Home ಜಿಲ್ಲೆ ಕಾಶಿಲಿಂಗೇಶ್ವರ ದೇವಸ್ಥಾನದ ಸಮುದಾಯ ಭವನಕ್ಕೆ ಭೂಮಿ ಪೂಜೆ: ಸಪ್ತಸಾಗರ ಗ್ರಾಪಂಗೆ 1 ಕೋಟಿ ಅನುದಾನಕ್ಕೆ ಪ್ರಸ್ತಾವನೆ:...

ಕಾಶಿಲಿಂಗೇಶ್ವರ ದೇವಸ್ಥಾನದ ಸಮುದಾಯ ಭವನಕ್ಕೆ ಭೂಮಿ ಪೂಜೆ: ಸಪ್ತಸಾಗರ ಗ್ರಾಪಂಗೆ 1 ಕೋಟಿ ಅನುದಾನಕ್ಕೆ ಪ್ರಸ್ತಾವನೆ: ಸಚಿವ ಲಕ್ಷ್ಮಣ ಸವದಿ

ಅಥಣಿ : ವಿವಿಧ ಅಭಿವೃದ್ದಿ ಕಾಮಗಾರಿಗಳಿಗಾಗಿ ಸಪ್ತಸಾಗರ ಗ್ರಾಮ ಪಂಚಾಯತಿಗೆ ಒಂದು ಕೋಟಿ ರೂಪಾಯಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಅವರು ಮಂಗಳವಾರದಂದು ಸಪ್ತಸಾಗರ ಗ್ರಾಮದಲ್ಲಿ ಸನ್ 2025-26 ನೇ ಸಾಲಿನ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಕಾಮಗಾರಿಯ ಶ್ರೀ ಕಾಶಿಲಿಂಗೇಶ್ವರ ದೇವಸ್ಥಾನದಲ್ಲಿ ಸಮುದಾಯ ಭವನದ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಾ, ಬರಗಾಲದಂತಹ ಕಷ್ಟದ ಸಮಯದಲ್ಲೂ ಬೇರೆ ಕ್ಷೇತ್ರಕ್ಕಿಂತ ನಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸರ್ಕಾರ ನೀಡಿದ್ದು ಎಲ್ಲರೂ ಇದರ ಸದುಪಯೋಗಪಡಿಸಿಕೊಳ್ಳೊಣ ಎಂದರು. ಹಂತ ಹಂತವಾಗಿ ನಿಮ್ಮ ಎಲ್ಲ ಕಾರ್ಯಗಳನ್ನು ಅತೀಶೀಘ್ರದಲ್ಲಿ ಚಾಲನೆ ನೀಡಲಾಗುವುದು ಅದರ ಜೊತೆಗೆ ನಿರಂತರ ಜ್ಯೋತಿ ಯೋಜನೆಯ ವಿದ್ಯುತ್ ಪೂರೈಕೆಯನ್ನು ಗ್ರಾಮದ ಎಲ್ಲ ಭಾಗಗಳಲ್ಲೂ ವಿಸ್ತರಣೆ ಕೊಡಲಾಗುವುದು ಎಂದು ಭರವಸೆ ನೀಡಿದರು.

ಸೂಪರ್ ಎಲ್ ನಿನೋ ಪರಿಣಾಮದಿಂದ ಬರಗಾಲದ ಛಾಯೆ ಎರಡು ವರ್ಷದ ಅವಧಿಗೂ ಮುಂದುವರೆಯಲ್ಲಿದ್ದು, ಮಳೆ ಮತ್ತು ವಿದ್ಯುತ್ ನೀರಿನ ಕೊರತೆ ನೀಗಿಸಲು ಎಲ್ಲರೂ ಶಿಸ್ತು ಬದ್ದವಾಗಿ ಉಪಯೋಗಪಡಿಸಿಕೊಳ್ಳೋಣ ಇದಕ್ಕೆ ಎಲ್ಲರ ಸಹಕಾರ ಮುಖ್ಯವಾಗಿದೆ.ಅತೀ ಹೆಚ್ಚಿನ ಪ್ರಮಾಣದಲ್ಲಿ ಚಿಲ್ಲರೆ ಬೆಳೆಗಳನ್ನ ಬೆಳೆದು ನೀರಿನ ಅಭಾವವನ್ನು ಕಡಿಮೆ ಮಾಡಿಕೊಳ್ಳಿ ಎಂದು ಸಲಹೆ ಹೇಳಿದರು.

ಎಸ್ ಬಿಐ ಬ್ಯಾಂಕ್ ವಿಲೀನಕ್ಕೆ ಗ್ರಾಮಸ್ಥರ ವಿರೋಧ ವಿಲೀನ ಮಾಡದಂತೆ ಮೇಲಾಧಿಕಾರಿಗಳಿಗೆ ಸೂಚನೆ: ಗ್ರಾಮದಲ್ಲಿರುವ ಎಸ್ ಬಿಐ ಬ್ಯಾಂಕ್ ಇಪ್ಪತ್ತು ಕಿಮೀ ದೂರದ ಹಾರೂಗೇರಿ ಎಸ್ ಬಿಐ ಗೆ ವಿಲೀನ ಮಾಡದಂತೆ ಡಿ.ಬಿ.ನದಾಫ್ ಅವರ ಸಮ್ಮುಖದಲ್ಲಿ ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿ, ನಮ್ಮ ಗ್ರಾಮದಲ್ಲಿರುವ ಎಸ್ ಬಿಐ ಬ್ಯಾಂಕ್ ಸುಮಾರು 12 ಗ್ರಾಮಗಳ ಜನರಿಗೆ ತುಂಬಾ ಅನುಕೂರವಾಗಿದ್ದು, ಇದು ವಿಲೀನವಾದರೆ ಬಹಳಷ್ಟು ಜನರಿಗೆ ತೊಂದರೆಯಾಗುತ್ತದೆ ಮತ್ತು ಇಲ್ಲಿಯವರೆಗೆ ಬ್ಯಾಂಕ್ ಯಾವುದೇ ನಷ್ಟ ಅನುಭವಿಸದೇ ಲಾಭಕರವಾಗಿದೆ ಅದಲ್ಲದೇ ನಿಮ್ಮ ಹಸ್ತದಿಂದ ಉದ್ಘಾಟನೆಯಾದ ಬ್ಯಾಂಕ್ ಇದಾಗಿದ್ದು ಇದನ್ನು ಸ್ಥಳಾಂತರ ಮಾಡಬಾರದೆಂದು ಒತ್ತಾಯ ಮಾಡಿದರು.ಇದಕ್ಕೆ ಸ್ಪಂದಿಸಿದ ಸಚಿವ ಲಕ್ಷ್ಮಣ ಸವದಿ ಅವರು ಇದನ್ನು ಯಾವುದೇ ಕಾರಣಕ್ಕೂ ಬೇರೆಡೆಗೆ ಹೋಗದಂತೆ ಮೇಲಾಧಿಕಾರಿಗಳ ಜೊತೆ ಸಂಪರ್ಕಿಸಿ ಸ್ಥಳಾಂತರ ಮಾಡಬಾರದೆಂದು ಹೇಳುವದಾಗಿ ಭರವಸೆ ನೀಡಿದರು.

ಈ ವೇಳೆ ಮುಖಂಡರಾದ ಡಾ.ಅಪ್ಪಾಸಾಬ ನಾಡಗೌಡಾಪಾಟೀಲ್, ಆರ್ ಎ ಪಾಟೀಲ್, ಸಂಜಯ ನಾಡಗೌಡಾ, ರವಿ ಬಮ್ಮಣ್ಣವರ, ಅಶೋಕ ಐಗಳಿ, ಡಿ. ಬಿ.ನದಾಫ, ಚಂದ್ರಕಾಂತ ಸಂಕ್ರಟ್ಟಿ, ಪರಶುರಾಮ ಕೋಳೆಕರ, ಪರಮಾನಂದ ತೇಲಿ, ಅಜೀತ ಹಳ್ಳೂರ, ಗುತ್ತಿಗೆದಾರ ಗಜಾನನ ಜಂಬಗಿ, ಮಹೇಂದ್ರ ಸುಲಾರೆ, ಯಲ್ಲಪ್ಪ ಕಾಂಬಳೆ, ಅಪ್ಪಾಸಾಬ ಕಾಂಬಳೆ, ಕಾಶಿ ವಿಶ್ವೇಶ್ವರ ದೇವಸ್ಥಾನ ಕಮೀಟಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.