
ಪಡುಬಿದ್ರಿ : ಸಮಾಜದಲ್ಲಿ ಹರಡಿದ್ದ ಅನ್ಯಾಯ , ಅತ್ಯಾಚಾರ, ವ್ಯಬಿಚಾರ, ಮಧ್ಯಪಾನ , ಹೆಣ್ಣು ಮಕ್ಕಳ ಹತ್ಯೆ , ಬಡ್ಡಿ, ಜೂಜು, ಕೊಲೆ, ದರೋಡೆ, ಮೋಸ, ವಂಚನೆ, ಬಹು ದೇವರಾಧನೆ ಗಳಂತಹ ಭೀಕರ ಕೆಡುಕುಗಳನ್ನು ಹದಿನಾಲ್ಕು ಶತಮಾನದ ಹಿಂದೆ ಅರಬ್ ದೇಶದಲ್ಲಿ ಜನಿಸಿದ ಪ್ರವಾದಿ ಮುಹಮ್ಮದ್ ( ಸ ) ರವರು ಸ್ರಷ್ಟಿಕರ್ತನ ಆದೇಶದ ಮೇರೆಗೆ , ನಿರಂತರವಾಗಿ ಪರಿಶ್ರಮಿಸಿದ ಕಾರಣದಿಂದ ಅವೆಲ್ಲವೂ ಅಳಿಸಿ ಹೋಗಿ ಇಂದಿನ ತನಕ ಮುಸ್ಲಿಮ್ ಸಮುದಾಯದಲ್ಲಿ ಆ ಕೆಡುಕುಗಳು ಮತ್ತೆ ತಲೆ ಎತ್ತಲಿಲ್ಲ. ಆದ್ದರಿಂದ
ಈ ಕ್ರಾಂತಿಯ ಜ್ಯೋತಿ ಬೆಳಗಿದ ಪ್ರವಾದಿ ಮುಹಮ್ಮದ್ (ಸ ) ರವರು ಎಲ್ಲರಿಗೂ ಎಲ್ಲಾ ಕಾಲಕ್ಕೂ ಮಾದರಿಯಾಗಿದ್ದಾರೆ. ಮತ್ತು ಅವರ ಸಂದೇಶ ಎಲ್ಲಾ ಕಾಲಕ್ಕೂ ಎಲ್ಲರಿಗೂ ಅನುಸರಣಾ ಯೋಗ್ಯವಾಗಿದೆ ಎಂದು ಜಮಾ ಆತೆ ಇಸ್ಲಾಮಿ ಹಿಂದ್ ಕಾಪು ಶಾಖೆ ವತಿಯಿಂದ ಪಡುಬಿದ್ರೆ ಯ ಸಹಕಾರ ಸಂಘಮದ ವೈ ಹಿರಿಯಣ್ಣ ಸಭಾಂಗಣದಲ್ಲಿ ನಡೆದ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ, ಮಂಗಳೂರು ನಗರ ಶಾಖೆಯ ಅಧ್ಯಕ್ಷರು ಆದ ಸಿ. ಎ. ಮುಹಮ್ಮದ್ ಇಸ್ಹಾಕ್ ಪುತ್ತೂರು ರವರು ಹೇಳಿದರು.
ಕಾರ್ಯಕ್ರಮದಲ್ಲಿ ಜಮಾ ಆತೆ ಇಸ್ಲಾಮಿ ಹಿಂದ್ ನ ಮಂಗಳೂರು ವಲಯ ಸಂಚಾಲಕರು ಆದ ಸಯೀದ್ ಇಸ್ಮಾಯಿಲ್ ರವರು, ಜಮಾ ಆತೆ ಇಸ್ಲಾಮಿ ಹಿಂದ್ ಈ ರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ನಡೆಸಿರುವ ಕಾರ್ಯ ಚಟುವಟಿಕೆಗಳು ಮತ್ತು ಅದರ ದ್ಯೇಯೋದ್ದೇಶದ ವಿವರಣೆ ನೀಡುತ್ತಾ ಈ ಸೀರತ್ ಅಭಿಯಾನದಲ್ಲಿ ಪ್ರವಾದಿ ಮುಹಮ್ಮದ್ (ಸ ) ರವರ ಬೋಧನೆಗಳನ್ನ ಸಮಾಜದಲ್ಲಿ ಇರುವ ಎಲ್ಲಾ ಜನರಿಗೆ ತಿಳಿಯ ಪಡಿಸಲಿಕ್ಕಾಗಿ ವಿಚಾರ ವಿನಿಮಯ , ವಿಚಾರಿಗೋಷ್ಠಿ ಹಾಗೂ ಇನ್ನಿತರ ಕಾರ್ಯಕ್ರಮಗಳ ಮೂಲಕ ಪ್ರಯತ್ನಿಸುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಹಾಗೂ ಗ್ರಂಥ ಕರ್ತ ಶ್ರೀ ಯೋಗೇಶ್ ಮಾಸ್ಟರ್ ಬರೆದಿರುವ “ಮಾನವ ಮನಸ್ಸಿನ ಕೃಷಿಕ -ಮನದೊಡೆಯ ಪ್ರವಾದಿ ಮುಹಮ್ಮದ್ (ಸ ) ” ಎಂಬ ಪುಸ್ತಕವನ್ನು ಸುಧೀರ್ ಕುಮಾರ್ ರವರು ಹಾಗೂ ವಾರ್ತಾಭಾರತಿ ದಿನ ಪತ್ರಿಕೆಯ ಪ್ರಧಾನ ಸಂಪಾದಕರು ಅಬ್ದುಸ್ಸಲಾಮ್ ಪುತ್ತಿಗೆಯವರು ಬರೆದ “ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್ (ಸ ) ಎಂಬ ಪುಸ್ತಕವನ್ನು ಬುಡನ್ ಸಾಹೇಬರು ಬಿಡುಗಡೆಗೊಳಿಸಿದರು.
ವಿಚಾರ ವಿನಿಮಯದಲ್ಲಿ ಸಭಿಕರು ಸಕ್ರಿಯವಾಗಿ ಭಾಗವಹಿಸಿ ತಮ್ಮ ಸಂಶಯವನ್ನು ನೀವಾರಿಸಿಕೊಂಡ್ಡರು.
ಕಾರ್ಯಕ್ರಮವು ಮುಹಮ್ಮದ್ ಇಕ್ಬಾಲ್ ಸಾಹೇಬರ ಕುರ್ ಆನ್ ಪಠಣದೊಂದಿಗೆ ಪ್ರಾರಂಭವಾಯಿತು.
ಕಾಪು ಶಾಖೆಯ ಅಧ್ಯಕ್ಷರು ಅನ್ವರ್ ಅಲಿಯವರು ಸ್ವಾಗತಿಸಿದರು. ಮುಹಮ್ಮದ್ ಅಲಿ ಯವರು ಧನ್ಯವಾದ ನೀಡಿದರು.





























