
ಯಾದಗಿರಿ: ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಯಾದಗಿರಿ ಸಮೀಪದ ಕೋಯಿಲೂರು ಗ್ರಾಮದಲ್ಲಿ ಸೋಮವಾರ ಜಯಂತಿಯನ್ನು ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿAದ ಆಚರಿಸಲಾಯಿತು.
ಗ್ರಾಮದ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಗ್ರಾಮಸ್ಥರು ಒಗ್ಗೂಡಿ ಮಹರ್ಷಿ ವಾಲ್ಮೀಕಿಯವರ ಸ್ಮರಣಾರ್ಥ ಅನ್ನಸಂತರ್ಪಣೆ ಆಯೋಜಿಸುವ ಮೂಲಕ ಭಕ್ತಿ ಮತ್ತು ಗೌರವವನ್ನು ಸಮರ್ಪಿಸಿದರು. ಗ್ರಾಮಸ್ಥರು ಒಗ್ಗಟ್ಟಿನಿಂದ ಪಾಲ್ಗೊಂಡು ಜಯಂತಿ ಆಚರಣೆಗೆ ಮೆರುಗು ತಂದರು.
ಈ ಸಂದರ್ಭದಲ್ಲಿ ಸಿದ್ದಪ್ಪ ನಾಯಕ್ ಕೋಯಿಲೂರು, ಹನುಮಂತರಾಯ ಕಾಳಿ, ಹಣಮಂತ ಕಾವಲಿ, ಭೀಮರಾಯ ಮುಸುಂಡಿ, ದೇವಪ್ಪ ಹತ್ತಿಕುಣಿ, ರಾಮಯ್ಯ ಮುಸುಂಡಿ, ಮುನಿಯಪ್ಪ ಬಸಪ್ಪನೋರ್, ಹನುಮಯ್ಯ ಕಾಶಿಕಟ್ಟಿ, ಭೀಮರಾಯ ಗಂಗೂಬಾಯಿ, ಶರಣಬಸಪ್ಪ ಕಾವಲಿ, ನಾಗಪ್ಪ ಕಾವಲಿ, ವೆಂಕಪ್ಪ ಕಾಳನೋರ್, ತಿರುಪತಿ, ದೇವು ಸೇರಿದಂತೆ ಗ್ರಾಮದ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
























