ಆನೇಕಲ್ ತಾಲ್ಲೂಕು ಅತ್ತಿಬೆಲೆ ಹೋಬಳಿ, ನೆರಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯಡವನಹಳ್ಳಿ ಗ್ರಾಮದ ಸರ್ಕಾರಿ ಜಾಗದಲ್ಲಿ ವಾಸಿಸುತ್ತಿರುವ ಬಡಕುಟುಂಬಗಳಿಗೆ ಆಶ್ರಯ ಯೋಜನೆಯಡಿಯಲ್ಲಿ ಹಕ್ಕುಪತ್ರ ನೀಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್‌ರವರು ಮನವಿ ಪತ್ರ ಸಲ್ಲಿಸಿದರು. ಜಇಲ್ಲಾ ಸಂಚಾಲಕ ರವಿಕುಮಾರ್ ವರ್ತೂರು, ರಾಜ್ಯ ಸಮಿತಿ ಸದಸ್ಯ ಮಣಿಪಾಲ್ ರಾಜಪ್ಪ ಮತ್ತಿತರರು ಇದ್ದಾರೆ.