Home ಜಿಲ್ಲೆ ಕಲಬುರಗಿ ಏಳೂವರೆ ದಶಕಗಳ ಬಳಿಕ ಹೆಗ್ಗಿನಾಳ ಗ್ರಾಮಕ್ಕೆ ಸರ್ಕಾರಿ ಬಸ್ ಸೌಲಭ್ಯ

ಏಳೂವರೆ ದಶಕಗಳ ಬಳಿಕ ಹೆಗ್ಗಿನಾಳ ಗ್ರಾಮಕ್ಕೆ ಸರ್ಕಾರಿ ಬಸ್ ಸೌಲಭ್ಯ

ಜೇವರಗಿ,ಜೂ 30: ಸ್ವಾತಂತ್ರ್ಯ ಲಭಿಸಿ ಏಳೂವರೆ ದಶಕ ಕಳೆದರೂ ತಾಲೂಕಿನ ಹೆಗ್ಗಿನಾಳ ಗ್ರಾಮಕ್ಕೆ ಸರ್ಕಾರಿ ಬಸ್ ವ್ಯವಸ್ಥೆ ಇಲ್ಲದೆ ಜನ ಪರದಾಡುತ್ತಿದ್ದರು. ಹೆಗ್ಗಿನಾಳ ಗ್ರಾಮಕ್ಕೆ ಮೊಹರಂ ದಿನ ನೂತನ ಬಸ್ ಕಲ್ಪಿಸಲಾಗಿದೆ. ಗ್ರಾಮಸ್ಥರು ಅಂತೂ ಇಂತೂ ನಮ್ಮೂರಿಗೂ ಬಸ್ ಬಂತು ಎಂದು ಹರ್ಷ ವ್ಯಕ್ತಪಡಿಸಿದರು.ಆಗೊಮ್ಮೆ, ಈಗೊಮ್ಮೆ ಹೊರಡುವ ಟಂಟಂ ಮತ್ತಿತರ ಖಾಸಗಿ ವಾಹನವನ್ನೇ ಗ್ರಾಮಸ್ಥರು ಅವಲಂಬಿಸಿದ್ದರು. ಈಗ ಬಸ್ ಸೌಲಭ್ಯ ಗ್ರಾಮಸ್ಥರಲ್ಲಿ ಸಂತಸಇಮ್ಮಡಿಗೊಳಿಸಿದೆ.
ಮಹಿಳೆಯರು, ಮಕ್ಕಳು, ವೃದ್ಧರು, ರೋಗಿಗಳಿಗೆ, ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಹೆಚ್ಚು ಅನುಕೂಲವಾಗಿದೆ. ಇಲಾಖೆ ವತಿಯಿಂದ ರಸ್ತೆ ವಿಸ್ತರಣೆ ಜೊತೆಗೆ ರಸ್ತೆ ಡಾಂಬರೀಕರಣ ಮಾಡಿದ ಬಳಿಕ ಬಸ್ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ ಎಂದು ಗ್ರಾಮಸ್ತರು ತಿಳಿಸಿದರು. ಗ್ರಾಮಸ್ಥರು ಬಸ್ ಮಾವಿನ ತೋರಣ ಕಟ್ಟಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಚಾಲಕ ಮತ್ತು ನಿರ್ವಾಹಕರಿಗೆ ಸನ್ಮಾನಿಸಿದರು.ಗ್ರಾಮದ ಪ್ರಮುಖರಾದ ಯಮುನಪ್ಪ ನಾಯ್ಕೋಡಿ, ಅರವಿಂದ ಪಾಟೀಲ, ಸಿದ್ದಪ್ಪ ಭಂಡಾರಿ, ನಾಗಪ್ಪಸರಡಗಿ, ಮುತ್ತಪ್ಪ ಹಳ್ಳಿ, ಶಿವಕುಮಾರ ಹುಗ್ಗಿ, ರವಿ, ಸಾಯಬಣ್ಣ, ನಿಂಗಪ್ಪ ನಾಯ್ಕೋಡಿ, ದೇವಿಂದ್ರ ಹುಗ್ಗಿ, ಬಾಬುರಾಯಗೌಡ, ಶಂಭು, ಮುತ್ತಪ್ಪ ಹರನೂರ, ರಾಮು ಗೌಂಡಿ, ದೇವಪ್ಪ,ಜಗು ಬಡಿಗೇರ, ಮಲ್ಲಪ್ಪ, ಮಾಳಪ್ಪ, ಬನ್ನೆಪ್ಪ, ಮಲ್ಕನಗೌಡ ಪಾಟೀಲ, ಮಹಾದೇವಪ್ಪ, ಸಂಜು, ಭೀಮಣ್ಣ ಹಳ್ಳಿ, ಹುಲಿಗಪ್ಪ, ತಿಪ್ಪಣ್ಣ ಸೇರಿದಂತೆ ಗ್ರಾಮಸ್ಥರು ಇದ್ದರು