Home ಜಿಲ್ಲೆ ಕಲಬುರಗಿ ಒಂದೇ ವಾರದಲ್ಲಿ ಎರಡು ಕಡೆ ಕಳ್ಳತನ: ಕಿರಾಣಿ ಅಂಗಡಿ ಮತ್ತು ಶಾಲೆಯಲ್ಲಿ ಕಳ್ಳರ ಕೈಚಳಕ

ಒಂದೇ ವಾರದಲ್ಲಿ ಎರಡು ಕಡೆ ಕಳ್ಳತನ: ಕಿರಾಣಿ ಅಂಗಡಿ ಮತ್ತು ಶಾಲೆಯಲ್ಲಿ ಕಳ್ಳರ ಕೈಚಳಕ

ಸೇಡಂ, ಜು, 11: ತಾಲೂಕಿನ ಮಳಖೇಡ ನಗರದ ಹೊರವಲಯದ (ತೋಟ್ನಳ್ಳಿ ರಸ್ತೆ) ಎಪಿಎಂಸಿ ಹಿಂದುಗಡೆ ಕಳ್ಳರ ಹಾವಳಿ ಮಿತಿಮೀರಿದ್ದು, ಒಂದೇ ವಾರದಲ್ಲಿ ಕಿರಾಣಿ ಅಂಗಡಿ ಹಾಗೂ ಚಿಗೂರ ಶಾಲೆಯಲ್ಲಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಈ ಸರಣಿ ಕಳ್ಳತನಗಳಿಂದಾಗಿ ಸಾರ್ವಜನಿಕರು ಹಾಗೂ ವ್ಯಾಪಾರಿಗಳು ತೀವ್ರ ಆತಂಕಗೊಂಡಿದ್ದು,ಪೆÇಲೀಸ್ ಇಲಾಖೆ ಅಧಿಕಾರಿಗಳು ತಕ್ಷಣ ಕಳ್ಳರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಪಿಎಸ್ ಐ ಶರಣಪ್ಪ ಜಾಕ್ನಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬಹುಬೇಗ ಕಳ್ಳರನ್ನು ಬಂಧಿಸಲಾಗುವುದು ವ್ಯಾಪಾರಸ್ಥರಿಗೆ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.