Home ಜಿಲ್ಲೆ ಕಲಬುರಗಿ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲೂ ಕ್ರಿಯಾಶೀಲರಾಗಬೇಕು: ಡಾ.ಖಾಜಾವಲಿ ಈಚನಾಳ

ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲೂ ಕ್ರಿಯಾಶೀಲರಾಗಬೇಕು: ಡಾ.ಖಾಜಾವಲಿ ಈಚನಾಳ

ಚಿಂಚೋಳಿ: ವಿದ್ಯಾರ್ಥಿಗಗಳು ಕೇವಲ ಪಠ್ಯಕ್ಕಷ್ಟೇ ಸೀಮಿತ ರಾಗದೇ ಪಠ್ಯೇತರ ಚಟುವಟಿಕೆ ಗಳಲ್ಲೂ ಕ್ರಿಯಾಶೀಲರಾಗಿ ಭಾಗವಹಿಸೇಕು. ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ನೃತ್ಯ, ಸಮಾಜಸೇವೆ, ಭಾಷಣ, ಪ್ರಬಂಧ ಮುಂತಾದವುಗಳಲ್ಲಿ ತೊಡಗಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಖಾಜಾವಲಿ ಈಚನಾಳ ಹೇಳಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2026-27 ನೇ ಶೆ?ಕ್ಷಣಿಕ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಪಠ್ಯೇತರ ಚಟುವಟಿಕೆಗಳ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಲಬುರಗಿ ಮಹಾನಗರದ ಆರ್ ಜೆ ನಗರ ಪೆÇಲೀಸ್ ಠಾಣೆಯ ಪಿ.ಎಸ್.ಐ ಯಶೋಧ ಕಟಕೆ ಮಾತನಾಡಿ,ವಿದ್ಯಾರ್ಥಿಗಳು ಅಂಕ ಮತ್ತು ಪದವಿಗೆ ಸೀಮಿತರಾಗದೇ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.ಶಿಸ್ತು, ಸಂಯಮ, ಪ್ರೀತಿ ಸಹಬಾಳ್ವೆಗೆ ಒತ್ತುಕೊಟ್ಟು ಉತ್ತಮ ನಾಗರಿಕ ರಾಗಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಬಸವರಾಜ್ ಕೊನೇರಿ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಾ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ, ಸವಾರ್ಂಗೀಣ ಅಭಿವೃದ್ಧಿಯೊಂದಿಗೆ ಹೊರಹೊಮ್ಮಲು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಹಿರಿಯ ಪ್ರಾಧ್ಯಾಪಕ ಡಾ. ಸಂತೋಷಕುಮಾರ ಕಟಕೆ ಮಾತನಾಡಿ, ಕಾಲೇಜಿನಲ್ಲಿ ಅಸ್ತಿತ್ವದಲ್ಲಿರುವ 32 ವಿವಿಧ ಪಠ್ಯೇತರ ಸಮಿತಿಗಳ ಗುರಿ,ಉದ್ದೇಶ ಮತ್ತು ಅವುಗಳ ಕಾರ್ಯಸ್ವರೂ ಪದ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಕಲ್ಯಾಣಮ್ಮ ಗುತ್ತೇದಾರ, ಅನ್ನಪೂರ್ಣ ಸೇಡಂಕರ್, ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ/ನಿಯರು ಉಪಸ್ಥಿತರಿದ್ದರು.ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪೆನ್ನು, ಗುಲಾಬಿ ನೀಡುವ ಮೂಲಕ ಸ್ವಾಗತಿಸ ಲಾಯಿತು.
ಉಪನ್ಯಾಸಕ ಡಾ. ಪೀರಪ್ಪ ಸ್ವಾಗತಿಸಿದರು. ಸಾಂಸ್ಕøತಿಕ ಸಮಿತಿ ಸಂಚಾಲಕ ಡಾ. ಮಿರಾಜ್ ಪಾಷಾ ನಿರೂಪಿದರು. ಡಾ. ವಿಶ್ವನಾಥ ವಂದಿಸಿದರು.