
ಜೇವರಗಿ,ಜೂ 30: ಮುಂಗಾರು ಮಳೆಯ ಕಣ್ಣುಮುಚ್ಚಾಲೆ ನಡುವೆಯೂ ಈ ಬಾರಿ ತಾಲ್ಲೂಕಿನಲ್ಲಿ ಸಡಗರ ಸಂಭ್ರಮದಿಂದ ರೈತರು ತಮ್ಮ ಜಾನುವಾರುಗಳಿಗೆ ಶೃಂಗಾರ ಮಾಡಿ, ಗ್ರಾಮದ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ಮುಖಾಂತರ ಕಾರಹುಣ್ಣಿಮೆ ಹಬ್ಬವನ್ನು ಆಚರಿಸಿ ಖುಷಿಪಟ್ಟರು.
ಕಾರ ಹುಣ್ಣಿಮೆ ಮುಂಗಾರು ಹಂಗಾಮಿನ ಆರಂಭವನ್ನು ಸೂಚಿಸುತ್ತದೆ. ಈ ಹಬ್ಬದ ಬಳಿಕವೇ ಮುಂಗಾರು ಮಳೆ ಆರಂಭವಾಗುವುದು ಎಂದು ನಂಬಲಾಗಿದೆ. ಬೇಸಿಗೆಯ ತಾಪ ಕಳೆದು ಭೂಮಿ ತಂಪಾಗುವುದರಿಂದ ರೈತರು ಬಿತ್ತನೆಗೆ ಕೈಹಾಕಲು ಸಿದ್ಧರಾಗುತ್ತಾರೆ. ಈ ದಿನದಂದು ಬರುವ ಮೃಗಶಿರಾ ಮಳೆಯು ಹೊಲಗಳನ್ನು ಉತ್ತು-ಬಿತ್ತುವ ಚಟುವಟಿಕೆಗೆ ಹಸಿರು ನಿಶಾನೆ ನೀಡುತ್ತದೆ.
ರೈತರ ಬದುಕಿನ ಅವಿಭಾಜ್ಯ ಅಂಗವಾಗಿರುವ ಎತ್ತುಗಳು ವರ್ಷವಿಡೀ ಕಷ್ಟಪಟ್ಟು ದುಡಿಯುತ್ತವೆ. ಅವುಗಳಿಲ್ಲದೆ ಕೃಷಿ ಅಸಾಧ್ಯ. ಆದ್ದರಿಂದ ಈ ದಿನದಂದು ಎತ್ತುಗಳಿಗೆ ಕೆಲಸದಿಂದ ವಿರಾಮ ನೀಡಿ, ಅವುಗಳನ್ನು ಅಲಂಕರಿಸಿ ಪೂಜಿಸಿ ಕೃತಜ್ಞತೆ ಸಲ್ಲಿಸಲಾಗುತ್ತದೆ. ರೈತನ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವ ಹಬ್ಬಇದಾಗಿದೆ.ಈ ಹಬ್ಬವು ಭೂಮಿಯ ಫಲವತ್ತತೆ, ಉತ್ತಮ ಮಳೆ ಮತ್ತು ಸಮೃದ್ಧ ಬೆಳೆಗಾಗಿ ದೇವರನ್ನು ಪ್ರಾರ್ಥಿಸುವ ಸಂದರ್ಭವೂ ಆಗಿದೆ. ಮುಂಬರುವ ದಿನಗಳಲ್ಲಿ ಕೃಷಿ ಚಟುವಟಿಕೆಗಳು ಚೆನ್ನಾಗಿ ನಡೆಯಲಿ ಎಂಬುದು ರೈತರ ಸಂಕಲ್ಪ.ಈ ದಿನಜೋಳವನ್ನು ಕುಟ್ಟಿ ಮಾಡಿದ ಕಿಚಡಿಯನ್ನು ಮನೆದೇವರಿಗೆ ನೈವೇದ್ಯ ಮಾಡಲಾಗುತ್ತದೆರೈತರ ಮನೆಯಲ್ಲಿನ ಕೃಷಿ ಸಾಮಗ್ರಿಗಳನ್ನು ಸ್ವಚ್ಛಗೊಳಿಸಿ ಅಲಂಕರಿಸಿ ಪೂಜಿಸಲಾಗುತ್ತದೆ
ಎತ್ತುಗಳಿಗೆ ಹೊಸ ಹಗ್ಗ, ಕೊಳಕಣ್ಣಿ (ಕೊರಳಿಗೆ ಕಟ್ಟುವ ಹಗ್ಗ), ಮೂಗುದಾಣ, ಬಾಸಿಂಗ, ಗಾಜುಮಕಡಿ (ಹಣೆಗೆ ಕಟ್ಟುವ ಮಾಲೆ) ಇತ್ಯಾದಿಗಳನ್ನು ಕಟ್ಟಲಾಗುತ್ತದೆಎತ್ತುಗಳ ಕೊಂಬುಗಳಿಗೆ ಬಣ್ಣ, ವಾರ್ನೀಸ್, ಗಾಣದೆಣ್ಣೆ, ಹುರಮಂಜು ಹಚ್ಚಲಾಗುತ್ತದೆಕೃಷಿ ಉಪಕರಣಗಳಾದ ಗೋದಲಿ, ಚಕ್ಕಡಿಗಳಿಗೆ ಎಣ್ಣೆ ಮತ್ತು ಹುರಮಂಜು ಸವರಲಾಗುತ್ತದೆ. ಎತ್ತುಗಳನ್ನು ಚೆನ್ನಾಗಿ ಸ್ನಾನ ಮಾಡಿಸಿ, ಕೊಂಬುಗಳಿಗೆ ಬಣ್ಣ ಹಚ್ಚಿ, ಮೈಮೇಲೆ ವಿವಿಧ ಬಣ್ಣಗಳ ಚಿತ್ತಾರಗಳನ್ನು ಬಿಡಿಸಲಾಗುತ್ತದೆ ಹಣೆಗೆ ಬಾಸಿಂಗ, ಹಣೆಪಟ್ಟಿ, ಕೊರಳಿಗೆ ಘಂಟೆ, ಕೊರಳಿಗೆ ಸುಂದರವಾದ ಕೊರಳಪಟ್ಟಿ (ಫರಾರಿ), ಕಾಲುಗಳಿಗೆ ನಾಲು ಕಟ್ಟಲಾಗುತ್ತದೆ ಎತ್ತುಗಳಿಗೆ ಜೋಳದ ಅಂಬಲಿ, ಗಾಣದೆಣ್ಣೆ, ಅರಿಷಿಣ ಪುಡಿ (ಕೆಲವರು ಕೋಳಿಯ ತತ್ತಿಯನ್ನು ಹಾಕುತ್ತಾರೆ) ಸೇರಿಸಿ ಗೊಟ್ಟದ ಮೂಲಕ ಕುಡಿಸಲಾಗುತ್ತದೆ
ಪೂಜೆ: ಸಿಂಗರಿಸಿದ ಎತ್ತುಗಳಿಗೆ ಮನೆಯಲ್ಲಿ ಆರತಿ ಬೆಳಗಿ, ಪೂಜೆ ಸಲ್ಲಿಸಲಾಗುತ್ತದೆ. ಹೋಳಿಗೆ, ಕಡುಬು, ಪಾಯಸ ಮುಂತಾದ ಸಿಹಿ ಖಾದ್ಯಗಳನ್ನು ತಯಾರಿಸಿ ಎತ್ತುಗಳಿಗೆ ನೈವೇದ್ಯ ಮಾಡಲಾಗುತ್ತದೆ
ಹಬ್ಬದ ಪ್ರಮುಖ ಆಕರ್ಷಣೆಯೆಂದರೆ ಸಿಂಗರಿಸಿದ ಎತ್ತುಗಳ ಮೆರವಣಿಗೆ. ಗ್ರಾಮದ ಮುಖ್ಯ ಬೀದಿಗಳಲ್ಲಿ ವಾದ್ಯಗಳೊಂದಿಗೆ ಎತ್ತುಗಳನ್ನು ಓಡಿಸಲಾಗುತ್ತದೆ. “ಕರಿ ಹರಿಯುವುದು” ಎಂಬ ವಿಶಿಷ್ಟ ಸಂಪ್ರದಾಯ ಈ ಹಬ್ಬದ
ಊರಿನ ಹೊರಗೆ ಒಂದು ಕರಿಯನ್ನು (ದೂರದ ಹುಲ್ಲು ಅಥವಾ ದಾರ) ಕಟ್ಟಲಾಗುತ್ತದೆ
ಮೆರವಣಿಗೆಯಲ್ಲಿ ಯಾವ ಎತ್ತು ಈ ಕರಿಯನ್ನು ಮೊದಲು ದಾಟುತ್ತದೆಯೋ, ಆ ಎತ್ತುಗಳನ್ನು ಪ್ರತಿನಿಧಿಸುವ ಬೆಳೆಗೆ ಆ ವರ್ಷ ಉತ್ತಮ ಫಸಲು ಬರುತ್ತದೆ ಎಂಬ ನಂಬಿಕೆಯಿದೆಕೆಲವೆಡೆ ಬಿಳಿ ಮತ್ತು ಕಂದು ಬಣ್ಣದ ಎತ್ತುಗಳನ್ನು ಓಡಿಸಿ, ಯಾವ ಬಣ್ಣದ ಎತ್ತು ಮೊದಲು ಗುರಿ ತಲುಪುತ್ತದೆಯೋ ಅದೇ ಬಣ್ಣದ ಬೆಳೆಗಳು ಚೆನ್ನಾಗಿ ಬೆಳೆಯುತ್ತದೆ ಎಂದು ರೈತರು ನಂಬುತ್ತಾರೆ
























