
ಲಕ್ಷೆ÷್ಮÃಶ್ವರ,ಆ.೨೫: ತಾಲೂಕಿನ ಗೊಜನೂರು ಗ್ರಾಮದ ಗ್ರಾಮದೇವಿ ದೇವಸ್ಥಾನದಲ್ಲಿ ಬಸವದಳ ಬಸವ ಕೇಂದ್ರ ಲಿಂಗಾಯತ ಪ್ರಗತಿಶೀಲ ಸಂಘ ಗದಗ್ ಬೆಟಗೇರಿ ಇವರ ಸಂಯುಕ್ತಾಕ್ಷರದಲ್ಲಿ ಪ್ರತಿವರ್ಷದಂತೆ ಶ್ರಾವಣ ಮಾಸದ ಅಂಗವಾಗಿ ವಚನ ಶ್ರಾವಣ ೨೦೨೬ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಶರಣರ ಬದುಕಿನ ಬಗ್ಗೆ ಅದರಲ್ಲೂ ವಿಶೇಷವಾಗಿ ಮಹಾ ಮಾನವತಾವಾದಿ ವಿಶ್ವಗುರು ಬಸವಣ್ಣನವರ ಕುರಿತು ಮಾತನಾಡಿದ ಪ್ರೊಫೆಸರ್ ಎಸ್ ಯು ಸಜ್ಜನ ಶೆಟ್ಟರ ಅವರುಬಸವಣ್ಣನವರು ೧೨ನೇ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿಯ ಕಹಳೆಯನ್ನು ಮೊಳಗಿಸಿದ್ದರು.
ಶರಣರು ಅನುಭವ ಚಿಂತನೆ ಬದುಕಿನ ಅನುಭವ ಮೌಲ್ಯ ಸತ್ಯಗಳು ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಅನುಭವ ಮಂಟಪದಲ್ಲಿ ಮೂಡಿ ಬಂದ ಅನುಭವಗಳೇ ವಚನಗಳಾಗಿ ಪ್ರತಿ ಮನೆ ಮನಗಳಿಗೆ ತಲುಪಿ ವಚನ ಸಾಹಿತ್ಯ ಇಂದು ಹೆಮ್ಮರವಾಗಿ ಬೆಳೆಯಲು ಕಾರಣವಾಗಿದೆ.
ರಾಜ ಪ್ರಭುತ್ವದ ಕಾಲದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಬಿತ್ತಿದ ಬಸವಣ್ಣನವರು ಸಮಾಜದಲ್ಲಿ ತುಳಿತಕ್ಕೊಳ್ಳಗಾದವರನ್ನು ಮೇಲೆಕ್ಕೆತ್ತಿ ಅವರಿಗೆ ಗೌರವದ ಬದುಕಿಗೆ ಅವಕಾಶವನ್ನು ಕಲ್ಪಿಸಿದ ಬಸವಣ್ಣನವರ ಕರುಣೆ ಸಾಮಾಜಿಕ ಕಳಕಳಿ ಸಮ ಸಮಾಜದ ಪರಿಕಲ್ಪನೆ ಸೂರ್ಯ ಚಂದ್ರ ಇರುವವರೆಗೂ ಶಾಶ್ವತ ಎಂದು ಹೇಳಿದರು.
ಇಂದಿನ ಮಕ್ಕಳಲ್ಲಿ ಶರಣರ ವಚನಗಳ ಬಗ್ಗೆ ಅವರ ಬದುಕು ಚಿಂತನೆ ಮಾನವೀಯ ಮೌಲ್ಯಗಳ ಬಗ್ಗೆ ತಿಳಿಸಿ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡಿ ಸುಂದರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಪ್ರತಿಜ್ಞೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಕಾಶ ಅಸುಂಡಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಕೆ ಕರಿಗೌಡರ ಶಿವನಗೌಡ ಪಾಟೀಲ ಶಿವರಾಜ್ ಗೌಡ ಎಂ ಬಿ ಲಿಂಗದಾಳ ಎನ್ಎಂ ಪವಾಡಿಗೌಡ್ರು ಶೇಖಣ್ಣ ಕವಳಿಕಾಯಿ ಪದ್ಮಾವತಿ ಹಂಜಗಿ ಗಂಗಮ್ಮ ಹೂಗಾರ ಶಂಕರಗೌಡ ಪಾಟೀಲ್ ಶೇಕಪ್ಪ ಸೊರಟೂರ ಹನುಮಂತಗೌಡ ದೊಡ್ಡ ಗೌಡ್ರ ಚೆನ್ನಪ್ಪ ಸಂಶಿ ಹನುಮಂತಪ್ಪ ಎಳವತ್ತಿ ಬಸವರಾಜ್ ದನದ ಮನಿ ಸೇರಿದಂತೆ ಅನೇಕರಿದರು.
ಅಧ್ಯಕ್ಷತೆಯನ್ನು ಚೆನ್ನವೀರಯ ಹಿರೇಮಠ ವಹಿಸಿದ್ದರು. ಬಸವರಾಜ್ ಸಂಶಿ ಚಂದ್ರಗೌಡ ದೊಡ್ಡ ಗೌಡ್ರ ಗೌರಕ್ಕ ಬಡಿಗಣ್ಣವರ ನಿರ್ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಕ್ಕಳು ವಿವಿಧ ವಚನಗಾರರ ವೇಷಭೂಷಣಗಳನ್ನು ಧರಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು .






























