ಬಾದಾಮಿ,ನ.೫: ವಿಜ್ಞಾನ ನಾಟಕ ಮತ್ತು ವಿಜ್ಞಾನ ವಸ್ತು ಪ್ರದರ್ಶನದಿಂದ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ, ಸೃಜನಾತ್ಮಕತೆ, ವೈಜ್ಞಾನಿಕ ಮನೋಭಾವ, ಕೌಶಲ ಹೊರಹೊಮ್ಮುತ್ತದೆ. ವಿಜ್ಞಾನಕ್ಕೆ ಸಂಬAಧಿಸಿದ ಮಕ್ಕಳು ಮಾಡಿರುವ ನೂತನ ಮಾದರಿಗಳು ವೈಜ್ಞಾನಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸುವಲ್ಲಿ ಸಂದೇಹವಿಲ್ಲ’ ಎಂದು ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ಪೆಟ್ಲೂರ ಹೇಳಿದರು.
ಶಾಸಕರ ಮಾದರಿ ಪ್ರಾಥಮಿಕ ಶಾಲೆಯಲಿ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
`ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತಿನಂತೆ ವಿಜ್ಞಾನ ನಾಟಕ ಮತ್ತು ವಿಜ್ಞಾನ ವಸ್ತು ಪ್ರದರ್ಶನದಿಂದ ಮಕ್ಕಳಲ್ಲಿನ ನೈಜತೆ, ಕ್ರಿಯಾತ್ಮಕ ಚಟುವಟಿಕೆ ಹಾಗೂ ಮಕ್ಕಳ ಸುಪ್ತ ಪ್ರತಿಭೆ ಅರಳುತ್ತದೆ. ಇಂದಿನ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಅವರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕಿದೆ’ ಎಂದರು.
ರಾಜ್ಯ ವಿಜ್ಞಾನ ಶಿಕ್ಷಕರ ಸಂಘದ ರಾಜ್ಯ ಖಜಾಂಚಿ ಬಿ ಎಚ್ ಗಾಣಿಗೇರ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ವಿ?Àಯಗಳ ಜ್ಞಾನ ಬಹಳ ಅವಶ್ಯವಿದೆ. ವಿದ್ಯಾರ್ಥಿಗಳು ಯಾವುದೇ ವಿ?Àಯವನ್ನು ನಿರ್ಲಕ್ಷ್ಯ ಮಾಡದೆ ಪ್ರತಿಯೊಂದು ವಿ?Àಯಗಳ ಅಧ್ಯಯನ ಮಾಡಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಸಾಧಿಸಬೇಕು ಅಂದರೆ ಜ್ಞಾನ ಸಂಪಾದಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. ಇಲಾಖೆಯ ಜೊತೆಗೆ ವಿಜ್ಞಾನ ಶಿಕ್ಷಕರ ಸಂಘವು ಸದಾ ಸೇವೆಗೆ ಸಿದ್ದವಾಗಿರುತ್ತದೆ ಎಂದು ತಿಳಿಸಿದರು.
ವಿಜ್ಞಾನ ವಿ?Àಯ ನೋಡಲ್ ಶಿಕ್ಷಣ ಸಂಯೋಜಕ ಬಿ.ಟಿ ಹಳ್ಳಿ ಮಾತನಾಡಿ ವಿಜ್ಞಾನ ನಾಟಕ ವಿಜ್ಞಾನ ವಿ?Àಯಗಳ ಮಾದರಿ ಪ್ರದರ್ಶನ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದರಿಂದ ವಿ?Àಯಗಳ ಬಗ್ಗೆ ಹೆಚ್ಚಿನ ಜ್ಞಾನ ಪಡೆದುಕೊಳ್ಳಲು ಸಾಧ್ಯ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಮುಂದೆ ಬರಬೇಕು’ ಎಂದು ಹೇಳಿದರು. ಹಾಗೂ ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳಿಗೆ ಆಯ್ಕೆ ಮಾನದಂಡ ಗಳನ್ನು ಮತ್ತು ಸಲಹೆ ಸೂಚನೆ ಹಾಗೂ ನಿಯಮಗಳನ್ನು ತಿಳಿಸಿದರು ನಂತರದಲ್ಲಿ ವಿದ್ಯಾರ್ಥಿಗಳು
ವಸ್ತು ಪ್ರದರ್ಶನದಲ್ಲಿ ವಿಜ್ಞಾನಕ್ಕೆ ಸಂಬAಧಿಸಿದ ಪರಮಾಣುಗಳ ರಚನೆ, ವಾಯು ಮಾಲಿನ್ಯ ನಿಯಂತ್ರಣ, ರಕ್ತ ಗುಂಪುಗಳ ಮಾಹಿತಿ, ನೀರಿನ ಮಟ್ಟ ಸೂಚಕ, ನೀರಿನ ಶುದ್ಧಿಕರಣ, ಬೆಳೆ ಸಂರಕ್ಷಣಾ ಮಾದರಿ, ಸೋಲಾರ್ ಟ್ರ್ಯಾಕಿಂಗ್ ಸಿಸ್ಟಮ್, ಮಿಶ್ರ ಬೇಸಾಯ ಸೇರಿದಂತೆ ವಿವಿಧ ಬಗೆಯ ಮಾದರಿ ಪ್ರದರ್ಶನ ಆಕ?Àðಕವಾಗಿತ್ತು.
ವಿಜ್ಞಾನ ನಾಟಕವು ಆಕ?Àðಕವಾಗಿ ಮೂಡಿ ಬಂದಿತು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಲಾಯಿತು. ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನಡೆಸಲಾಯಿತು. ತಾಲುಕು ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷ ವಿ?ÀÄ್ಣ ಚವನ, , ಹಾಗೂ ಪಿ ಎಸ್ ಪಾಟೀಲ, ಎಸ್ ಪಿ ಕಂದಗಲ, ಎಂ.ಎA.ಹರದೊಳ್ಳಿ, ಎ.ಆರ್. ರಾಠೋಡ, ಎಸ್ ಎಸ್ ದೇಸಾಯಿ, ಶಿವಷಿಂಪಿ ಶಿಕ್ಷಕರು ನಿರ್ಣಾಯಕರಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ಜಿ.ಆರ್ ಕಣ್ಣಿ, ಶಿಕ್ಷಣ ಸಂಯೋಜಕ ಬಿ.ಕೆ.ಚಿಮ್ಮಲ, ಬಸವರಾಜ್ ಗಾಣಿಗೇರ ಉಪಸ್ಥಿತರಿದ್ದರು. ಎಸ್ ಪಿ ಕಂದಗಲ್ ಪ್ರಾರ್ಥಿಸಿದರು, ಎಸ್.ಎಸ್.ಪಟ್ಟಣಶೆಟ್ಟಿ ನಿರೂಪಿಸಿ ವಂದಿಸಿದರು.




















