
ಕಲಬುರಗಿ,ಆ.25:ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕೇಂದ್ರ ಗ್ರಂಥಾಲಯ ಹಾಗೂ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಜ್ಞಾನ ವಂದನಾ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ಸಹಯೋಗದಲ್ಲಿ ದೃಷ್ಟಿದೋಷ ವಿದ್ಯಾರ್ಥಿಗಳಿಗಾಗಿ “ತಂತ್ರಜ್ಞಾನ ಸಹಾಯದ ಮೂಲಕ ಜ್ಞಾನ ಸಂಪಾದನೆ” ವಿಷಯದ ಕಾರ್ಯಾಗಾರವನ್ನು ಕೇಂದ್ರ ಗ್ರಂಥಾಲಯದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು, ಗ್ರಂಥಾಲಯದಲ್ಲಿ ಸ್ಥಾಪಿಸಲಾಗಿರುವ ಅತ್ಯಾಧುನಿಕ ತಂತ್ರಜ್ಞಾನದ ಬ್ರೇಲ್ ಸಂಪನ್ಮೂಲ ಕೇಂದ್ರ ಎಲ್ಲ ದೃಷ್ಟಿದೋಷ ವಿದ್ಯಾರ್ಥಿಗಳಿಗೆ ಮುಕ್ತವಾಗಿದ್ದು, ಇದರ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಜ್ಞಾನಾರ್ಜನೆ, ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಹಾಗೂ ಉನ್ನತ ಶಿಕ್ಷಣ ಮತ್ತು ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಅವರು ತಿಳಿಸಿದರು.
ದೃಷ್ಟಿದೋಷ ವಿದ್ಯಾರ್ಥಿಗಳಿಗೆ ವಿಶಿಷ್ಟವಾದ ನೆನಪಿನ ಶಕ್ತಿ, ಕಲಿಕಾ ಸಾಮಥ್ರ್ಯ ಮತ್ತು ವಿಷಯಗಳನ್ನು ಅರ್ಥಮಾಡಿಕೊಳ್ಳುವ ವಿಶೇಷ ಕೌಶಲ್ಯವಿದೆ. ಈ ಸಾಮಥ್ರ್ಯವನ್ನು ತಂತ್ರಜ್ಞಾನದ ನೆರವಿನಿಂದ ಮತ್ತಷ್ಟು ವೃದ್ಧಿಸಿಕೊಂಡು ವಿವಿಧ ಸರ್ಕಾರಿ ಹುದ್ದೆಗಳು ಸೇರಿದಂತೆ ಉನ್ನತ ಮಟ್ಟದ ಅವಕಾಶಗಳನ್ನು ಪಡೆದುಕೊಳ್ಳುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಲಬುರಗಿಯ ಎಸ್. ನಿಜಲಿಂಗಪ್ಪ ದಂತ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯ ಪರಿದಂತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪೆÇ್ರ. ಬಿಂದು ಎಸ್. ಪಾಟೀಲ ಅವರು ಮಾತನಾಡಿ, ಸಹಾಯಕ ತಂತ್ರಜ್ಞಾನಗಳ ಮೂಲಕ ದೃಷ್ಟಿದೋಷ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಸುಲಭವಾಗಿ ತಲುಪಿಸುವ ಇಂತಹ ಕಾರ್ಯಾಗಾರಗಳು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ್ದಾಗಿವೆ ಎಂದು ಹೇಳಿದರು. ಅಂಧ ವಿದ್ಯಾರ್ಥಿಗಳಿಗಾಗಿ ಪ್ರೊ.ಬಿಂದು ಪಾಟೀಲ್ ಅವರೇ ರಚಿಸಿರುವ “ಟೂತ್ ಟೀಚರ್” ಪುಸ್ತಕದ ಕುರಿತು ವಿವರಿಸಿದ ಅವರು, ಹಲ್ಲುಗಳ ಆರೋಗ್ಯ, ದೈನಂದಿನ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಂಧ ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಲಾದ “ಟೂತ್ ಟೀಚರ್” ಪುಸ್ತಕದ ಬ್ರೇಲ್ ಆವೃತ್ತಿ ಹಾಗೂ ಎಂ.ಪಿ.3 ಆಡಿಯೋ ಆವೃತ್ತಿಯನ್ನು ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಲೋಕಾರ್ಪಣೆಗೊಳಿಸಿದರು. ದೃಷ್ಟಿದೋಷ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಪುಸ್ತಕವನ್ನು ಸಿಯುಕೆ ಕೇಂದ್ರ ಗ್ರಂಥಾಲಯವು ಬ್ರೇಲ್ ಲಿಪಿಗೆ ಪರಿವರ್ತಿಸಿದ್ದು, ಜೊತೆಗೆ ಎಂ.ಪಿ.3 ಆಡಿಯೋ ರೂಪದಲ್ಲಿಯೂ ಸಿದ್ಧಪಡಿಸಲಾಗಿದೆ.
ಸಿಯುಕೆಯ ಕೇಂದ್ರ ಗ್ರಂಥಾಲಯದ ಮುಖ್ಯಸ್ಥ ಡಾ. ಪಿ. ಎಸ್. ಕಟ್ಟಿಮನಿ ಅವರು ಸ್ವಾಗತಿಸಿ ಕಾರ್ಯಾಗಾರದ ಉದ್ದೇಶ ಹಾಗೂ ಬ್ರೇಲ್ ಸಂಶೋಧನಾ ಕೇಂದ್ರದ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಜ್ಞಾನ ವಂದನಾ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ಅಧ್ಯಕ್ಷ ಅಚ್ಯುತ್ ನಾಯ್ಕ ಮಾತನಾಡಿ, ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಅಪರೂಪವಾಗಿರುವ ಬ್ರೇಲ್ ಸಂಪನ್ಮೂಲ ಕೇಂದ್ರವನ್ನು ಸಿಯುಕೆಯಲ್ಲಿ ಸ್ಥಾಪಿಸಿರುವುದು ದೃಷ್ಟಿದೋಷ ವಿದ್ಯಾರ್ಥಿಗಳ ಸಬಲೀಕರಣದ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು. ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹಾಗೂ ಡಾ. ಪಿ. ಎಸ್. ಕಟ್ಟಿಮನಿ ಅವರ ಈ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಾಗಾರದಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಜ್ಞಾನ ವಂದನಾ ತರಬೇತಿ ಕೇಂದ್ರದ 30ಕ್ಕೂ ಹೆಚ್ಚು ದೃಷ್ಟಿದೋಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗ್ರಂಥಾಲಯದ ನುರಿತ ಸಿಬ್ಬಂದಿಗಳು, ಸಿಯುಕೆಯ ಪ್ರಾಧ್ಯಾಪಕ ಡಾ. ಉದಯಕಿರಣ ಕೆ.ಟಿ., ಡಾ. ಜಯಂತ ಬರುವಾ ಸೇರಿದಂತೆ ಹಲವಾರು ಸಂಪನ್ಮೂಲ ವ್ಯಕ್ತಿಗಳು ಬ್ರೇಲ್ ಸಂಪನ್ಮೂಲ ಕೇಂದ್ರ, ಇ-ಡಿಜಿಟಲ್ ಗ್ರಂಥಾಲಯ ಸೇವೆಗಳು ಹಾಗೂ ಸಹಾಯಕ ತಂತ್ರಜ್ಞಾನಗಳ ಬಳಕೆಯ ಕುರಿತು ಪ್ರಾಯೋಗಿಕ ತರಬೇತಿ ಮತ್ತು ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ರಾಜಕುಮಾರ ಕಲ್ಯಾಣಿ ನಿರೂಪಿಸಿದರು. ಡಾ. ಗೋಪಾಲ ದೀಕ್ಷಿತ್ ವಂದನಾರ್ಪಣೆ ಸಲ್ಲಿಸಿದರು.ಕಾರ್ಯಕ್ರಮವು ವಂದೇ ಮಾತರಂ ಗೀತೆಯೊಂದಿಗೆ ಆರಂಭಗೊಂಡು ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಡಾ. ವಿಜಯಕುಮಾರ್, ಡಾ.ರಾಮಲಿಂಗಂ ಹಾಗೂ ಕೇಂದ್ರ ಗ್ರಂಥಾಲಯದ ಸಿಬ್ಬಂದಿಗಳಾದ ರಾಜೇಶ್ ದಾಸ್, ಬಸವರಾಜ ಯಾದವಾಡ, ನಿಂಗಣ್ಣ, ಪ್ರಕಾಶ್ ಎಸ್., ರಾಹುಲ್ ರಾಠೋಡ್, ಸಾಗರ ಕಡಬೆ, ಸತೀಶ್ ಕುಮಾರ್ ಮತ್ತು ಶಿವಕುಮಾರ್ ಉಪಸ್ಥಿತರಿದ್ದರು.






























