Home ಮುಖಪುಟ ಸುದ್ದಿ ರೆಪೊ ದರ ಏರಿಕೆ

ರೆಪೊ ದರ ಏರಿಕೆ

ಮುಂಬೈ.ಅ೭: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರವನ್ನು ೨೫ ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿರುವ ಹಿನ್ನೆಲೆಯಲಿ ರೆಪೊ ದರಕ್ಕೆ ಸಂಪರ್ಕ ಹೊಂದಿರುವ ಗೃಹ ಸಾಲಗಳ ಬಡ್ಡಿದರ ಮತ್ತು ಇಎಂಐ ಹೆಚ್ಚಾಗುವ ಸಾಧ್ಯತೆ ಇದೆ. ಸಾಲಗಾರರ ಮೇಲೆ ಬೀಳುವ ನಿಖರ ಹೊರೆ ಅವರ ಸಾಲದ ಮೊತ್ತ, ಉಳಿದಿರುವ ಅವಧಿ ಹಾಗೂ ಬ್ಯಾಂಕ್ ಬಡ್ಡಿದರವನ್ನು ಎಷ್ಟು ಪ್ರಮಾಣದಲ್ಲಿ ವರ್ಗಾಯಿಸುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ.

೨೦ ವರ್ಷಗಳ ಬಾಕಿ ಅವಧಿಯ ಸಾಲದಲ್ಲಿ ಬಡ್ಡಿದರ ಶೇ.೭.೨೫ರಿಂದ ಶೇ.೭.೫೦ಕ್ಕೆ ಏರಿಕೆಯಾದರೆ ಇಎಂಐ ಮೇಲೆ ಬೀಳುವ ಪರಿಣಾಮವನ್ನು ಕೆಳಗಿನಂತೆ ಅಂದಾಜಿಸಬಹುದು:

೨೫ ಲಕ್ಷ೨ ಕೋಟಿ ಸಾಲ: ಇಎಂಐ ಮೇಲೆ ಪರಿಣಾಮ

ಬಾಕಿ ಸಾಲಹಳೆಯ ಇಎಂಐಹೊಸ ಇಎಂಐತಿಂಗಳ ಹೆಚ್ಚಳ
೨೫ ಲಕ್ಷ ೧೯,೭೫೯೨೦,೧೪೦೩೮೦
?೫೦ ಲಕ್ಷ ೩೯,೫೧೯೪೦,೨೮೦೭೬೧
೭೫ ಲಕ್ಷ ೫೯,೨೭೮೬೦,೪೧೯೧,೧೪೧
೧ ಕೋಟಿ ೭೯,೦೩೮೮೦,೫೫೯೧,೫೨೨
೧.೨೫ ಕೋಟಿ೯೮,೭೯೭೧,೦೦,೬೯೯೧,೯೦೨
೧.೫೦ ಕೋಟಿ೧,೧೮,೫೫೬೧,೨೦,೮೩೯೨,೨೮೩
೧.೭೫ ಕೋಟಿ೧,೩೮,೩೧೬೧,೪೦,೯೭೯೨,೬೬೩
೨ ಕೋಟಿ೧,೫೮,೦೭೫೧,೬೧,೧೧೯೩,೦೪೩

ಅಂದರೆ, ಇದೇ ಉದಾಹರಣೆಯಲ್ಲಿ ೨೫ ಲಕ್ಷದ ಸಾಲಗಾರನಿಗೆ ತಿಂಗಳಿಗೆ ಸುಮಾರು ?೩೮೦ ಹೆಚ್ಚುವರಿ ಹೊರೆ ಬೀಳಲಿದ್ದರೆ, ?೧ ಕೋಟಿಯ ಸಾಲಗಾರನಿಗೆ ಸುಮಾರು ?೧,೫೨೨ ಮತ್ತು ?೨ ಕೋಟಿಯ ಸಾಲಗಾರನಿಗೆ ಸುಮಾರು ?೩,೦೪೩ ಹೆಚ್ಚುವರಿ ಇಎಂಐ ಬೀಳಲಿದೆ.

೫೦ ಲಕ್ಷ ಸಾಲಕ್ಕೆ ೭೦೦ ೮೫೦ ಹೆಚ್ಚಳ

೨೫ ವರ್ಷಗಳ ಅವಧಿಯ ಶೇ.೭.೫ರ ಸಾಲದಲ್ಲಿ ೩೦ ಲಕ್ಷದ ಗೃಹ ಸಾಲಕ್ಕೆ ಇಎಂಐ ಸುಮಾರು ೪೯೦, ?೪೦ ಲಕ್ಷಕ್ಕೆ ?೬೫೪ ಮತ್ತು ೫೦ ಲಕ್ಷಕ್ಕೆ ೮೧೭ ಹೆಚ್ಚಾಗಬಹುದು. ಸಾಲದ ಸಂಪೂರ್ಣ ಅವಧಿಯಲ್ಲಿ ಹೆಚ್ಚುವರಿ ಬಡ್ಡಿ ವೆಚ್ಚ ಕ್ರಮವಾಗಿ ಸುಮಾರು ?೧.೫ ಲಕ್ಷ, ?೧.೯೬ ಲಕ್ಷ ಮತ್ತು ?೨.೪೫ ಲಕ್ಷದಷ್ಟಾಗಬಹುದು.

೩೦ ವರ್ಷಗಳ ೫೦ ಲಕ್ಷ ಗೃಹ ಸಾಲದಲ್ಲಿ ೨೫ ಬೇಸಿಸ್ ಪಾಯಿಂಟ್‌ಗಳ ಏರಿಕೆಯ ಪರಿಣಾಮವಾಗಿ ಸಾರ್ವಜನಿಕ ವಲಯದ ಬ್ಯಾಂಕ್‌ನಲ್ಲಿ ಇಎಂಐ ೩೪,೧೦೯ರಿಂದ ೩೪,೯೬೧ಕ್ಕೆ, ಅಂದರೆ ಸುಮಾರು ?೮೫೨ ಹೆಚ್ಚಾಗಬಹುದು. ಖಾಸಗಿ ಬ್ಯಾಂಕ್‌ನಲ್ಲಿ ?೩೫,೮೨೧ರಿಂದ ?೩೬,೬೮೮ಕ್ಕೆ, ಸುಮಾರು ೮೬೭ ಹೆಚ್ಚಳವಾಗಬಹುದು.

ಯಾವ ಸಾಲಗಾರರಿಗೆ ಹೆಚ್ಚು ಪರಿಣಾಮ?

ರೆಪೊ ದರಕ್ಕೆ ಸಂಪರ್ಕ ಹೊಂದಿರುವ *ಬಾಹ್ಯ ಮಾನದಂಡ ಆಧಾರಿತ ಬಡ್ಡಿದರದ ಫ್ಲೋಟಿಂಗ್ ರೇಟ್ ಗೃಹ ಸಾಲಗಾರರಿಗೆ ದರ ಏರಿಕೆಯ ನೇರ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚು. ಬ್ಯಾಂಕ್‌ಗಳು ಬಡ್ಡಿದರ ಹೆಚ್ಚಳವನ್ನು ಇಎಂಐ ಹೆಚ್ಚಿಸುವ ಮೂಲಕ ಅಥವಾ ಸಾಲದ ಅವಧಿಯನ್ನು ವಿಸ್ತರಿಸುವ ಮೂಲಕ ಜಾರಿಗೆ ತರಬಹುದು.

ಒಅಐಖಗೆ ಸಂಪರ್ಕ ಹೊಂದಿರುವ ಸಾಲಗಳಿಗೆ ಪರಿಣಾಮ ತಕ್ಷಣವೇ ಆಗದೇ ಹಂತ ಹಂತವಾಗಿ ಕಾಣಿಸಿಕೊಳ್ಳಬಹುದು. ಆದರೆ ಸ್ಥಿರ ಬಡ್ಡಿದರದ ಲಗಾರರ ಇಎಂಐ ಮೇಲೆ ರೆಪೊ ದರ ಏರಿಕೆಯ ನೇರ ಪರಿಣಾಮ ಇರುವುದಿಲ್ಲ.

ಕೆಲವು ಪ್ರಮುಖ ಗೃಹ ಸಾಲದ ಬಡ್ಡಿದರಗಳು

ಅಕ್ಟೋಬರ್ ೨, ೨೦೨೬ರಂದು ಸಂಬಂಧಿತ ಸಾಲದಾತರ ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗಿದ್ದ ದರಗಳ ಆಧಾರದಲ್ಲಿ ಕೆಲವು ಸಾಲದಾತರ ಕನಿಷ್ಠ ಗೃಹ ಸಾಲ ಬಡ್ಡಿದರಗಳು ಹೀಗಿವೆ:

ಸಾಲದಾತಕನಿಷ್ಠ ಬಡ್ಡಿದರ
ಬ್ಯಾಂಕ್ ಆಫ್ ಮಹಾರಾಷ್ಟ್ರಶೇ.೭.೦೦
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಶೇ.೭.೦೦
ಬ್ಯಾಂಕ್ ಆಫ್ ಇಂಡಿಯಾಶೇ.೭.೧೦
ಕೆನರಾ ಬ್ಯಾಂಕ್ಶೇ.೭.೧೫
ಪಂಜಾಬ್ ನ್ಯಾಷನಲ್ ಬ್ಯಾಂಕ್ಶೇ.೭.೨೫
ಫೆಡರಲ್ ಬ್ಯಾಂಕ್ಶೇ.೭.೩೫
ಐಸಿಐಸಿಐ ಬ್ಯಾಂಕ್ಶೇ.೭.೫೫
ಕೋಟಕ್ ಮಹೀಂದ್ರಾ ಬ್ಯಾಂಕ್ ಶೇ.೭.೬೦
ಎಚ್‌ಡಿಎಫ್‌ಸಿ ಬ್ಯಾಂಕ್ಶೇ.೭.೭೫
ಆಕ್ಸಿಸ್ ಬ್ಯಾಂಕ್ಶೇ.೮.೦೦
ಎಲ್‌ಐಸಿ ಹೌಸಿಂಗ್ ಫೈನಾನ್ಸ್ಶೇ.೭.೧೫
ಬಜಾಜ್ ಫಿನ್‌ಸರ್ವ್ಶೇ.೭.೨೫
ಟಾಟಾ ಕ್ಯಾಪಿಟಲ್ಶೇ.೭.೫೦
ಪಿಎನ್‌ಬಿ ಹೌಸಿಂಗ್ ಫೈನಾನ್ಸ್ಶೇ.೭.೭೫
ಆದಿತ್ಯ ಬಿರ್ಲಾ ಹೌಸಿಂಗ್ ಫೈನಾನ್ಸ್ಶೇ.೭.೭೫

ಈ ದರಗಳು ಸೂಚಕ ಕನಿಷ್ಠ ದರಗಳಾಗಿದ್ದು, ನಿಜವಾದ ಬಡ್ಡಿದರವು ಸಾಲಗಾರರ ಕ್ರೆಡಿಟ್ ಸ್ಕೋರ್, ಆದಾಯ, ಸಾಲದ ಮೊತ್ತ, ಅವಧಿ ಮತ್ತು ಸಾಲದಾತರ ನಿಯಮಗಳನ್ನು ಅವಲಂಬಿಸಿರುತ್ತದೆ.


ಬಡ್ಡಿದರ ಏರಿಕೆಯಿಂದ ಉಂಟಾಗುವ ಹೆಚ್ಚುವರಿ ಹೊರೆ ಕಡಿಮೆ ಮಾಡಲು ಸಾಲಗಾರರು **ಭಾಗಶಃ ಪೂರ್ವಪಾವತಿ (Pಡಿeಠಿಚಿಥಿmeಟಿಣ) ಮಾಡಬಹುದು. ಸಾಲದ ಆರಂಭಿಕ ಹಂತದಲ್ಲೇ ಹೆಚ್ಚುವರಿ ಹಣ ಪಾವತಿಸಿದರೆ ಒಟ್ಟು ಬಡ್ಡಿ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.

ಪೂರ್ವಪಾವತಿಯ ನಂತರ ಎರಡು ಆಯ್ಕೆಗಳಿರುತ್ತವೆ. ಇಎಂಐ ಕಡಿಮೆ ಮಾಡಿಕೊಂಡು ಅದೇ ಅವಧಿಯನ್ನು ಮುಂದುವರಿಸಬಹುದು ಅಥವಾ ಪ್ರಸ್ತುತ ಇಎಂಐಯನ್ನೇ ಮುಂದುವರಿಸಿ ಸಾಲದ ಅವಧಿಯನ್ನು ಕಡಿಮೆ ಮಾಡಬಹುದು. ಎರಡನೇ ಆಯ್ಕೆಯಿಂದ ಒಟ್ಟು ಬಡ್ಡಿ ಉಳಿತಾಯ ಹೆಚ್ಚಾಗುವ ಸಾಧ್ಯತೆ ಇದೆ.

ಕಡಿಮೆ ಬಡ್ಡಿದರ ನೀಡುವ ಮತ್ತೊಂದು ಬ್ಯಾಂಕ್‌ಗೆ ಸಾಲ ವರ್ಗಾವಣೆ (ರೀಫೈನಾನ್ಸಿಂಗ್/ಬ್ಯಾಲೆನ್ಸ್ ಟ್ರಾನ್ಸ್‌ಫರ್)ಮಾಡುವುದೂ ಒಂದು ಮಾರ್ಗ. ಉತ್ತಮ ಕ್ರೆಡಿಟ್ ಸ್ಕೋರ್ ಮತ್ತು ಉತ್ತಮ ಮರುಪಾವತಿ ದಾಖಲೆ ಹೊಂದಿರುವವರಿಗೆ ಅನುಕೂಲಕರ ದರ ದೊರೆಯುವ ಸಾಧ್ಯತೆ ಇರುತ್ತದೆ. ಆದರೆ ಸಾಲ ವರ್ಗಾವಣೆಗೂ ಮುನ್ನ ಪ್ರೊಸೆಸಿಂಗ್ ಶುಲ್ಕ, ಇತರೆ ವೆಚ್ಚಗಳು ಮತ್ತು ಉಳಿದಿರುವ ಸಾಲದ ಅವಧಿಯನ್ನು ಲೆಕ್ಕ ಹಾಕಬೇಕು.

ಬಡ್ಡಿದರ ಏರಿಕೆಯಿಂದ ಮನೆ ಖರೀದಿಯ ಮಾಸಿಕ ವೆಚ್ಚ ಹೆಚ್ಚಾಗುವುದರಿಂದ ಕೆಲವು ಗ್ರಾಹಕರು ಖರೀದಿ ನಿರ್ಧಾರವನ್ನು ಮುಂದೂಡುವ ಸಾಧ್ಯತೆ ಇದೆ. ವಿಶೇಷವಾಗಿ ಹಬ್ಬದ ಋತುವಿನಲ್ಲಿ ವಸತಿ ಬೇಡಿಕೆಯ ಮೇಲೆ ಇದರ ಪರಿಣಾಮ ಕಾಣಿಸಿಕೊಳ್ಳಬಹುದು.

ರೆಪೊ ದರ ೨೫ ಬಿಪಿಎಸ್ ಏರಿಕೆಯಾದರೂ ಪ್ರತಿಯೊಬ್ಬ ಸಾಲಗಾರನ ಇಎಂಐ ಒಂದೇ ಪ್ರಮಾಣದಲ್ಲಿ ಹೆಚ್ಚಾಗುವುದಿಲ್ಲ. ಸಾಲದ ಮೊತ್ತ, ಉಳಿದ ಅವಧಿ, ಪ್ರಸ್ತುತ ಬಡ್ಡಿದರ ಮತ್ತು ಬ್ಯಾಂಕ್ ದರ ಏರಿಕೆಯನ್ನು ಹೇಗೆ ಜಾರಿಗೆ ತರುತ್ತದೆ ಎಂಬುದೇ ಅಂತಿಮ ಇಎಂಐ ನಿರ್ಧರಿಸುತ್ತದೆ.