Home ಜಿಲ್ಲೆ ರೋಟರಿ ಕ್ರಿಕೆಟ್ ಪ್ರಿಮಿಯರ್ ಲೀಗ್ ೩.೦ಟ್ರಿಡೆಂಟ್ ವಾರಿಯರ್ಸ್ ಚಾಂಪಿಯನ್

ರೋಟರಿ ಕ್ರಿಕೆಟ್ ಪ್ರಿಮಿಯರ್ ಲೀಗ್ ೩.೦ಟ್ರಿಡೆಂಟ್ ವಾರಿಯರ್ಸ್ ಚಾಂಪಿಯನ್

ಬೀದರ್: ಟ್ರಿಡೆಂಟ್ ವಾರಿಯರ್ಸ್ ತಂಡವು ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ವತಿಯಿಂದ ಇಲ್ಲಿ ಹಮ್ಮಿಕೊಂಡಿದ್ದ ರೋಟರಿ ಕ್ರಿಕೆಟ್ ಪ್ರಿಮಿಯರ್ ಲೀಗ್ ೩.೦ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ಗುರುನಾನಕ ದೇವ ಎಂಜಿನಿಯರಿAಗ್ ಕಾಲೇಜು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಬೀದರ್ ಲೆಜೆಂಡ್ಸ್ ತಂಡವನ್ನು ಮಣಿಸಿ, ದಿ. ಬಸವರಾಜ ಪಾಟೀಲ ಹುಮನಾಬಾದ್ ಟ್ರೋಫಿ ಹಾಗೂ ರೂ. ೫೦ ಸಾವಿರ ನಗದು ತನ್ನದಾಗಿಸಿಕೊಂಡಿತು.
ರನ್ನರ್ ಅಪ್ ಬೀದರ್ ಲೆಜೆಂಡ್ಸ್ ತಂಡವು ತಾಳಂಪಳ್ಳಿ ಗ್ರೂಪ್ಸ್ ಟ್ರೋಫಿ ಹಾಗೂ ರೂ. ೨೫ ಸಾವಿರ ನಗದು ಬಹುಮಾನಕ್ಕೆ ಪಾತ್ರವಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಟ್ರಿಡೆಂಟ್ ವಾರಿಯರ್ಸ್ ತಂಡವು ೫ ವಿಕೆಟ್ ನಷ್ಟಕ್ಕೆ ನಿಗದಿತ ೧೨ ಓವರ್‌ಗಳಲ್ಲಿ ಬೃಹತ್ ೧೨೮ ರನ್ ಬಾರಿಸಿತು.
ನಂತರ ಬ್ಯಾಂಟಿAಗ್‌ಗೆ ಇಳಿದ ಬೀದರ್ ಲೆಜೆಂಡ್ಸ್ ತಂಡವು ೧೨ ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ೮೧ ರನ್ ಮಾತ್ರ ಗಳಿಸಿ ಸೋಲೊಪ್ಪಿಕೊಂಡಿತು.
ಫೈನಲ್ ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಿದ ಜೈಗಣೇಶ ಪಂದ್ಯ ಪುರುಷ ಟ್ರೋಫಿ ಮತ್ತು ಅತಿ ಹೆಚ್ಚು ವಿಕೆಟ್‌ಗಾಗಿ ಪರ್ಪಲ್ ಟೊಪ್ಪಿಗೆ, ಜಿತೇಂದ್ರ ರಾಠೋಡ್ ಸರಣಿ ಪುರುಷೋತ್ತಮ ಟ್ರೋಫಿ, ಅತಿ ಹೆಚ್ಚು ರನ್ ಟ್ರೋಫಿ ಹಾಗೂ ಅತಿ ಹೆಚ್ಚು ಸಿಕ್ಸರ್‌ಗಾಗಿ ಆರೆಂಜ್ ಟೊಪ್ಪಿಗೆ, ಹರ್ಷದ್ ಪಟೇಲ್ ಉತ್ತಮ ಫೀಲ್ಡರ್ ಟ್ರೋಫಿ ಪಡೆದರು.
ವಿಜೇತ ತಂಡಕ್ಕೆ ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ ಹಾಗೂ ರನ್ನರ್ ಅಪ್ ತಂಡಕ್ಕೆ ಉದ್ಯಮಿ ಸಂತೋಷ್ ತಾಳಂಪಳ್ಳಿ ಟ್ರೋಫಿ ಹಾಗೂ ನಗದು ಪ್ರದಾನ ಮಾಡಿದರು.
ಟೂರ್ನಿಯ ಟೈಟಲ್ ಪ್ರಾಯೋಜಕ, ಎನ್.ಎಸ್.ಎಸ್.ಕೆ. ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಸಹ ಪ್ರಾಯೋಜಕ, ಸ್ನೇಹಶ್ರೀ ಗ್ರೂಪ್‌ನ ಶಿವಂ ಉಟಗೆ, ಕ್ಲಬ್ ಅಧ್ಯಕ್ಷೆ ಸ್ಫೂರ್ತಿ ಧನ್ನೂರ, ಉಪಾಧ್ಯಕ್ಷ ಮಂಜುನಾಥ ಹೂಗಾರ, ಕಾರ್ಯದರ್ಶಿ ಅಭಿಷೇಕ ಚಿಂತಾಮಣಿ, ಸಹ ಕಾರ್ಯದರ್ಶಿ ಕೀರ್ತಿ ವಾಲೆ, ಖಜಾಂಚಿ ಅಮಯ್ ಸಿಂದೋಲ್, ಶ್ರೀನಾಥ ನಾಗೂರೆ, ಮ್ಯಾನ್ ಆಫ್ ದಿ ಸಿರೀಸ್ ಟ್ರೋಫಿ ಪ್ರಾಯೋಜಕಿ, ಬಿಕೆಡಿ ಫೌಂಡೇಷನ್ ಕಾರ್ಯದರ್ಶಿ ಸುವರ್ಣಾ ಧನ್ನೂರ, ಫೇರ್ ಪ್ಲೆ ಟ್ರೋಫಿ ಪ್ರಾಯೋಜಕ ಮಹೇಶ ಮೈಲಾರೆ, ಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಟ್ರೋಫಿ ಪ್ರಾಯೋಜಕ ಮಹೇಶ ತಾಳಂಪಳ್ಳಿ, ಪರ್ಪಲ್ ಟೊಪ್ಪಿಗೆ ಪ್ರಾಯೋಜಕ ಚನ್ನಬಸವ ಬಳತೆ, ಆರೆಂಜ್ ಟೊಪ್ಪಿಗೆ ಪ್ರಾಯೋಜಕ ಸಂಗಮೇಶ ಆಣದೂರೆ, ಬೆಸ್ಟ್ ಫೀಲ್ಡರ್ ಟ್ರೋಫಿ ಪ್ರಾಯೋಜಕ ಸೂರ್ಯಕಾಂತ ಅಲ್ಮಾಜೆ, ಅತಿ ಹೆಚ್ಚು ಸಿಕ್ಸರ್ ಟ್ರೋಫಿ ಪ್ರಾಯೋಜಕ ನಿತಿನ್ ಕರ್ಪೂರ್, ಕ್ರೀಡಾಂಗಣದ ಪ್ರಾಯೋಜಕ ಪುನೀತ್ ಸಿಂಗ್, ಸೆಮಿ ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಾಯೋಜಕ ಬಸವಕುಮಾರ ಸುಲಗುಂಟೆ, ತಂಡಗಳ ಮಾಲೀಕರಾದ ಬಸವರಾಜ ಧನ್ನೂರ, ಹಾವಶೆಟ್ಟಿ ಪಾಟೀಲ, ರವಿ ಮೂಲಗೆ, ಅಮಯ್ ಸಿಂದೋಲ್, ಸಚಿನ್ ಕೊಳ್ಳೂರ, ಅಶೋಕ್ ಹೆಬ್ಬಾಳೆ, ಗುರು ಸಿಂದೋಲ್, ನಿಖಿಲ್ ಖಂಡ್ರೆ, ಹರ್ಷದ್ ಪಟೇಲ್, ಪವಿತ್ ಸಿಂಗ್, ಸೋಮಶೇಖರ ಬಿ. ಪಾಟೀಲ, ಶುಭಂ ಶರ್ಮಾ, ದೀಪಕ್ ಪಾಂಚಾಳ್, ಸತೀಶ್ ನೌಬಾದೆ, ಸುಧೀರ ಕೊಠಾಳೆ, ಜಯಕಿಶನ್ ಬಿಯಾನಿ, ಯೋಗೇಶ್ ಅಷ್ಟೂರೆ, ಆನಂದ ಕೊಟರಕಿ, ಬಸವಪ್ರಸಾದ್ ಮಂಗಲಗಿ, ಮಹೇಶ್ ಚಿಮಕೋಡೆ, ರೋಟರಿ ಕ್ಲಬ್ ಬೀದರ್ ಅಧ್ಯಕ್ಷ ಅನಿಲಕುಮಾರ ಬಿರಾದಾರ, ಕಾರ್ಯದರ್ಶಿ ಸಂಗಮೇಶ ಮಾನಶೆಟ್ಟಿ, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ವೀರಶೆಟ್ಟಿ ಮಣಗೆ, ಕಾರ್ಯದರ್ಶಿ ಸತೀಶ್ ಸ್ವಾಮಿ, ಕ್ರಿಕೆಟ್ ಟೂರ್ನಿ ಪ್ರಾಜೆಕ್ಟ್ ಡೈರೆಕ್ಟರ್ ಸಂಗಮೇಶ ವಡಗಾವೆ ಮತ್ತಿತರರು ಇದ್ದರು. ಸಹನಾ ಪಾಟೀಲ ನಿರೂಪಿಸಿದರು.


ದೈಹಿಕ ಆರೋಗ್ಯಕ್ಕೆ ಕ್ರೀಡೆಗಳು ಅವಶ್ಯಕ

ಮಕ್ಕಳ ಸದೃಢ ದೈಹಿಕ ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆಗಳು ಬಹಳ ಅವಶ್ಯಕವಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ ಹೇಳಿದರು.
ನಗರದಲ್ಲಿ ನಡೆದ ರೋಟರಿ ಕ್ರಿಕೆಟ್ ಪ್ರಿಮಿಯರ್ ಲೀಗ್ ೩.೦ ವಿಜೇತ ತಂಡಗಳಿಗೆ ಟ್ರೋಫಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು
ಮಕ್ಕಳು ಸಾಧ್ಯವಾದಷ್ಟು ಮೊಬೈಲ್‌ನಿಂದ ದೂರ ಇರಬೇಕು. ಕ್ರೀಡೆಗಳ ಬಗ್ಗೆ ಒಲವು ಬೆಳೆಸಿಕೊಳ್ಳಬೇಕು ಎಂದರು.
ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ಬೇಟಿ ಪಡಾವೋ, ಬೇಟಿ ಬಚಾವೋ ಘೋಷವಾಕ್ಯದಡಿ ಕ್ರಿಕೆಟ್ ಟೂರ್ನಿ ಹಮ್ಮಿಕೊಂಡಿರುವುದು ಪ್ರಶಂಸನೀಯ. ಕ್ಲಬ್ ಚಟುವಟಿಕೆಗೆ ತಮ್ಮ ಸಹಕಾರ ಸದಾ ಇರಲಿದೆ ಎಂದು ತಿಳಿಸಿದರು.
ಎನ್.ಎಸ್.ಎಸ್.ಕೆ. ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ರಕ್ಷಣೆಗೆ ಕ್ಲಬ್ ಒತ್ತು ನೀಡಿರುವುದು ಉತ್ತಮ ಬೆಳವಣಿಗೆ. ಬರುವ ದಿನಗಳಲ್ಲಿ ತಮ್ಮ ಫೌಂಡೇಷನ್‌ನಿAದ ಕ್ಲಬ್‌ಗೆ ಹೆಣ್ಣು ಮಕ್ಕಳಿಗೆ ವಿತರಿಸಲು ೫೦೦ ಹೊಲಿಗೆ ಯಂತ್ರಗಳನ್ನು ಕೊಡಲಾಗುವುದು ಎಂದು ಹೇಳಿದರು.
ಕ್ಲಬ್ ಅಧ್ಯಕ್ಷೆ ಸ್ಫೂರ್ತಿ ಬಸವರಾಜ ಧನ್ನೂರ ಮಾತನಾಡಿ, ಪ್ರಸ್ತುತ ೧೦ ರಲ್ಲಿ ೮ ಹೆಣ್ಣುಮಕ್ಕಳು ಮುಖ್ಯವಾಹಿನಿಂದ ದೂರ ಉಳಿದಿದ್ದಾರೆ. ಅವರನ್ನು ಮುಖ್ಯವಾಹಿನಿಗೆ ತರಲು ಹಾಗೂ ಸಕಶ್ತಗೊಳಿಸಲು ಕ್ಲಬ್ ಶ್ರಮಿಸಲಿದೆ. ಎಲ್ಲ ಸಂಘ ಸಂಸ್ಥೆಗಳು ಇಂಥ ಕಾರ್ಯಕ್ಕೆ ಕೈಜೋಡಿಸಿದರೆ ಮಹಿಳಾ ಸಬಲೀಕರಣ ಆಗಲಿದೆ ಎಂದು ತಿಳಿಸಿದರು.