
ಜೇವರಗಿ,ಅ.೨೭: ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶೀಗಿ ಹುಣ್ಣಿಮೆ ಪ್ರಯುಕ್ತ ಹಮ್ಮಿಕೊಂಡಿದ್ದ ಬುದ್ಧ ವಂದನೆ ಕಾರ್ಯಕ್ರಮದಲ್ಲಿ ಗೋಪಾಲ್ ರಾಂಪುರೆ ಹಾಗೂ ಜಟ್ಟೆಪ್ಪ ಕಟ್ಟಿಮನಿ ಅವರು ಧಮ್ಮದ ಕುರಿತು ಅತ್ಯಂತ ಮಾರ್ಮಿಕವಾಗಿ ಉಪನ್ಯಾಸ ನೀಡಿದರು. ಬುದ್ಧನ ಪಂಚಶೀಲ ತತ್ವಗಳು ಇಂದಿನ ಯುವ ಪೀಳಿಗೆಗೆ ಎಷ್ಟು ಮುಖ್ಯ ಎಂದು ಅವರು ವಿವರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲಾ ಉಪಾಸಕರು, ಉಪಾಸಕಿಯರಿಗೆ ಶ್ರೀಹರಿ ಕರಕಳ್ಳಿ ಭೋಜನ ದಾನದ ವ್ಯವಸ್ಥೆ ಮಾಡಿದರು. ಈ ಸಂಧರ್ಭದಲ್ಲಿ ಹಿರಿಯ ಉಪಾಸಕರಾದ ಚಂದ್ರಶೇಖರ್ ಹರನಾಳ, ಭೀಮರಾಯ ನಗನೂರ, ಸುಭಾಷ್ ಚನ್ನೂರ, ಮಲ್ಲಣ್ಣ ಕೊಡಚಿ, ಪುಂಡಲಿಕ್ ಗಾಯಕವಾಡ, ಶಾಂತಪ್ಪ ಯಲ್ಗೋಡ್, ರಾಯಪ್ಪ ಬಾರಿಗಿಡ, ರವಿ ಕುಳಗೇರಿ, ಖಲೀಫ ಮಂದ್ರವಾಡ್, ರೇವಣಸಿದ್ದ ಬಿರಾಳ, ಶ್ರೀಮಂತ ಕಿಲೆದಾರ್, ಅಮೃತ ಮೂರ್ತಿ, ಶರಣಬಸಪ್ಪ ಲಖಣಾಪುರ್, ಶ್ರೀಮಂತ ಧನಕರ, ಮಲ್ಲಮ್ಮ ಕೊಬ್ಬಿನ, ಜಗದೇವಿ ಜಟ್ನಾಕರ್ಸೇರಿದಂತೆ ಅನೇಕ ಬೌದ್ಧ ಉಪಾಸಕರು ಹಾಗೂ ಉಪಾಸಕಿಯರು ಉಪಸ್ಥಿತರಿದ್ದರು. ವಿಶ್ವರಾಧ್ಯ ಮಾಯಿ ಸ್ವಾಗತಿಸಿದರು ಸಿದ್ದು ಕೆರೂರ ನಿರೂಪಿಸಿದರು. ಪ್ರಭಾಕರ್ ಸಾಗರ್ ವಂದಿಸಿದರು.
























