Home ಜಿಲ್ಲೆ ಕಲಬುರಗಿ ಜೂಜಾಟ:ನಾಲ್ವರ ಬಂಧನ

ಜೂಜಾಟ:ನಾಲ್ವರ ಬಂಧನ

ಕಲಬುರಗಿ,ಜು.11-ಸಬ್-ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಉದನೂರ ಸೀಮಾಂತರದ ಖುಲ್ಲಾ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್-ಅರ್ಬನ್ ಪೊಲೀಸ್ ಠಾಣೆ ಪಿಎಸ್‍ಐ ಶಶಿಕಲಾ, ಸಿಬ್ಬಂದಿಗಳಾದ ಪುಂಡಲಿಕ, ಶಶಿಕಾಂತ, ಗುಂಡೇರಾಯ ಅವರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ.
ಮಹ್ಮದ್ ಸೋಹೆಲ್, ಸಂದೇಸಾಬ ಉಂಬಾಳೆ, ರಾಹುಲ್ ರಾಠೋಡ್ ಮತ್ತು ಬಸವರಾಜ ಎಂಬುವವರನ್ನು ಬಂಧಿಸಿ 6,700 ರೂ.ನಗದು ಜಪ್ತಿ ಮಾಡಿದ್ದಾರೆ. ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.