
ರಾಮನಗರ.ಆ17: ಬೆಂಗಳೂರು ದಕ್ಷಿಣ ತಾಲೂಕಿನ ‘ಕನಕಪುರ ರಸ್ತೆಯ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಆಶ್ರಮದಿಂದ ದಲಿತರ ಭೂಮಿ ಕಬಳಿಕೆ, ಕೆರೆ-ರಾಜಕಾಲುವೆ ಒತ್ತುವರಿ ಆರೋಪಿಸಿ ಸಮತಾ ಸೈನಿಕ ದಳ ಹಾಗೂ ದಲಿತ ವತಿಯಿಂದ ”ವಿಧಾನಸೌಧ ಚಲೋ” ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸಂಘಟನೆಗಳ ಒಕ್ಕೂಟದ ಕಳೆದ 30 ದಿನಗಳಿಂದ ಆರ್ಟ್ ಆಫ್ ಲಿವಿಂಗ್ ಆಶ್ರಮದ ಎದುರು ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಈ ಹೋರಾಟದ ಮುಂದುವರೆದ ಭಾಗವಾಗಿ ಈ ಪಾದಯಾತ್ರೆಯನ್ನು ಆಯೋಜಿಸಲಾಗಿತ್ತು
ಇಂದು ಬೆಳಿಗ್ಗೆ 10:00 ಗಂಟೆಗೆ ಆರ್ಟ್ ಆಫ್ ಲಿವಿಂಗ್ ಆಶ್ರಮ ಗೇಟ್ ನಂ.5. ಕನಕಪುರ ಮುಖ್ಯ ರಸ್ತೆಲಕ್ಷ್ಮಿಪುರ, ಕುಪ್ಪಾರೆಡ್ಡಿ ಕೆರೆ. ಸಿಲ್ಕ್ ಇನ್ಸಿಟ್ಯೂಟ್, ತಲ್ಪಟ್ಟಪುರ, ಬನಶಂಕರಿ, ಯಡಿಯೂರು, ಬಸವನಗುಡಿ, ಸಿಟಿ ಮಾರ್ಕೆಟ್, ಟೌನ್ ಹಾಲ್, ಕಾಪೆರ್Çರೇಷನ್ ವೃತ್ತದ ಮೂಲಕ ವಿಧಾನಸೌಧ ಕಡೆಗೆ ಬೃಹತ್ ಪಾದಾಯಾತ್ರೆ ನಡೆಸಲಾಯಿತು.
ಐ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಗಳಿಂದ ಆಗಿರುವ ಕೆರೆ ಒತ್ತುವರಿ, ರಾಜಕಾಲುವೆಗಳ ಒತ್ತುವರಿ, ಅನಧಿಕೃತ ಕಟ್ಟಡಗಳ ನಿರ್ಮಾಣ, ಗೋಮಾಳ ಹಾಗೂ ಇತರೆ ಸರ್ಕಾರಿ ಜಾಗಗಳ ಒತ್ತುವರಿಯನ್ನು ತಕ್ಷಣ ತೆರವುಗೊಳಿಸಬೇಕು. ಕಬಳಿಕೆ ಮಾಡಿರುವ ದಲಿತರ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆದು, ಅರ್ಹ ಫಲಾನುಭವಿಗಳಿಗೆ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.ಈ ಪಾದಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ರೈತರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ. ‘ದಲಿತರ ಭೂಮಿ ದಲಿತರಿಗೆ, ಒತ್ತುವರಿ ತೆರವುಗೊಳಿಸಿ’ ಎಂಬ ಘೋಷಣೆಗಳೊಂದಿಗೆ ಸಮತಾ ಸೈನಿಕ ದಳದ ರಾಜ್ಯ ಸಂಘಟನಾ ಕಾರ್ಯದರ್ಶಿ ಜಿ.ಕೆ. ಗೋಪಾಲ್ ನೇತೃತ್ವದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.































