Home ಜಿಲ್ಲೆ ಅರಿವು ಕಾರ್ಯಕ್ರಮ

ಅರಿವು ಕಾರ್ಯಕ್ರಮ


ಧಾರವಾಡ,ನ.೫: ವಿಶ್ವ ಸ್ಟೊçÃಕ ದಿನಾಚರಣೆ ಹಾಗೂ ರಾಷ್ಟಿçÃಯ ಆಯೋಡಿನ ಕೊರತೆಯ ನ್ಯೂನ್ಯತೆಗಳ ನಿಯಂತ್ರಣ ಕಾರ್ಯಕ್ರಮ'' ಅಂಗವಾಗಿ ಶ್ರೀಯಾ ಕಾಲೇಜ, ಧಾರವಾಡ ಇಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕರಿಗಳ ಕಛೇರಿ, ಜಿಲ್ಲಾ ಎನ್.ಸಿ.ಡಿ ಘಟಕ, ಜಿಲ್ಲಾ ಎನ್.ಸಿ.ಡಿ ಕ್ಲಿನಿಕ್, ಜಿಲ್ಲಾ ಆಸ್ಪತ್ರೆ, ಧಾರವಾಡ ವತಿಯಿಂದ ವಿಶ್ವ ಸ್ಟೊçÃಕ ದಿನಾಚರಣೆ ಹಾಗೂ ರಾಷ್ಟಿçÃಯ ಆಯೋಡಿನ ಕೊರತೆಯ ನ್ಯೂನ್ಯತೆಗಳ ನಿಯಂತ್ರಣ ಕಾರ್ಯಕ್ರಮ” ಕುರಿತು ಶ್ರೀಯಾ ಕಾಲೇಜ ವಿದ್ಯಾರ್ಥಿಗಳಿಗೆ ಸ್ಟೊçÃಕ ಹಾಗೂ ಆಯೋಡಿನ ಕೊರತೆಯ ಕುರಿತು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ರೋಡಾ ಜೆಸುರಾಜ, ಪ್ರಾಂಶುಪಾಲರು, ಶ್ರೀಯಾ ಕಾಲೇಜ, ಧಾರವಾಡ ವಹಿಸಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ. ಪರಶುರಾಮ ಎಫ್.ಕೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು ಹಾಗೂ ಸ್ಟೊçÃಕ ಕಾಯಿಲೆ ಹಾಗೂ ಆಯೋಡಿನ ಕೊರತೆಯ ಕುರಿತಾಗಿ ವಿವರವಾಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಮೀಕ್ಷಣಾಧಿಕಾರಿಗಳಾದ ಡಾ. ಮಹೇಶ ಚಿತ್ತರಗಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಡಾ. ವಾಸಂತಿ ಜೀರಗಲ, ಜನರಲ್ ಫಿಜಿಸಿಯನÀ, ಜಿಲ್ಲಾ ಆಸ್ಪತ್ರೆ, ಧಾರವಾಡ ವಿದ್ಯಾರ್ಥಿಗಳಿಗೆ ಸ್ಟೊçÃಕ ಕಾಯಿಲೆ ಕುರಿತು ಉಪನ್ಯಾಸ ನೀಡಿದರು. ಈ ವೇಳೆ ಡಾ. ಸಂಜಯ ಡುಮ್ಮಗೋಳ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿಗಳು, ಧಾರವಾಡ, ಬಿ. ಆರ್ ಪಾತ್ರೋಟ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಎಮ್. ಎನ್. ಅಗಡಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಎಸ್. ಎಸ್. ತಿವಾರಿ, ಶೋಭಾ ಕುಲಕರ್ಣಿ (ಆರೋಗ್ಯ ಶಿಕ್ಷಣಾಧಿಕಾರಿಗಳು), ಜಿಲ್ಲಾ ಐ.ಡಿ.ಎಸ್.ಪಿ ವಿಭಾಗ, ಜಿಲ್ಲಾ ಎನ್.ಸಿ.ಡಿ ಘಟಕ, ಜಿಲ್ಲಾ ಎನ್.ಸಿ.ಡಿ ಕ್ಲಿನಿಕ್ ಸಿಬ್ಬಂದಿಯವರು ಹಾಜರಿದ್ದರು.