Home ಜಿಲ್ಲೆ ಗಣೇಶನ ಮೂರ್ತಿಗೆ ಹಾರಕೂಡ ಶ್ರೀಗಳಿಂದ ಗೌರವ ಸಮರ್ಪಣೆ

ಗಣೇಶನ ಮೂರ್ತಿಗೆ ಹಾರಕೂಡ ಶ್ರೀಗಳಿಂದ ಗೌರವ ಸಮರ್ಪಣೆ

ಬಸವಕಲ್ಯಾಣ: ತಾಲೂಕಿನ ಸುಕ್ಷೇತ್ರ ಹಾರಕೂಡ ಶ್ರೀಮಠದ ದಾಸೋಹ ಮನೆಯಲ್ಲಿ ಗಣೇಶ ಚತುರ್ಥಿ ಹಬ್ಬದ ನಿಮಿತ್ಯ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಸೋಮವಾರ ಬೆಳಗ್ಗೆ ಶ್ರೀ ಗಣೇಶನ ಮೂರ್ತಿಗೆ ಗೌರವ ಸಮರ್ಪಿಸಿದರು.
ಶ್ರೀ ಮಲ್ಲಿನಾಥ ಹಿರೇಮಠ ಹಾರಕೂಡ, ಗುಂಡಯ್ಯ ಪೊಲೀಸ್ ಪಾಟೀಲ, ಅಲ್ಲಮ ಪ್ರಭು ಹಿರೇಮಠ, ಹೇಮಲತಾ ಎಂ ಹಿರೇಮಠ, ಚನ್ನಬಸಯ್ಯ ಮಠ ದೇವಣಗಾಂವ, ಗಂಗಮ್ಮ ಹಂಜಿಗೆ ಮುಂತಾದವರು ಉಪಸ್ಥಿತರಿದ್ದರು.