Home ಜಿಲ್ಲೆ ಕಲಬುರಗಿ ನೃತ್ಯದಿಂದ ಮಕ್ಕಳಲ್ಲಿ ಸಂಸ್ಕಾರ ಬೆಳೆಸಲು ಸಾಧ್ಯ: ಡಾ.ಶಶಿಧರ ನರೇಂದ್ರ

ನೃತ್ಯದಿಂದ ಮಕ್ಕಳಲ್ಲಿ ಸಂಸ್ಕಾರ ಬೆಳೆಸಲು ಸಾಧ್ಯ: ಡಾ.ಶಶಿಧರ ನರೇಂದ್ರ

ಕಲಬುರಗಿ,ಆ.17- ಸಂಸ್ಕಾರ ಭಾರತಿ ಕಲಬುರಗಿ ಹಾಗೂ ನೂಪುರ ಸಂಸ್ಕøತಿ ನೃತ್ಯ ಮತ್ತು ಸಂಗೀತ ಸಂಸ್ಥೆ, ಕಲಬುರಗಿ ಇವರ ಸಹಯೋಗದಲ್ಲಿ ಗುರು ವಂದನಾ, ನಟರಾಜ ಪೂಜನ ಹಾಗೂ ಗೆಜ್ಜೆಪೂಜೆ ಕಾರ್ಯಕ್ರಮವು ನಗರದ ಮರಾಠಿ ಸಾಹಿತ್ಯ ಮಂಡಳದ ಆವರಣದಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತಿಯ ಕರ್ನಾಟಕ ಉತ್ತರ ಪ್ರಾಂತದ ಪ್ರಧಾನ ಕಾರ್ಯದರ್ಶಿ ಡಾ. ಶಶಿಧರ ನರೇಂದ್ರ ಅವರು ಮಾತನಾಡಿ, ನೃತ್ಯವು ಕೇವಲ ಮನರಂಜನೆಯ ಕಲೆಯಲ್ಲ; ಅದು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸುವ ಮಹತ್ವದ ಕಲಾಮಾಧ್ಯಮವಾಗಿದೆ ಎಂದು ಹೇಳಿದರು.
ನೃತ್ಯಾಭ್ಯಾಸದಿಂದ ಮಕ್ಕಳಲ್ಲಿ ಶಿಸ್ತು, ಏಕಾಗ್ರತೆ, ಸಮಯಪ್ರಜ್ಞೆ, ಗುರು-ಹಿರಿಯರ ಗೌರವ ಹಾಗೂ ಉತ್ತಮ ಸಂಸ್ಕಾರಗಳು ಬೆಳೆಸಲು ಸಾಧ್ಯ. ನೃತ್ಯ ಕಲಿಯುವ ಮಕ್ಕಳು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಜೀವನಮೌಲ್ಯಗಳನ್ನು ಅರಿತುಕೊಳ್ಳುವುದರ ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾರೆ ಎಂದು ಡಾ. ಶಶಿಧರ ನರೇಂದ್ರ ತಿಳಿಸಿದರು.
ಹಿರಿಯ ಸಂಗೀತ ಕಲಾವಿದೆ ಶಾರದಾ ಸಂಗೀತ ಕೇಂದ್ರದ ಅಧ್ಯಕ್ಷೆ ಸಂಗೀತ ಶಿಕ್ಷಕಿ ಸುನಂದಾ ಸಾಲವಾಡಗಿ ತಬಲಾ ವಾದಕ ರಾಘವೇಂದ್ರ ಕುಲಕರ್ಣಿ ಅವರ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರುಗಿತು. ಪ್ರಾಧ್ಯಾಪಕಿ ಸುನಂದಾ ಕುಲಕರ್ಣಿ, ಸುನಂದಾ ಸಾಲವಾಡಗಿ ಅವರಿಗೆ ಗುರುವಂದನಾ ನಿಮಿತ್ಯ ಸನ್ಮಾನಿಸಲಾಯಿತು.
ನೂಪುರ ಸಂಸ್ಕೃತಿ ನೃತ್ಯ ಮತ್ತು ಸಂಗೀತ ಸಂಸ್ಥೆಯ ಅಧ್ಯಕ್ಷರಾದ ವಿದೂಶಿ ಸೌಖ್ಯಾ ಕುಲಕರ್ಣಿ ಪ್ರವೀಣ ಕುಲಕರ್ಣಿ ಎಲ್ಲರನ್ನು ಸನ್ಮಾನಿಸಿದರು.
ಸರ್ವೋತ್ತಮ ಸತಾಳಕರ, ಲೀಲಾವತಿ ಕುಲಕರ್ಣಿ , ಹಿರಿಯ ಸಾಹಿತಿ ಸರ್ವೋತ್ತಮ ಸತಾಳಕರ, ಪತ್ರಕರ್ತ ನಾರಾಯಣ ಜೋಶಿ, ದತ್ತಾತ್ರೇಯ ಸಬನವೀಸ್, ಸುನಂದಾ ಸಬನವೀಸ, ವರಲಕ್ಷ್ಮಿ ಕುಲಕರ್ಣಿ , ಪಿಡ್ಡಪ್ಪಾ ಜಾಲಗಾರ , ಪ್ರವೀಣ ಕುಲರ್ಣಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಗುರುಗಳಿಗೆ ಗೌರವ ಸನ್ಮಾನ. ನೃತ್ಯ ವಿದ್ಯಾರ್ಥಿಗಳ ಗೆಜ್ಜೆಪೂಜೆ ಹಾಗೂ ನೃತ್ಯ ಪ್ರದರ್ಶನ, ಸಂಗೀತ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಿದ್ದವು.. ಎಂದು ಸಂಸ್ಕಾರ ಭಾರತಿ ಪ್ರಧಾನ ಕಾರ್ಯದರ್ಶಿ ಡಾ.ಅಂಬುಜಾ ಮಳಖೇಡಕರ ತಿಳಿಸಿದರು.
ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಗುಡಲಕ್ ಹೋಟೇಲಿನ ಶ್ರೀ ಜುಗಲ ಗಾಂಧಿ, ಪಿಡ್ಡಪ್ಪ ಜಾಲಗಾರ ಪಾಲಕರಿಗೂ ವಿದ್ಯಾರ್ಥಿಗಳಿಗೂ, ಮರಾಠಿ ಸಾಹಿತ್ಯ ಮಂಡಳ ಹಾಗೂ ಪ್ರತ್ಯಕ್ಷ ,ಪರೋಕ್ಷವಾಗಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲ ಸದಸ್ಯರಿಗೂ ವಿದೂಷಿ ಸೌಖ್ಯ ಹಾಗೂ ಡಾ ಅಂಬುಜಾ ಅವರು ವಿಶೇಷ ಧನ್ಯವಾದ ತಿಳಿಸಿದರು.