Home ಜಿಲ್ಲೆ ಬೆಂಗಳೂರು ಪುಟ್ಟಣ್ಣ ಗೆಲುವಿಗೆ ಕರೆ

ಪುಟ್ಟಣ್ಣ ಗೆಲುವಿಗೆ ಕರೆ

ಕೆ.ಆರ್.ಪುರ, ಅ.೧೭- ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪುಟ್ಟಣ್ಣ ಅವರ ಗೆಲುವಿಗೆ ಕಾರ್ಯಕರ್ತರು ಶ್ರಮಿಸುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ವೆಂಕಟೇಶ್ ಅವರು ಮನವಿ ಮಾಡಿದರು.


ಕೆ.ಆರ್.ಪುರ ಕ್ಷೇತ್ರದ ದೇವಸಂದ್ರದ ಗೃಹ ಕಚೇರಿಯಲ್ಲಿ ಏರ್ಪಡಿಸಿದ್ದ ಶಿಕ್ಷಕರ ಕ್ಷೇತ್ರದ ಚುನಾವಣೆಯ ಪೂರ್ವ ಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರಿಗೆ ಸೇರಿದಂತೆ ಕಾರ್ಯಕರ್ತರಿಗೆ ಆಸರೆಯಾಗುವ ನಿಟ್ಟಿನಲ್ಲಿ ಶ್ರಮಿಸುವ ಪುಟ್ಟಣ್ಣ ಅವರಿಗೆ ನಮ್ಮ ಮತ ನೀಡುವ ಮೂಲಕ ಕೃತಜ್ಞತೆ ಸಲ್ಲಿಸುವಂತೆ ಸಲಹೆ ನೀಡಿದರು.


ಐದುಬಾರಿ ಚುನಾವಣೆಯಲ್ಲಿ ಜಯಶೀಲರಾಗಿ ಕಾರ್ಯಕರ್ತರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಶ್ರಮಿಸಿರುವ ಅವರ ಕಾರ್ಯಕ್ಕೆ ಮತ್ತಷ್ಟು ಶಕ್ತಿ ತುಂಬುವ ಕಾರ್ಯ ಮಾಡಬೇಕು ಎಂದು ಹೇಳಿದರು.


ಈ ಸಂದರ್ಭದಲ್ಲಿ ಪೂರ್ವ ಜಿಲ್ಲಾ ಮಹಿಳಾ ಅಧ್ಯಕ್ಷೆ ಶಿಲ್ಪಾ ಕಶ್ಯಪ್, ಸಭೆ ಉಸ್ತುವಾರಿ ಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರಳಪ್ಪ,ಕೊದಂಡರಾಮಮುಖಂಡರಾದ ಆರ್.ಪ್ರಕಾಶ್,ಹೇಮಾವತಿ ಸುರೇಶ್,ಪ್ರಸನ್ನ,ಜಯಂತಿನಗ ಮುನಿರಾಜು, ಎ.ರವಿ,ಕೌದೇನಹಳ್ಳಿ ಬೀರಪ್ಪ, ಎಸ್.ಬಾಬು,ಗೆದ್ದಲಹಳ್ಳಿ ಮುನಿರಾಜು,ರಾಮಾಂಜಿನಪ್ಪ, ಇದ್ದರು.