Home ಜಿಲ್ಲೆ ಬೌದ್ಧಿಕ ಸ್ವತ್ತು ನಮ್ಮ ಬಂಡವಾಳವಾಗಬೇಕು: ಕೆ.ಎ ಉಪ್ಪಾರ

ಬೌದ್ಧಿಕ ಸ್ವತ್ತು ನಮ್ಮ ಬಂಡವಾಳವಾಗಬೇಕು: ಕೆ.ಎ ಉಪ್ಪಾರ

ಕೊಲ್ಹಾರ:ಜು.19: ಹೊಸ ಜ್ಞಾನದ ಶಕೆಯನ್ನೇ ಆರಂಭಿಸಿದ ಸರಕಾರ ಹಾಗೂ ಇಲಾಖೆಯ ಕಾರ್ಯಕ್ರಮಗಳನ್ನು ಉಪಯೋಗಿಸಿಕೊಂಡು ಮುಂದಿನ ದಿನಗಳಲ್ಲಿ ಬೌದ್ಧಿಕ ಸ್ವತ್ತು ನಮ್ಮ ಬಂಡವಾಳವನ್ನಾಗಿ ಮಾಡಿಕೊಳ್ಳುವತ್ತ ಗಮನಹರಿಸಬೇಕು. ಎಂದು ಪಿಯು ಡಿಡಿ, ಕೆ ಎ ಉಪ್ಪಾರ ಹೇಳಿದರು.

ಅವರು ಶನಿವಾರ ಸರಕಾರಿ ಪದವಿ ಪೂರ್ವ ಕಾಲೇಜು ಕೂಡಗಿಯ 2026_27 ನೇ ಸಾಲಿನ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜ್ಞಾನ ಪ್ರಸಾರ ಮಾಡುತ್ತಿರುವ ಈ ಸಂಸ್ಥೆಯ ಹೆಸರನ್ನು ರಾಜ್ಯಮಟ್ಟಕ್ಕೆ ಮುಟ್ಟಿಸುವ ಜವಾಬ್ದಾರಿ ನಿಮ್ಮದಾಗಬೇಕು ಇಲಾಖೆ ಕೈಗೊಂಡ ಶಿಕ್ಷಣದಲ್ಲಿನ ಹೊಸ ಪದ್ದತಿಗಳನ್ನು ಅಳವಡಿಸಿಕೊಂಡು ಬೆಳೆಯಬೇಕು ಎಂದು ಕರೆ ಕೊಟ್ಟರು.
ಮಲಘಾಣ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಸವರಾಜ ಜಾಲವಾದಿ ಮಾತನಾಡಿ, ಪಠ್ಯದ ಹಾಗೆ ಪಠ್ಯೇತರ ಚಟುವಟಿಕೆಗಳ ಕಡೆಗೂ ಗಮನ ಇರಲಿ. ಕನಸುಗಳನ್ನು ಬೆಂಬತ್ತುವ ಧೈರ್ಯವಿದ್ದರೆ ನಿಮ್ಮ ಎಲ್ಲ ಕನಸುಗಳು ನನಸಾಗುತ್ತವೆ ಜೀವನದಲ್ಲಿ ಎದುರಾಗುವ ಸಂಕಷ್ಟಗಳು ಹಾಗೂ ಪ್ರತಿಕೂಲ ಪರಿಸ್ಥಿತಿಗಳು ನಿಮ್ಮನ್ನು ಗಟ್ಟಿಗೊಳಿಸುತ್ತವೆ. ಪುಸ್ತಕ ಓದು ನಿಮ್ಮನ್ನು ಅತ್ಯಂತ ಎತ್ತರದ ಸ್ಥಾನಕ್ಕೆ ಕೊಂಡುಯ್ಯತ್ತದೆ ಅದಕ್ಕೆ ಧೈರ್ಯ ಬೇಕು ಸ್ವಲ್ಪಮಟ್ಟಿನ ಹಠ ಬೇಕು ಎಂದರು.

ಸರಕಾರಿ ಪ್ರೌಢಶಾಲೆ ಬಸವನಬಾಗೇವಾಡಿಯ ಸಹ ಶಿಕ್ಷಕ ಅಶೋಕ ಹಂಚಲಿ ಮಾತನಾಡಿ ಯಾವುದೇ ಒಂದು ಕೆಲಸವನ್ನು ಪ್ರಾರಂಭ ಮಾಡುವುದೆಂದರೆ ಮಾತನಾಡುವುದನ್ನು ಬಿಟ್ಟು ಕೆಲಸದಲ್ಲಿ ತೊಡಗಿಕೊಳ್ಳುವುದು ನೀವು ಕನಸು ಕಾಣುತ್ತೀರಾದರೆ ಕಂಡ ಕನಸನ್ನು ಸಾಧಿಸುತ್ತೀರಿ ಎಂಬುದನ್ನು ನಂಬಬೇಕು ನೀವು ಬೆಳೆಯುವ ಮಕ್ಕಳು ಜವಾಬ್ದಾರಿ ಪ್ರಜ್ಞೆಯನ್ನು ರೂಡಿಸಿಕೊಳ್ಳಬೇಕು. ಪುಸ್ತಕ ಓದುವುದು, ಸಂಗೀತ ಕೇಳುವುದು, ಆಟ ಆಡುವುದು ಆದರ್ಶ ವಿದ್ಯಾರ್ಥಿಗಳ ಲಕ್ಷಣ ಎಂದು ಕರೆಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಕೆ ಜಿ ಲಮಾಣಿ ಜೀವನದಲ್ಲಿ ನಿಷ್ಠೆಯಿಂದ ಅರ್ಪಣಾ ಮನೋಭಾವದಿಂದ ಇರಲಿಕ್ಕೆ ಇಷ್ಟ ಪಡಬೇಕು ಇವತ್ತು ಕೆಲವೇ ಕೆಲವು ಜನ ಪುಸ್ತಕ ಓದುತ್ತಾರೆ ಅಂತರ್ಜಾಲ ಜಾಲಾಡುವವರೆ ಹೆಚ್ಚಾಗಿದ್ದಾರೆ ಟಿ.ವಿ ಮತ್ತು ಅಂತರ್ಜಾಲಗಳು ಮನುಷ್ಯರನ್ನು ತುಂಬಾ ವೇಗವಾಗಿ ಚಿಂತಿಸಲಿಕ್ಕೆ ಪ್ರೇರೇಪಿಸಿವೆಯಾದರೂ ಮನುಷ್ಯನನ್ನು ಬಲಿ ಪಡೆಯುತ್ತಿರುವುದು ವಿಪರ್ಯಾಸದ ಸಂಗತಿ ವಿದ್ಯಾರ್ಥಿಗಳು ಆ ಗೋಜಿಗೆ ಹೋಗದೇ ಪುಸ್ತಕದ ಮೊರೆ ಹೋಗಿ ಎಂದರು.

ವೇದಿಕೆಯ ಮೇಲೆ ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಹನುಮಂತ ಮಸೂತಿ ಸರಕಾರಿ ಪಿಯು ಕಾಲೇಜುಗಳ ಕೋಲಾರ ತಾಲೂಕಿನ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಬಿ ದೇಸಾಯಿ ಉಪ ಪ್ರಾಂಶುಪಾಲ ಎ.ಡಿ ಸಾಲೋಟಗಿ, ರಕ್ಕಸಗಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾರಾಯಣಕರ್ ಹಾಜರಿದ್ದರು ಕೆಪಿಎಸ್ ಕೂಡಗಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಅರವಿಂದ್ ಗಂಗೂರ್ ಕೆಜಿಎಫ್ ಕೂಡಗಿಯ ಮುಖ್ಯ ಗುರುಮಾತೆ ನಿರ್ಮಲ ನಂದಿಕೋಲಮಠ ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಕರಾದ ಸುರೇಶ್ ಆಲೂರು ಶ್ರೀಮತಿ ಆರ್ ಕೆ ಮಕಾನದಾರ್, ಎಸ್. ಬಿ.ಬಿರಾದಾರ, ಬಿಬಿ ಮುತ್ತತ್ತಿ ಹಾಗೂ ಕಾಲೇಜು ಸಿಬ್ಬಂದಿ ಹಾಜರಿದ್ದರು. ವ್ಹಿ.ಜಿ ಕಿವುಡು ಜಾಡರ್ ಕಾರ್ಯಕ್ರಮ ನಿರ್ವಹಿಸಿದರು ವಿದ್ಯಾರ್ಥಿನಿಯರು ಸ್ವಾಗತಿ ಗೀತೆ ಹಾಡಿದರು ಎಸ್ ಬಿ ದೇಸಾಯಿ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಮತಿ ಬಾಗೇವಾಡಿ ವಂದಿಸಿದರು.