Home ಜಿಲ್ಲೆ ಮಂಗಳೂರು ಸ್ವ-ಸಹಾಯ ಸಂಘಗಳ ಮೂಲಕ ಜನರಲ್ಲಿ ಸ್ವಾವಲಂಬನೆ ಬೆಳೆದಿದೆ – ರಾಜೇಶನಾಥ ಜೀ: ಪ್ರಗತಿ ಬಂಧು...

ಸ್ವ-ಸಹಾಯ ಸಂಘಗಳ ಮೂಲಕ ಜನರಲ್ಲಿ ಸ್ವಾವಲಂಬನೆ ಬೆಳೆದಿದೆ – ರಾಜೇಶನಾಥ ಜೀ: ಪ್ರಗತಿ ಬಂಧು ಸ್ವಸಹಾಯ ಒಕ್ಕೂಟ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಸುಳ್ಯ:ಜನರಲ್ಲಿ ಶಿಸ್ತು, ಸ್ವಾವಲಂಬನೆ, ಪರಿಸರ ಪ್ರಜ್ಞೆ, ಧಾರ್ಮಿಕ ಪ್ರಜ್ಞೆಯ ಜೊತೆಗೆ ಅಭಿವೃದ್ಧಿ ಮಾಡುವ ಸ್ವಸಹಾಯ ಸಂಘಗಳು ಜನರಲ್ಲಿ ಸ್ವಾವಲಂಬನೆ ಬೆಳೆದಿದೆ. ಇಂತಹ ಪುಣ್ಯದ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗಿಯಾಗಿ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಕಂಜ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೀಶ್ವರ ಸಿದ್ದಮಠದ ಶ್ರೀ ರಾಜೇಶನಾಥ ಜೀ ಹೇಳಿದರು.
ಅರಂತೋಡಿನ ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು ಪ್ರಗತಿ ಬಂಧು – ಸ್ವಸಹಾಯ ಸಂಘಗಳ ಒಕ್ಕೂಟ ಸಂಪಾಜೆ ವಲಯದ ಅರಂತೋಡು, ತೊಡಿಕಾನ, ಅರಂಬೂರು, ಮಕಂಜ, ಪ್ರಗತಿ ಬಂಧು ಸ್ವಸಹಾಯ ಒಕ್ಕೂಟ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ, ಜನಜಾಗೃತಿ ಸುಳ್ಯ ತಾಲೂಕು ಅಧ್ಯಕ್ಷರಾದ ವೆಂಕಪ್ಪ ಗೌಡ , ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಜನಜಾಗೃತಿ ವೇದಿಕೆ ಸುಳ್ಯ ತಾಲೂಕು ನಿಕಟ ಪೂರ್ವ ಅಧ್ಯಕ್ಷರಾದ ಭವಾನಿಶಂಕರ್ ಅಡ್ತಲೆ, ಲೋಕನಾಥ ಅಮೆಚೂರು, ಉದ್ಯಮಿ ಡಿ.ವಿ ಸತೀಶ್ ದೊಳಮನೆ, ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಶಹೀದ್ ಟಿ.ಎಂ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸಂಪಾಜೆ ವಲಯದ ವಲಯಾಧ್ಯಕ್ಷ ಹೂವಯ್ಯ ಗೌಡ, ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು ಅಧ್ಯಕ್ಷ ಸೋಮಶೇಖರ ಪೈಕ, ಅರಂತೋಡು ಗ್ರಾ.ಪಂ. ಮಾಜಿ ಅಧ್ಯಕ್ಷ ಕೇಶವ ಅಡ್ತಲೆ, ಜನಜಾಗೃತಿ ಸಂಪಾಜೆ ವಲಯಾಧ್ಯಕ್ಷ ಸತೀಶ್ ರಾವ್ ದಾಸರಬೈಲು, ಮಂಜುನಾಥೇಶ್ವರ ಭಜನಾ ಪರಿಷತ್ ಸಂಪಾಜೆ ಇದರ ಅಧ್ಯಕ್ಷೆ ಭಾರತಿ ಉಳುವಾರು, ಸುಳ್ಯ ತಾ.ಪಂ. ಮಾಜಿ ಉಪಾಧ್ಯಕ್ಷೆ ಪುಷ್ಪ ಮೇದಪ್ಪ, ಜನಜಾಗೃತಿ ವೇದಿಕೆ ಸುಳ್ಯ ತಾಲೂಕು ಸದಸ್ಯ ಜಗನ್ನಾಥ ಕಾಯರ, ಒಕ್ಕೂಟದ ಅಧ್ಯಕ್ಷರುಗಳಾದ ರತ್ನಾವತಿ ಅಳಿಕೆ, ಚಂದ್ರಶೇಖರ ನೆಡ್ಚಿಲು, ಜನಾರ್ಧನ ಬಾಳಕಜೆ, ಗೋಪಾಲಕೃಷ್ಣ ಬಿ.ಕೆ ಬಲ್ಕಾಡಿ, ರಾಧಾಕೃಷ್ಣ ಅಂಗಡಿಮಜಲು, ಲೀಲಾವತಿ ಸೂಟೆಗದ್ದೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ಮಾಡಿದ ಸಂಘಗಳನ್ನು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳಿಗೆ ಸಹಕಾರ ನೀಡಿದ ಗಣ್ಯರನ್ನು ಸನ್ಮಾನಿಸಲಾಯಿತು. ೧೦ ಮಂದಿ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು. ಸಂಪೂರ್ಣ ಸುರಕ್ಷಾದಲ್ಲಿ ಮನಮೋಹನ ಎಂಬವರಿಗೆ ಸಂಪೂರ್ಣ ಸುರಕ್ಷಾ ಮಂಜುರಾತಿ ಪತ್ರವನ್ನು ವಿತರಿಸಲಾಯಿತು.
ತೊಡಿಕಾನ ಸೇವಾ ಪ್ರತಿನಿಧಿ ಸುಂದರ ವರದಿ ವಾಚಿಸಿದರು., ವಲಯದ ಮೇಲ್ವಿಚಾರಕ ಹರೀಶ್ ಆಚಾರ್ಯ ಸ್ವಾಗತಿಸಿದರು, ಚಂದ್ರಶೇಖರ ಆಚಾರ್ಯ ವಂದಿಸಿದರು. ಸುಷ್ಮಾ ಮೆತ್ತಡ್ಕ, ದೇವಪ್ಪ
ಹೈದಂಗೂರು ಕಾರ್ಯಕ್ರಮ ನಿರೂಪಿಸಿದರು.