Home ಮುಖಪುಟ ಸುದ್ದಿ ಟೋಲ್ ಸಂಗ್ರಹ ಅಕ್ರಮ – ಹೆಚ್ ಡಿಕೆಯಿಂದ ದಾಖಲೆ ಬಿಡುಗಡೆ

ಟೋಲ್ ಸಂಗ್ರಹ ಅಕ್ರಮ – ಹೆಚ್ ಡಿಕೆಯಿಂದ ದಾಖಲೆ ಬಿಡುಗಡೆ

ಬೆಂಗಳೂರು, ಅ. ೦೭: ನೈಸ್ ರಸ್ತೆ ಟೋಲ್ ಸಂಗ್ರಹದಲ್ಲಿ ನಡೆಯುತ್ತಿರುವ ಅಕ್ರಮವನ್ನು ಬಯಲು ಮಾಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹಚ್ಡಿ ಕುಮಾರಸ್ವಾಮಿ, ಈ ಕುರಿತು ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ದೇವೇಗೌಡರ ೨೫ ವರ್ಷಗಳ ನಿರಂತರ ಹೋರಾಟ ತಾರ್ಕಿಕ ಅಂತ್ಯಕ್ಕೆ ಬರುವ ಸಮಯ ಬಂದಿದೆ ಎಂದು ಹೇಳಿರುವ ಕುಮಾರಸ್ವಾಮಿ, “೨೦೦೦ನೇ ಇಸವಿಯಲ್ಲಿ ಟೋಲ್ ಒಪ್ಪಂದವಾಗಿದ್ದು, ೨೦೦೮ ರಿಂದ ಅಕ್ರಮವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.


ಬೆಂಗಳೂರಿನ ಜೆಡಿಎಸ್ ಪ್ರಧಾನ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು “ಕರ್ನಾಟಕ ಸರ್ಕಾರ ಮತ್ತು ನೈಸ್ ನಡುವಿನ ಒಪ್ಪಂದವು ಮೂರು ಭಾಗಗಳನ್ನು ಒಳಗೊಂಡಿದೆ. ಮೊದಲನೆಯದು ಒಪ್ಪಂದ (ಅಗ್ರಿಮೆಂಟ್), ಎರಡನೆಯದು ಯಾವ ರೀತಿ ಟೋಲ್ ಕೆಲಸ ಮಾಡಬೇಕು ಎಂಬುದು, ಮೂರನೆಯದು ನಿಯಮಗಳು (ಕಂಡೀಷನ್ಸ್). ಒಪ್ಪಂದದಲ್ಲಿ ಸರ್ವಿಸ್ ಏರಿಯಾ ಮತ್ತು ಮೆಂಟೇನೆನ್ಸ್ ಏರಿಯಾ ನಿರ್ಮಿಸಬೇಕು ಎಂದಿದೆ. ಆದರೆ ಇಲ್ಲಿಯವರೆಗೆ ಯಾವುದನ್ನೂ ಮಾಡಿಲ್ಲ. ಇವೆಲ್ಲವನ್ನೂ ಮಾಡಿದ ಬಳಿಕವೇ ಟೋಲ್ ಪಡೆಯಬೇಕು” ಎಂದು ವಿವರಿಸಿದರು.


ಫೆರಿಫೆರಿಯಲ್ ರಸ್ತೆ ನಿರ್ಮಾಣಕ್ಕೆ ೨೧೯೩ ಎಕರೆ ಜಮೀನು ಅಗತ್ಯವಿದೆ ಎಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ನೈಸ್ ಸಂಸ್ಥೆ ೭೫೫೫ ಎಕರೆ ಕರಾಬ್ ಲ್ಯಾಂಡ್ ಸೇರಿದಂತೆ ೨೦ ಸಾವಿರ ಎಕರೆ ಭೂಮಿ ಕೇಳಿದೆ. ೧೬೩ ಕಿ.ಮೀ ರಸ್ತೆಗೆ ೬೯೯೯ ಎಕರೆ ಕೇಳಿರುವುದು ಶೋಚನೀಯ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

“೨೯/೭/೨೦೨೬ ರಲ್ಲಿ ಸುಪ್ರೀಂ ಕೋರ್ಟ್ ಈ ಎಲ್ಲವನ್ನೂ ಪರಿಶೀಲಿಸಿ, ಇದು ಫ್ರಾಡ್ ಎಂದು ಪರೋಕ್ಷವಾಗಿ ಹೇಳಿದೆ. ರಾಜ್ಯ ಸರ್ಕಾರ ಇದರಲ್ಲಿ ಶಾಮೀಲಾಗಿದೆ. ಯಾರು ಈ ಫ್ರಾಡ್ ಮಾಡಿದ್ದು ಎಂದು ಸಿಎಂ ಉತ್ತರಿಸಬೇಕು” ಎಂದು ಕುಮಾರಸ್ವಾಮಿ ಸವಾಲು ಹಾಕಿದರು. ಹೈಕೋರ್ಟ್ ಆದೇಶದ ಬಳಿಕ ತಾವು ಟೋಲ್ ಕಟ್ಟಬೇಡಿ ಎಂದು ಹೇಳಿದ್ದನ್ನು ಕುಮಾರಸ್ವಾಮಿ ಸ್ಮರಿಸಿದರು.


ಇದಕ್ಕೆ ಯಾವ ಮಂತ್ರಿಗಳು ಉತ್ತರ ಕೊಟ್ಟಿಲ್ಲ

೧೨.೦೨.೨೦೦೪ಕ್ಕೆ ಡಿಕೆ ಶಿವಕುಮಾರ್ ಕಾಲದಲ್ಲಿ ಚೇಂಜ್ ಮಾಡಿದ್ರು ಈಗಿನ ಸಿಎಂ ಟೈಲರ್ ಕೆಲಸ ಮಾಡಿದ್ದಾರೆ,ಕ್ಯಾಬಿನೆಟ್ ಗೆ ಇದನ್ನ ತೆಗೆದುಕೊಂಡು ಹೋಗಲ್ಲ.ಹೈಕೋರ್ಟ್ ಇವರನ್ನ ಹೆಸರನ್ನ ಹೇಳದೆ ಫ್ರಾಡ್ ಅಂಥ ಹೇಳಿದೆ.ಹೆಸರು ಹೇಳಿದರೆ ರಾಜ್ಯದ ಮರ್ಯಾದೆ ಹೋಗುತ್ತೆ ಅಂತ ಹೇಳಿಲ್ಲ.ಕೃಷ್ಣ ಬೈರೇಗೌಡ ಅವರ ಕ್ಷೇತ್ರದಲ್ಲಿ ೬೦೦೦ ಗುಂಡಿ ಇವೆ.ಅದನ್ನ ಸರಿ ಪಡಿಸದೆ ಏನೋ ಮಾಡ್ತಾರಂತೆ..


೨೦೦೭ರಲ್ಲಿ ರಾಜ್ಯ ಸರ್ಕಾರದ ಮೇಲೆ ಓIಅಇಐ ಕಾಂಟೆಂಪ್ಟ್ ಹಾಕಿದ್ದಾರೆ. ಪ್ಲಾನ್ ಮೇಲೆ ಎಲ್ಲವನ್ನು ಮಾಡಿದ್ದೇವೆ ಇದರಿಂದ ಉಲ್ಲಂಘನೆ ಮಾಡಿರುವುದು ಗೊತ್ತಾಗುತ್ತೆ ಎಂದರು

ದೇವೆಗೌಡರು ೨೦ ವರ್ಷಗಳಿಂದ ಸಾಲ ಮಾಡಿ ಹೋರಾಟ ಮಾಡ್ತಿದಾರೆ.ಕಾಮಗಾರಿ ವೇಳೆ ಹಲವರನ್ನ ಸಾಯಿಸಿದ್ದಾರೆ.ಚಿತ್ರಹಿಂಸೆ ನೀಡಿದ್ದಾರೆ.ಇದಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೊ ಇದೆ.ಈಗ ಸುಪ್ರಿಂ ಕೋರ್ಟ್ ಕೊಟ್ಟ ತೀರ್ಪು ರೈತರನ್ನ ಉಳಿಸುವ ಹೋರಾಟಕ್ಕೆ ಮತ್ತೆ ಜೀವ ಬಂದಿದೆ.ನೈಸ್ ರಸ್ತೆ ಬೇಕಿಲ್ಲ ಎಂದು ಸದನ ಸಮಿತಿಯ ಅಧ್ಯಕ್ಷ ಟಿ.ಬಿ ಜಯಚಂದ್ರ ೨೦೨೩ರಲ್ಲಿ ತಕ್ಷಣ ನೈಸ್ ರಸ್ತೆ ವಶಪಡಿಸಿಕೊಳ್ಳಬೇಕು ಎಂದು ಹೇಳಿದ್ದರು ನಂತರ ೨೦೨೫ರಲ್ಲಿ ಪತ್ರ ಬರೆದು ಯೋಜನೆ ಮುಂದುವರಿಸುವಂತೆ ಹೇಳಿದ್ದರು ಅವರು ಹ್ಯಾಗೆ ಏಕೆ ಮಾಡಿದರೋ ಗೊತ್ತಿಲ್ಲ ಎಂದು ಅವರು ಬರೆದ ಪತ್ರದ ಪ್ರತಿಗಳನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು