
ಕಲಬುರಗಿ,ಆ.17-ಬ್ರಿಟಿಷರ ವಿರುದ್ಧ ದೀರ್ಘಕಾಲ ಹೋರಾಟ ಮಾಡಿದ ಗಾಂಧೀಜಿರವರು ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟರು. ಹಲವಾರು ಹೋರಾಟಗಾರರು ಈ ದೇಶದ ಸ್ವಾತಂತ್ರ್ಯಗೋಸ್ಕರ ತ್ಯಾಗ ಬಲಿದಾನ ಮಾಡಿದರು. ಅವರೆಲ್ಲರ ಪರಿಶ್ರಮದಿಂದ ಇಂದು ನಾವು ಸ್ವತಂತ್ರ ಭಾರತದಲ್ಲಿ ಬದುಕುತ್ತಿದ್ದೇವೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಜ್ಞಾನ ಸಂಪಾದಿಸಿಕೊಂಡು ಸದೃಢ ಸಮಾಜ ಮತ್ತು ಸಮೃದ್ಧ ದೇಶ ಕಟ್ಟಲು ಶ್ರಮಿಸಬೇಕೆಂದು ಪ್ರಾಂಶುಪಾಲರಾದ ಸುಜಾತಾ ಎಸ್. ಬಿರಾದಾರ ಹೇಳಿದರು.
ನಗರದ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಿರಂತರವಾಗಿ ಅಭ್ಯಾಸ ಮಾಡಿ ಸುಂದರ ಸಮಾಜ ನಿರ್ಮಿಸಲು ಶ್ರಮಿಸಬೇಕೆಂದರು. ನಂತರ ಎನ್‍ಎಸ್‍ಎಸ್ ವಿಭಾಗೀಯ ಅಧಿಕಾರಿ ಡಾ.ಚಂದ್ರಶೇಖರ ದೊಡ್ಡಮನಿ ಮಾತನಾಡಿ, ಮಹಾತ್ಮ ಗಾಂಧೀಜಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಭಾರತದ ಎರಡು ಕಣ್ಣುಗಳು ಇದ್ದಂತೆ. ಗಾಂಧೀಜಿ ತಮ್ಮ ಸರಳ ಜೀವನ, ಪ್ರಾಮಾಣಿಕತೆ ಮತ್ತು ಅಹಿಂಸೆಯ ಮೂಲಕ ಭಾರತವನ್ನು ಬ್ರಿಟಿಷರಿಂದ ವಿನೋಚನೆಗೊಳಿಸಿದರು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭಾರತದಲ್ಲಿನ ವರ್ಣಾಶ್ರಮ ಪದ್ಧತಿ ಮತ್ತು ಜಾತಿ ತಾರತಮ್ಯ ತೊಡೆದು ಹಾಕಲು ಸಂವಿಧಾನಾತ್ಮಕ ಹಕ್ಕುಗಳನ್ನು ನೀಡಿದರು. ಸ್ತ್ರೀಯರಿಗೆ ಸಂವಿಧಾನಿಕ ಹಕ್ಕು ಹಾಗೂ ಅಧಿಕಾರಿಗಳನ್ನು ದೊರಕಿಸಿಕೊಟ್ಟು ಎಲ್ಲಾ ಭಾರತೀಯರು ಸಮಾನತೆ ಮತ್ತು ಸಹಬಾಳ್ವೆಯಿಂದ ಬದುಕಲು ಸಾಂವಿಧಾನಿಕ ರಕ್ಷಣೆ ನೀಡಿದರು. ಸ್ವಾತಂತ್ರ್ಯ ದಿನದಂದೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನಿಸಿದ್ದು, ಬ್ರಿಟಿಷರೊಂದಿಗೆ ರಾಜಿಯಿಲ್ಲದ ಅವರ ಹೋರಾಟ, ದೇಶಪ್ರೇಮ ಮತ್ತು ಸಾಹಸ ಪ್ರವೃತ್ತಿ ಇಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸ್ವಾತಂತ್ರೋತ್ಸವ ಭಾಷಣ ಮತ್ತು ಗೀತೆಗಳನ್ನು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಎನ್‍ಎಸ್‍ಎಸ್ ನೋಡಲ್ ಅಧಿಕಾರಿ ಪಾಂಡು ಎಲ್.ರಾಠೋಡ್, ಕಾಲೇಜಿನ ಎನ್‍ಎಸ್‍ಎಸ್ ಅಧಿಕಾರಿ ಸಿದ್ದಲಿಂಗಪ್ಪ ಪೂಜಾರಿ, ಉಪನ್ಯಾಸಕರುಗಳಾದ ಬಲರಾಮ ಚವ್ಹಾಣ್ , ಶ್ರೀಶೈಲ್ ಖುರ್ದ, ಡಾ.ಶೀಲಾವತಿ ವಾಡೇಕರ್, ರೇಣುಕಾ ಚಿಕ್ಕಮೇಟಿ, ವಿಜಯಲಕ್ಷ್ಮಿ ರೆಡ್ಡಿ, ರೋಹಿಣಿ ಕೆ. ಎಸ್, ನಿರ್ಮಲ, ಶಶಿಧರ್ ಭೂಸನೂರ್, ಡಾ. ಶಿವಪ್ಪ ಹೆಚ್, ಶ್ರೀನಿವಾಸ್, ಮಹಿಬೂಬ್, ರಾಜೇಶ್ ಕೆಜೆ, ನೇಸರ್ ಬೀಳಿಗಿಮಠ, ಲಕ್ಷ್ಮಿಕಾಂತ್ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






























