Home ಜಿಲ್ಲೆ ಬೆಂಗಳೂರು ದೀಪಾವಳಿ ಹಬ್ಬಕ್ಕೆ ಮಾಲೂರಿನಲ್ಲಿ ಸಜ್ಜಾದ ಅಂಗಡಿಗಳು

ದೀಪಾವಳಿ ಹಬ್ಬಕ್ಕೆ ಮಾಲೂರಿನಲ್ಲಿ ಸಜ್ಜಾದ ಅಂಗಡಿಗಳು

ಮಾಲೂರು,ನ.೮- ದೀಪಾವಳಿ ಹಬ್ಬದ ಪ್ರಯುಕ್ತ ಶನಿವಾರ ನಗರದಲ್ಲಿ ಮಹಿಳೆಯರು ಹಬ್ಬದ ಖರೀದಿಯಲ್ಲಿ ತೊಡಗಿದ್ದರು. ನಗರಸಭೆ ರಸ್ತೆಯ ಬದಿಯ ಅಂಗಡಿಗಳಲ್ಲಿ ಹೂಗಳು, ಬಾಳೆಹಣ್ಣು, ನೋಮು ದಾರಗಳು ಸೇರಿದಂತೆ ಹಬ್ಬಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಖರೀದಿಸಲು ನೂಕುನುಗ್ಗಲು ದೃಶ್ಯವಿತ್ತು.


ಪ್ರತಿ ವರ್ಷದಂತೆ ಈ ವರ್ಷವೂ ಹೀಗೆ ಹಿಂದೂಗಳ ದೀಪಾವಳಿ ಹಬ್ಬವು ಸಂಭ್ರಮಪೂರ್ವಕವಾಗಿ ಆಚರಿಸಲಾಗುತ್ತಿದೆ. ಹಬ್ಬಕ್ಕೆ ಅಗತ್ಯವಿರುವ ಸಾಮಗ್ರಿಗಳ ಬೆಲೆ ಏರಿಕೆಯಾದರೂ, ಶನಿವಾರ ಅಂಗಡಿಗಳ ಮುಂದೆ ಜನರು ನೆರದಿದ್ದರು. ಮಲ್ಲಿಗೆ, ಕನಕಾಂಬರ, ಗುಂಡು ಮಲ್ಲಿಗೆ ಬಟನ್ಸ್ ರೋಸ್ ಹೂವುಗಳು ಹೂಮಾಲೆಗಳಾಗಿ ಮಾರಾಟವಾಗುತ್ತಿದ್ದವು.


ರೈತರು ತಮ್ಮ ತೋಟಗಳಲ್ಲಿ ಬೆಳೆದ ಸೇವಂತಿ, ಚಂಡು ಹೂವುಗಳು ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ. ನಗರದಲ್ಲಿರುವ ಸರ್ಕಾರಿ ಬಾಲಕಿಯರ ಕಾಲೇಜು ಆವರಣದಲ್ಲಿ, ಜಿಲ್ಲಾಡಳಿತದ ಅನುಮತಿ ಪಡೆದು ನಿರ್ಮಾಣಗೊಂಡ ಅಂಗಡಿಗಳಲ್ಲಿ ಪಟಾಕಿ ಮಾರಾಟ ನಡೆಯುತಿತ್ತು. ಯುವಕರು ಪಟಾಕಿ ಖರೀದಿಗೆ ಮುಂದಾಗಿದ್ದಾರೆ.