಯ. ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರ ರಂಗಭೂಮಿ ಕಲೆ ಜೀವಂತವಾಗಿದೆ ಎಂದು ತಿಳಿಸಿದರು.


























