
ಕಲಬುರಗಿ: ತಾಜ್ ಸುಲ್ತಾನಪುರ( ಸ.ನಂ 264/ಪಿ)ದಲ್ಲಿ 381 ಬಡ ಫಲಾನುಭವಿಗಳಿಗೆ ಮನೆ ಕಟ್ಟಿಕೊಡಲು,ಮತ್ತು ಹಾಸ್ಟೆಲ್ ಹೊರಗುತ್ತಿಗೆ ನೌಕರರಿಗೆ ಹಾಸ್ಟೆಲ್ ಕಾಲೋನಿ ನಿರ್ಮಿಸಲು ಆಗ್ರಹಿಸಿ ಇಂದು ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಜಿಲ್ಲಾ ಸಮಿತಿಯಿಂದ ಮಹಾನಗರಪಾಲಿಕೆ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ,ಮೇಘರಾಜ ಕಠಾರೆ,ಮಲ್ಲಮ್ಮ ಕೊಡ್ಲಿ, ಕಮಲಾಬಾಯಿ ಹಿರೇಮಠ,ಮಹಮದ್ ಜಮಿರೋದಿನ ಬಾಬಾ, ಪರಶುರಾಮ ಹಡಲಗಿ,ಅಲ್ಲಾಪಟೇಲ್ ವಾಡಿ ಸೇರಿದಂತೆ ಹಲವರು ಪಾಲ್ಗೊಂಡರು.






























