
ಕಲಬುರಗಿ,ಜೂ.30-ಇಲ್ಲಿಗೆ ಸಮೀಪದ ಖಾಜಾ ಕೋಟನೂರ, ಶ್ರೀನಿವಾಸ ಸರಡಗಿ ರೋಡಿನ ಪಕ್ಕದ ಭೀಮಾಶಂಕರ ಬಿರಾದಾರ ಅವರ ಹೊಲದ ಹತ್ತಿರವಿರುವ ಸಾರ್ವಜನಿಕ ರಸ್ತೆ ಪಕ್ಕದ ಖುಲ್ಲಾ ಜಾಗದಲ್ಲಿ ಇಸ್ಪೀಟ್ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಪಿಐ ಚಂದ್ರಶೇಖರ, ಸಿಬ್ಬಂದಿಗಳಾದ ಈರಣ್ಣ, ಬೊಗೇಶ್ ಅವರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದು, ನಾಲ್ವರು ಪರಾರಿಯಾಗಿದ್ದಾರೆ.
ಭೀಮಾಶಂಕರ ಬಿರಾದಾರ, ಅಣವೀರಪ್ಪ ಪೂಜಾರಿ ಎಂಬುವವರನ್ನು ಬಂಧಿಸಿ 4920 ರೂ.ನಗದು, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ಭೀಮಾಶಂಕರ ಮಡಿವಾಳ, ಗುಂಡಪ್ಪ ತಳವಾರ, ಶರಣು ಕಾಳನೂರ, ಶರಣಬಸಪ್ಪ ಉಜಳಂಬಿ ಎಂಬುವವರು ಪರಾರಿಯಾಗಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























