
ನವದೆಹಲಿ:ಜು.೯-ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದ ನೀಟ್ ಪರೀಕ್ಷಾ ಅಕ್ರಮದ ವಿವಾದದ ಬೆನ್ನಲ್ಲೇ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ನಡೆಸುವ ಯುಜಿಸಿ-ನೆಟ್ ಜೂನ್ ೨೦೨೬) ಪರೀಕ್ಷೆಯೂ ಸಹ ಮತ್ತೊಂದು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಸುಳಿಗೆ ಸಿಲುಕಿದೆ.
ಯುಜಿಸಿ-ನೆಟ್‌ನ ಸಮಾಜಶಾಸ್ತ್ರ ವಿಷಯದ ಪರೀಕ್ಷೆಗೂ ಮುನ್ನವೇ ಅದಕ್ಕೆ ಸಂಬಂಧಿಸಿದ ೧೦೦ ಪುಟಗಳ ಪಿಡಿಎಫ್ ದಾಖಲೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು ಎನ್ನಲಾಗಿದ್ದು, ಇದೀಗ ಕೇಂದ್ರ ಶಿಕ್ಷಣ ಸಚಿವಾಲಯವು ಇದರ ಆಳವಾದ ತನಿಖೆಗೆ ಎನ್‌ಟಿಎಗೆ ಸೂಚನೆ ನೀಡಿದೆ. ಮೂಲಗಳ ಪ್ರಕಾರ, ಪರೀಕ್ಷೆಗೂ ಮುನ್ನ ಬಹಿರಂಗವಾಗಿದ್ದ ಈ ಪಿಡಿಎಫ್‌ನಲ್ಲಿದ್ದ ಸುಮಾರು ೯೦ ಪ್ರಶ್ನೆಗಳು, ಪರೀಕ್ಷೆಯ ಅಸಲಿ ಪ್ರಶ್ನೆ ಪತ್ರಿಕೆಗೆ ತದ್ರೂಪವಾಗಿ ಹೊಂದಿಕೆಯಾಗಿವೆ ಎಂದು ಹೇಳಲಾಗಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ನೀಟ್ ಪತ್ರಿಕೆ ಸೋರಿಕೆಯಾದ ಕೆಲವೇ ವಾರಗಳಲ್ಲಿ ಈಗ ಯುಜಿಸಿ-ನೆಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯೂ ಸೋರಿಕೆಯಾಗಿರುವುದು ಅತ್ಯಂತ ಆಘಾತಕಾರಿ. ಎನ್‌ಟಿಎ ಬಳಿ ಮಾತ್ರ ಇರಬೇಕಾಗಿದ್ದ ಪ್ರಶ್ನೆ ಪತ್ರಿಕೆ ಸಿದ್ಧತೆಯ ರಹಸ್ಯ ಪಿಡಿಎಫ್ ಪರೀಕ್ಷೆಗೆ ಮುಂಚಿತವಾಗಿಯೇ ಹೊರಬಂದಿದೆ” ಎಂದು ಆರೋಪಿಸಿದ್ದಾರೆ.
ಬಿಹಾರ, ಉತ್ತರ ಪ್ರದೇಶ, ಹರಿಯಾಣ, ದೆಹಲಿ ಮತ್ತು ರಾಜಸ್ಥಾನ ಸೇರಿದಂತೆ ಐದು ರಾಜ್ಯಗಳಲ್ಲಿ ಈ ಪ್ರಶ್ನೆ ಪತ್ರಿಕೆಯನ್ನು ತಲಾ ೨.೨೫ ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ ಎಂದು ರಾಹುಲ್ ದೂರಿದ್ದಾರೆ. ಇದೇ ಜಾಲವು ಮುಂಬರುವ ಸಿಎಸ್‌ಐಆರ್ -ನೆಟ್ ಅSIಖ-ಓಇಖಿ ಊಖಿಇಖಿ ಪರೀಕ್ಷೆಗಳ ಪತ್ರಿಕೆಗಳನ್ನೂ ಒದಗಿಸುವುದಾಗಿ ಭರವಸೆ ನೀಡಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಕೇವಲ ಪತ್ರಿಕೆ ಸೋರಿಕೆ ಆರೋಪ ಮಾತ್ರವಲ್ಲದೆ, ಈ ಬಾರಿಯ ಯುಜಿಸಿ-ನೆಟ್ ಸಮಾಜಶಾಸ್ತ್ರ ಪತ್ರಿಕೆಯಲ್ಲಿ ಹಲವಾರು ಕಾಗುಣಿತ ದೋಷಗಳು, ಪ್ರಮುಖ ಚಿಂತಕರ ಹೆಸರುಗಳ ವಿಕೃತ ರೂಪ ಹಾಗೂ ಕಳಪೆ ಹಿಂದಿ ಭಾಷಾಂತರಗಳಿದ್ದವು ಎಂದು ಪರೀಕ್ಷೆ ಬರೆದ ಅಭ್ಯರ್ಥಿಗಳು ದೂರಿದ್ದಾರೆ. ಇದು ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಎನ್‌ಟಿಎ ಮಂಡಳಿಯ ಗುಣಮಟ್ಟ ಮತ್ತು ಬೇಜವಾಬ್ದಾರಿತನವನ್ನು ಎತ್ತಿ ತೋರಿಸು
ಬಾಕ್ಸ್
- ಪರೀಕ್ಷೆಗೂ ಮುನ್ನವೇ ೧೦೦ ಪುಟಗಳ ಪಿಡಿಎಫ್ ಹರಿದಾಡಿದ್ದಾಗಿ ಗಂಭೀರ ಆರೋಪ
- ೨.೨೫ ಲಕ್ಷಕ್ಕೆ ಮಾರಾಟವಾಗಿದೆಯೇ ನೆಟ್ ಪ್ರಶ್ನೆ ಪತ್ರಿಕೆ
- ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ






























